ಆರ್ಎಸ್ಎಸ್-ಬಿಜೆಪಿ ಸಮನ್ವಯ ಸಭೆ ಆರಂಭ
ಆರ್‌ಎಸ್‌ಎಸ್-ಬಿಜೆಪಿ ನಡುವಿನ ಮೂರು ದಿನಗಳ ಕಾಲದ ಮಹತ್ವದ ಸಭೆ ಬುಧವಾರ ಆರಂಭವಾಗಿದ್ದು, ಸಭೆಯಲ್ಲಿ ವಿಹೆಚ್ ಪಿ ನಾಯಕರು ಅಯೋಧ್ಯೆಯಲ್ಲಿ ಅದ್ಧೂರಿ ರಾಮ ಮಂದಿರ ನಿರ್ಮಾಣದ ಕುರಿತಂತೆ ತಮ್ಮ ...

ನವದೆಹಲಿ: ಆರ್‌ಎಸ್‌ಎಸ್-ಬಿಜೆಪಿ ನಡುವಿನ ಮೂರು ದಿನಗಳ ಕಾಲದ ಮಹತ್ವದ ಸಭೆ ಬುಧವಾರ ಆರಂಭವಾಗಿದ್ದು, ಸಭೆಯಲ್ಲಿ ವಿಹೆಚ್ ಪಿ ನಾಯಕರು ಅಯೋಧ್ಯೆಯಲ್ಲಿ ಅದ್ಧೂರಿ ರಾಮ ಮಂದಿರ ನಿರ್ಮಾಣದ ಕುರಿತಂತೆ ತಮ್ಮ ನಿಲುವು ಸ್ಪಷ್ಟಪಡಿಸುವಂತೆ ಬಿಜೆಪಿಗೆ ಆಗ್ರಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಆರ್‌ಎಸ್‌ಎಸ್ ಹಾಗೂ ಬಿಜೆಪಿ ನಡುವಿನ ಈ ಮಹತ್ತರ ಸಭೆಯನ್ನು ಸಮನ್ವಯ ಬೈಠಕ್ ಎಂದು ಕರೆಯಲಾಗುತ್ತಿದ್ದು, ಸಭೆಯ ಮುಖಂಡತ್ವನ್ನು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಹಿಸಿದ್ದಾರೆ. ಸಭೆಯಲ್ಲಿ ಈಗಾಗಲೇ 12 ಹಿರಿಯ ಸಚಿವರು ಭಾಗಿಯಾಗಿದ್ದು, ಸಭೆಗೆ ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಆರಂಭವಾಗಿರುವ ಸಭೆಯಲ್ಲಿ ವಿಹೆಚ್ ಪಿ ನಾಯಕರು ರಾಮ ಮಂದಿರ ನಿರ್ಮಾಣದ ಕುರಿತಂತೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಮಂದಿರ ನಿರ್ಮಾಣ ಕುರಿತಂತೆ ತಮ್ಮ ನಿಲುವು ಸ್ಪಷ್ಟಪಡಿಸಿ ಬಹಿರಂಗ ಹೇಳಿಕೆ ನೀಡುವಂತೆ ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.
ಮೂರು ದಿನಗಳ ಕಾಲ ನಡೆಯುವ ಆರ್ಎಸ್ಎಸ್-ಬಿಜೆಪಿಯ ಈ ಸಮನ್ವಯ ಸಭೆಯಲ್ಲಿ ಧಾರ್ಮಿಕ ಜನಗಣತಿಯ ವರದಿ, ಸಮಾನ ವೇತನ ಹಾಗೂ ಸಮಾನ ಪಿಂಚಣಿ ಯೋಜನೆ, ಎನ್ ಡಿಎ ಸರ್ಕಾರ ಒಂದು ವರ್ಷದ ಸಾಧನೆ ಹಾಗೂ ಸವಾಲುಗಳು, ಮುಂಬರುವ ಬಿಹಾರ ವಿಧಾನಸಭಾ ಚುನಾವಣೆ, ಗುಜರಾತ್ ಪಟೇಲ್ ಸಮುದಾಯ ವಿಚಾರ ಸೇರಿದಂತೆ ಇನ್ನಿತರೆ ಪ್ರಮುಖ ವಿಷಯಗಳ ಕುರಿತಂತೆ ನಾಯಕರು ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


