4 ಮಹಾನಗರಗಳಲ್ಲಿ ಕಾಗದರಹಿತ ಕಾಯ್ದಿರಿಸದ ಟಿಕೆಟ್ ವ್ಯವಸ್ಥೆ ಜಾರಿ
ಟಿಕೆಟ್ ಕೌಂಟರ್ ಗಳಲ್ಲಿ ಗಂಟೆಗಟ್ಟಲೆ ನಿಂತುಕೊಳ್ಳುವುದನ್ನು ತಪ್ಪಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ದೇಶದ ನಾಲ್ಕು...

ನವದೆಹಲಿ: ಟಿಕೆಟ್ ಕೌಂಟರ್ ಗಳಲ್ಲಿ ಗಂಟೆಗಟ್ಟಲೆ ನಿಂತುಕೊಳ್ಳುವುದನ್ನು ತಪ್ಪಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ದೇಶದ ನಾಲ್ಕು ಮಹಾನಗರಗಳಲ್ಲಿ ಭಾರತೀಯ ರೈಲ್ವೆ ಇಲಾಖೆ ತಿಂಗಳ ಕಾಗದರಹಿತ ಸೀಸನ್ ಟಿಕೆಟ್ ಮತ್ತು ಪ್ಲಾಟ್ ಫಾರಂ ಟಿಕೆಟ್ ನ್ನು ಆರಂಭಿಸಲು ಮೊಬೈಲ್ ಅಪ್ಲಿಕೇಶನ್ ಒಂದನ್ನು ಪರಿಚಯಿಸುತ್ತಿದೆ.
ದೆಹಲಿ-ಪಲ್ವಾಲ್ ಉಪನಗರದಲ್ಲಿ ನಿನ್ನೆ ಕಾಗದರಹಿತ ಕಾಯ್ದಿರಿಸದ ಟಿಕೆಟ್ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದ ರೈಲ್ವೆ ಖಾತೆ ಸಚಿವ ಸುರೇಶ್ ಪ್ರಭು, ಈ ವ್ಯವಸ್ಥೆ ಆರಂಭದಲ್ಲಿ ಮುಂಬೈ, ದೆಹಲಿ, ಚೆನ್ನೈ ಮತ್ತು ಕೋಲ್ಕತ್ತಾಗಳಲ್ಲಿ ಇನ್ನು ಕೆಲವು ದಿನಗಳಲ್ಲಿ ಜಾರಿಗೆ ಬರಲಿದೆ ಎಂದು ಹೇಳಿದರು. ಅವರು ಈ ಸಂದರ್ಭದಲ್ಲಿ ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕ್ಯಾಶ್-ಸ್ಮಾರ್ಟ್ ಕಾರ್ಡು ನಿರ್ವಹಣಾ ಟಿಕೆಟ್ ಮಾರಾಟ ಯಂತ್ರಕ್ಕೆ ಮತ್ತು ಸರಕು ಕಾರ್ಯಾಚರಣೆ ಉಸ್ತುವಾರಿ ಪರಿಚಾಲನೆಗೂ ಚಾಲನೆ ನೀಡಿದರು.
ದಕ್ಷಿಣ ರೈಲ್ವೆಯ ಚೆನ್ನೈ-ಎಗ್ಮೋರ್ ಮತ್ತು ತಂಬರಂ ಉಪನಗರ ವಲಯಗಳಿಗೆ ಏಪ್ರಿಲ್ ನಲ್ಲಿ ಮತ್ತು ಪಶ್ಮಿಮ ರೈಲ್ವೆಯ ಚರ್ಚ್ ಗೇಟ್-ದಹನು ರಸ್ತೆ ಉಪನಗರ ವಲಯಗಳಲ್ಲಿ ಜುಲೈಯಲ್ಲಿ ಕಾಗದರಹಿತ ಟಿಕೆಟ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಮುಂಬೈ ನಗರದಲ್ಲಿ ಪ್ರತಿ ತಿಂಗಳು ಸುಮಾರು 75 ಲಕ್ಷ ಜನ ಪ್ರಯಾಣಿಕರು ತಿಂಗಳ ಚಿಕೆಟ್ ಕೊಂಡುಕೊಳ್ಳುತ್ತಾರೆ. ಇವರಿಗೆ ಈ ಮೊಬೈಲ್ ಆಪ್ಲಿಕೇಶನ್ ವ್ಯವಸ್ಥೆ ಉತ್ತಮವಾಗಲಿದೆ ಎಂದರು.
ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯಡಿ ಇದನ್ನು ಜಾರಿಗೆ ತರಲಾಗುತ್ತಿದೆ ಎಂದು ಸುರೇಶ್ ಪ್ರಭು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


