ದೇಶ

ಪಿಂಚಣಿ ವಿವಾದ: ಆರೆಸ್ಸೆಸ್ ಮಧ್ಯಪ್ರವೇಶ

ಪ್ರಧಾನಿ ಮೋದಿ ಸರ್ಕಾರದ ಸಾಧನೆ, ಎದುಸುತ್ತಿ ರುವ ಸವಾಲುಗಳ ಪರಾಮರ್ಶೆಗಾಗಿ ಆಯೋಜಿಸಲಾಗಿದೆ ಎನ್ನಲಾದ...

Published On :

ನವದೆಹಲಿ: ಪ್ರಧಾನಿ ಮೋದಿ ಸರ್ಕಾರದ ಸಾಧನೆ, ಎದುಸುತ್ತಿ ರುವ ಸವಾಲುಗಳ ಪರಾಮರ್ಶೆಗಾಗಿ ಆಯೋಜಿಸಲಾಗಿದೆ ಎನ್ನಲಾದ ಮೂರು ದಿನಗಳ ಸಂಘ ಪರಿಹಾರ, ಬಿಜೆಪಿ ನಡುವಿನ ಮಹತ್ವದ ಸಮನ್ವಯ ಸಭೆ ಬುಧವಾರ ಆರಂಭವಾಗಿದೆ.

ಮೊದಲ ದಿನ ರಾಮಮಂದಿರ, ಭೂಸ್ವಾಧೀನ ವಿಧೇಯಕ ವಿಚಾರ ಪ್ರಸ್ತಾಪವಾಯಿತಾದರೂ ಮಹತ್ವವಾಗಿ ಚರ್ಚೆಗೆ ಬಂದದ್ದು ಒಆರ್‍ಒಪಿ ವಿಚಾರ ಎಂದು ಮೂಲಗಳು ತಿಳಿಸಿವೆ.

ನಿವೃತ್ತ ಸೇನಾನಿಗಳ ಆಮರಣಾಂತ ನಿರಶನವನ್ನು ಗಂಭೀರವಾಗಿ ಪರಿಗಣಿಸಿರುವ ಆರೆಸ್ಸೆಸ್ ಬಿಹಾರ ಚುನಾವಣೆಯನ್ನು ಗಮನದಲ್ಲಿಟ್ಟು ಕೊಂಡು ಶೀಘ್ರ ಒಆರ್ ಪಿಒ ಬಿಕ್ಕಟ್ಟು ಬಗೆಹರಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದೆ.

ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ಜೋಶಿ ಮತ್ತು ಜಂಟಿ ಪ್ರಧಾನ ಕಾರ್ಯದರ್ಶಿ ಗಳಾದ ದತ್ತಾತ್ರೇಯ ಹೊಸ ಬಾಳೆ, ಕೃಷ್ಣ ಗೋಪಾಲ್ ಅವರು ಒಆರ್‍ಒಪಿ ವಿಚಾರವಾಗಿ ಸಚಿವರ ಜತೆಗೆ ಪ್ರತ್ಯೇಕ ಸಭೆ ನಡೆಸಿದ್ದಾರೆ. ಅಗತ್ಯ ಬಿದ್ದರೆ ಯೋಜನೆ ಜಾರಿ ಯಿಂದಾಗುವ ಹಣಕಾಸು ಹೊರೆಯನ್ನು ನಿಭಾಯಿಸಲು ಆಯೋಗ ವೊಂದನ್ನು ರಚಿಸುವಂತೆಯೂ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.