ಹಣದ ಜಗತ್ತಿನಲ್ಲಿ ನಾನು ಬದುಕ ಬಯಸಲ್ಲ: ಬಾಲಕ ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಕೊನೆಯ ಸಂದೇಶ ಇದು
ಹಣ ಗಳಿಸುವುದೇ ಜೀವನದ ಪರಮ ಗುರಿ ಎನ್ನುವಂತೆ ಬದುಕುವ ಪೋಷಕರಿಗಿದು ಪಾಠವಾಗ ಬೇಕಾದ ಘಟನೆ. ಹಣ ಸಂಪಾದನೆಯಷ್ಟೇ ಬದುಕಲ್ಲ...

ನವದೆಹಲಿ: ಹಣ ಗಳಿಸುವುದೇ ಜೀವನದ ಪರಮ ಗುರಿ ಎನ್ನುವಂತೆ ಬದುಕುವ ಪೋಷಕರಿಗಿದು ಪಾಠವಾಗ ಬೇಕಾದ ಘಟನೆ. ಹಣ ಸಂಪಾದನೆಯಷ್ಟೇ ಬದುಕಲ್ಲ, ಅದರಾಚೆಗೂ ಒಂದು ಜಗತ್ತಿದೆ. ಜತೆಗೆ ಅಪ್ಪ-ಅಮ್ಮಂದಿರ ಹದಗೆಟ್ಟ ಸಂಬಂಧ ಮಕ್ಕಳ ಮೇಲೆ ಯಾವ ರೀತಿ ಅಳಿಸಲಾಗದ ಗಾಯ ಮಾಡಿಬಿಡುತ್ತದೆ ಎಂದು ಸಾರಿ ಹೇಳುವ ಘಟನೆ ಇದು.
ಅಪ್ಪ, ಅಮ್ಮನಿಂದ ದೂರವಿದ್ದ 13 ವರ್ಷದ ಬಾಲಕನೊಬ್ಬ ಹುಟ್ಟುಹಬ್ಬದ ಮುನ್ನಾ ದಿನವೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದು ನಿಜಕ್ಕೂ ಹೃದಯ ವಿದ್ರಾವಕ ಘಟನೆಯೇ. ಆದರೆ, ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವುದು ಹೊಸದೇನಲ್ಲ. ಮಕ್ಕಳು ಸಣ್ಣಪುಟ್ಟ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಉದಾಹರಣೆಗಳು ಸಾಕಷ್ಟಿವೆ.
ಆದರೆ, ಈ ಪ್ರಕರಣದಲ್ಲಿ ಆತ್ಮಹತ್ಯೆಗೂ ಮುನ್ನ ಬಾಲಕ ಸ್ವರಣಿಮï ಬಿಟ್ಟು ಹೋದ ಕೊನೆಯ ಸಂದೇಶ ಓದಿದರೆ ಎಂಥವರ ಕರುಳೂ ಚುರುಕ್ ಅನ್ನಬೇಕು. ಅದು ``ಸಂಬಂಧಗಳಿಗಿಂತ ಹಣಕ್ಕೇ ಮಹತ್ವ ನೀಡುವ ಈ ಜಗತ್ತಿನಲ್ಲಿ ನಾನು ಬದುಕ ಬಯಸುವುದಿಲ್ಲ''! ಕೊನೆ ಕ್ಷಣದಲ್ಲಿ ಬಾಲಕನ ಸೂಕ್ಷ್ಮ ಮನಸ್ಸನ್ನು ಆವರಿಸಿದ್ದ ಭೌತಿಕ ಜಗತ್ತಿನ ಕುರಿತ ತಿರಸ್ಕಾರ ಹೇಗಿತ್ತು ಎನ್ನುವುದನ್ನು ಕೇವಲ ಈ ಒಂದು ಸಾಲು ಸ್ಪಷ್ಟವಾಗಿ ಹೇಳಿಬಿಡುತ್ತದೆ.
ಒಂಬತ್ತು ವರ್ಷದಿಂದ ಅಜ್ಜ- ಅಜ್ಜಿಯ ಪಾಲನೆಯಲ್ಲೇ ಇದ್ದ ಬಾಲಕನಿಗೆ ಪೋಷಕರ ಕುರಿತು ಬೇಸರವಿತ್ತು. ಈತನ ತಾಯಿ ನಾಳಿನ ಭವಿಷ್ಯಕ್ಕಾಗಿ ದುಬೈನಲ್ಲಿ ದುಡಿಯುತ್ತಿದ್ದರೆ, ವೃತ್ತಿಯಲ್ಲಿ ಫೋಟೋಗ್ರಾಫರ್ರಾದ ತಂದೆ ದೆಹಲಿಯಲ್ಲಿ ಉಳಿದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸ್ವರಣಿಮï ಹಾಗೂ ಆತನ ಸಹೋದರ ಉತ್ತರ-ಪ್ರದೇಶದ ಗಾಝಿಯಾ-ಬಾದ್‍ನ ಅಜ್ಜಿ ಮನೆಯಲ್ಲೇ ಉಳಿದು-ಕೊಂಡಿದ್ದರು.
ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಸಂಬಂಧಿಕರ ಮನೆಗೆ ಬಂದಿದ್ದರು. ಆದರೆ, ಬಾಲಕನಿಗೆ ಅದೇನಾಯಿತೋ ಏನೋ? ನಾಳೆ ಹುಟ್ಟುಹಬ್ಬ. ಜತೆಯಲ್ಲಿದ್ದ ಸಂಬಂಧಿಕರ ಮಕ್ಕಳೆಲ್ಲ ಮಧ್ಯರಾತ್ರಿ ಶುಭಾಶಯ ಹೇಳುವವರೆಗೆ ಚೆನ್ನಾಗಿಯೇ ಇದ್ದ. ಆದರೆ ಆ ನಂತರ ಏನಾಯಿತೋ ಏನೋ? ಬೆಳಗ್ಗೆ ನೋಡುವಾಗ ಫಾ್ಯನ್‍ಗೆ ನೇಣುಹಾಕಿಕೊಂಡಿದ್ದ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


