ದೇಶ

250 ಶಿಕ್ಷಣ ತಜ್ಞರಿಂದ ಪ್ರತಿಭಟನೆ

ದೇಶದಲ್ಲಿನ ಅಸಹಿಷ್ಣುತೆಯ ವಿರುದ್ಧ ಸಿಡಿದೆದ್ದಿರುವ ಲೇಖಕರ, ವಿಚಾರವಾದಿಗಳ, ಕಲಾವಿದರ ಸತ್ರ ಮುಂದುವರಿದಿದ್ದು, ಸೋಮವಾರ ಮತ್ತೆ 250 ಲೇಖಕರು ಜಂಟಿಯಾಗಿ ತಮ್ಮ ಪ್ರತಿಭಟನೆಗಳನ್ನು ದಾಖಲಿಸಿದ್ದಾರೆ...

250 ಶಿಕ್ಷಣ ತಜ್ಞರಿಂದ ಪ್ರತಿಭಟನೆ
ದತ್ತಾತ್ರೇಯ ಹೊಸಬಾಳೆ (ಸಂಗ್ರಹ ಚಿತ್ರ)
Published On :

ನವದೆಹಲಿ: ದೇಶದಲ್ಲಿನ ಅಸಹಿಷ್ಣುತೆಯ ವಿರುದ್ಧ ಸಿಡಿದೆದ್ದಿರುವ ಲೇಖಕರ, ವಿಚಾರವಾದಿಗಳ, ಕಲಾವಿದರ ಸತ್ರ ಮುಂದುವರಿದಿದ್ದು, ಸೋಮವಾರ ಮತ್ತೆ 250 ಲೇಖಕರು ಜಂಟಿಯಾಗಿ ತಮ್ಮ ಪ್ರತಿಭಟನೆಗಳನ್ನು ದಾಖಲಿಸಿದ್ದಾರೆ. ಲೇಖಕರು ಸಂಘವನ್ನು ಪಂಚಿಂಗ್ ಬ್ಯಾಗ್ ನಂತೆ ಬಳಸುತ್ತಿದ್ದಾರೆ ಎಂದು ಆರ್ಎಸ್ಎಸ್ ಕಿಡಿಕಾರಿದೆ.

ದೆಹಲಿ ಯೂನಿವರ್ಸಿಟಿ, ಜೆಎನ್ ಯು, ಅಭಿವೃದ್ಧಿ ಅಧ್ಯಯನ ಮದ್ರಾಸ್ ವಿವಿ, ದೆಹಲಿ ಐಐಟಿ, ಕೋಲ್ಕತ್ತಾ ಐಐಎಂಗಳ ಹಲವಾರು ಪ್ರೊಫೆಸರು ಸೇರಿದಂತೆ 250 ಶಿಕ್ಷಣ ತಜ್ಞರು, ವಿದ್ಯಾಂಸರು ಶುಕ್ರವಾರ ಜಂಟಿ ಹೇಳಿಕೆಯೊಂದನ್ನು ಸಿದ್ಧಪಡಿಸಿದ್ದು, ಅಸಹನೆಯ ಕೃತ್ಯಗಳಿಗೆ ಪ್ರಧಾನಿ ಮೋದಿಯವರ ವಿಳಂಬ ಪ್ರತಿಕ್ರಿಯೆಗೆ ಆಫಾತ ವ್ಯಕ್ತಪಡಿಸಿದ್ದಾರೆ.

ಸಮಾಜ ಶಾಸ್ತ್ರಜ್ಞರು, ವಿದ್ಯಾಂಸರು ಹಾಗೂ ಜವಾಬ್ದಾರಿಯುತ ಪ್ರಜೆಗಳಾಗಿ ನಾವು ದಾದ್ರಿ ಹತ್ಯೆ, ಕಲಬುರ್ಗಿಯಂತ ವಿಚಾರವಾದಿಗಳ ಕಗ್ಗೊಲೆಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತೇವೆ ಹಾಗೂ ಪ್ರತಿಭಟನೆ ದಾಖಲಿಸುತ್ತೇವೆ.

ಶೈಕ್ಷಣಿಕ ಮತ್ತು ಸಾಂವಿಧಾನಿಕ ಸ್ವಾತಂತ್ರ್ಯದ ಮೇಲಿನ ಹಲ್ಲೆ ಖಂಡನೀಯ, ಇದನ್ನು ಮುಕ್ತವಾಗಿ ಉಳಿಸಬೇಕಾದದ್ದು ಸರ್ಕಾರದ ಕರ್ತವ್ಯ. ನಮ್ಮ ದೇಶದಲ್ಲಿ 4693 ಸಮುದಾಯಗಳಿದ್ದು ಪ್ರತಿಯೊಂದಕ್ಕೂ ಅದರದ್ದೇ ಜೀವನ-ವಿಧಾನವಿದೆ.

ಏಕರೀತಿಯ ನಂಬಿಕೆಯನ್ನು ಹೇರುವ ಪ್ರಯತ್ವದಿಂದ ಅಪಾಯಕಾದಿದೆ ಎಂದು ಹೇಳಿಕೆಯಲ್ಲಿ ಎಚ್ಚರಿಸಲಾಗಿದೆ. ಇದಕ್ಕೆ ನಿವೃತ್ತ ಪ್ರೊ.ಇಮ್ತಿಯಾಝ್ ಅಹಮದ್, ರಾಜಕೀಯ ವಿಜ್ಞಾನಿ ಝೋಯಾ ಹಸನ್ ಮತ್ತು ಇತಿಹಾಸಜ್ಞೆ ರೋಮಿಲಾ ಥಾಪರ್ ಮುಂತಾದವರು ಸಹಿ ಹಾಕಿದ್ದಾರೆ.

ಸಂಘ ಪಂಚಿಂಗ್ ಬ್ಯಾಗ್:
ಪ್ರಶಸ್ತಿ ಗಳನ್ನು ಮರಳಿಸುತ್ತಿರುವ ಲೇಖಕರ ನಡೆಯನ್ನು ಆರ್ಎಸ್ಎಸ್ ಪ್ರೇರಣೆಯ ಕೃತ್ಯ ಎಂದು ಕರೆದಿದ್ದು, ಸಂಘವನ್ನು ಅವರು ಪಂಚಿಂಗ್ ಬ್ಯಾಗ್ ನಂತೆ ಬಳಸುತ್ತಿದ್ದಾರೆ ಎಂದು ದೂಷಿಸಿದೆ.

ಈ ಹಿಂದೆ ಗ್ರೋದ್ರಾ ರೈಲು ದುರಂತ ಸಂಭವಿಸಿದಾಗ, ಕಾಶ್ಮೀರಿ ಪಂಡಿತರ ಹತ್ಯೆಯಾದಾಗ ಇವರು ಯಾಕೆ ಮಾತನಾಡಿಲ್ಲ? ಕೆಲವೇ ವ್ಯಕ್ತಿಗಳ ಈ ನಡೆ ಹತಾಶೆಯಿಂದ, ರಾಜಕೀಯ ಪ್ರೇರಣೆಯಿಂದ ಕೂಡಿರುವಂಥದ್ದು, ಅಸಹಿಷ್ಣುತೆಯ ಹೆಸರಿನಲ್ಲಿ ಆರ್ಎಸ್ಎಸ್ ನ್ನು ಪಂಚಿಂಗ್ ಬ್ಯಾಗ್ ನಂತೆ ಬಳಸಿಕೊಳ್ಳಬಹುದೆಂದು ಇವರು ತಿಳಿದಿದ್ದಾರೆ ಎಂದು ಸಂಘಟ ಜಂಟಿ ಮಹಾಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಟೀಕಿಸಿದ್ದಾರೆ.

ಇದು ಎನ್ ಡಿಎ ಆಡಿಳಿತದ ಅವಧಿಯಲ್ಲಿ ಮತೀಯ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಬಿಂಬಿಸಲು ಯೋಜಿತವಾಗಿ ನಡೆಸಲಾಗುತ್ತಿರುವ ದುಷ್ಕೃತ್ಯ. ಆದರೆ ವಾಸ್ತವ ಬೇರೆಯೇ ಆಗಿದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.