ದೇಶ

ಗೀತಾ ಭಾರತಕ್ಕೆ: ರು.1 ಕೋಟಿ ಬೇಡವೆಂದ ಇಧಿ ಪ್ರತಿಷ್ಠಾನ

ಭಾರತದ ಬಾಲಕಿ ಗೀತಾಳನ್ನು ಈವರೆಗೆ ನೋಡಿಕೊಂಡಿದ್ದ ಪಾಕಿಸ್ತಾನದ ಎನ್ ಜಿಒ ಇಧಿ ಫೌಂಡೇಷನ್ ಪ್ರಧಾನಿ ಮೋದಿ ಅವರ ರು.1 ಕೋಟಿಯ ಕೊಡುಗೆಯನ್ನು ನಿರಾಕರಿಸಿದೆ. ಇಧಿ ಫೌಂಡೇಶನ್‍ನ ಅಬ್ದುಲ್ ಸತ್ತಾರ್ ಇಧಿ ಅವರು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ...

ಗೀತಾ ಭಾರತಕ್ಕೆ: ರು.1 ಕೋಟಿ ಬೇಡವೆಂದ ಇಧಿ ಪ್ರತಿಷ್ಠಾನ
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಭಾರತೀಯ ಯುವತಿ ಗೀತಾ (ಸಂಗ್ರಹ ಚಿತ್ರ)
Published On :

ಕರಾಚಿ: ಭಾರತದ ಬಾಲಕಿ ಗೀತಾಳನ್ನು ಈವರೆಗೆ ನೋಡಿಕೊಂಡಿದ್ದ ಪಾಕಿಸ್ತಾನದ ಎನ್ ಜಿಒ ಇಧಿ ಫೌಂಡೇಷನ್ ಪ್ರಧಾನಿ ಮೋದಿ ಅವರ ರು.1 ಕೋಟಿಯ ಕೊಡುಗೆಯನ್ನು ನಿರಾಕರಿಸಿದೆ. ಇಧಿ ಫೌಂಡೇಶನ್‍ನ ಅಬ್ದುಲ್ ಸತ್ತಾರ್ ಇಧಿ ಅವರು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಆದರೆ ರು.1 ಕೋಟಿಯ ಕೊಡುಗೆ ಸ್ವೀಕರಿಸುವುದಿಲ್ಲ ಎಂದಿದ್ದಾರೆ. ಈ ಬಗ್ಗೆ ಮಂಗಳವಾರ ಕರಾಚಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಇಧಿ ಅವರ ಪುತ್ರ ಫೈಸಲ್ ಇಧಿ, ನಮ್ಮ ನಿಯಮದಂತೆ ನಾವು ಪಾಕಿಸ್ತಾನ ಸರ್ಕಾರ ಸೇರಿದಂತೆ ಯಾವುದೇ ಸರ್ಕಾರದಿಂದ ಹಣ ಸಹಾಯವನ್ನು ಪಡೆಯುವುದಿಲ್ಲ.

ಹೀಗಾಗಿ ಭಾರತದ ಪ್ರಧಾನಿ ನೆರವನ್ನೂ ನಿರಾಕರಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಸೋಮವಾರವಷ್ಟೇ ಗೀತಾಳನ್ನು ಭೇಟಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ,ಇದುವರೆಗೆ ಆಕೆಯನ್ನು ನೋಡಿಕೊಂಡಿದ್ದ ಇಧಿ ಅವರ ಪತ್ನಿ ಬಾಲ್ಖಿಸ್ ಬಾನೋ ಅವರಿಗೆ ಧನ್ಯವಾದ ಅರ್ಪಿಸಿದ್ದರು. ಅಲ್ಲದೆ ಇಂಥ ಒಳ್ಲೆಯ ಕೆಲಸ ಮಾಡುತ್ತಿರುವ ಇಧಿ ಫೌಂಡೇಶನ್ ಗೆ ನೆರವಿನ ಹಸ್ತವಾಗಿ ರು.1 ಕೋಟಿ ಕೊಡುವುದಾಗಿ ಘೋಷಿಸಿದ್ದರು. ಇದೇ ವೇಳೆ, ಮಂಗಳವಾರ ಗೀತಾ ಇಂದೋರ್ ಗೆ ಪ್ರಯಾಣ ಬೆಳೆಸಿದ್ದಾಳೆ. ಸದ್ಯಕ್ಕೆ ಆಕೆ ಅಲ್ಲೇ ಇರಲಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.