ಅ.26ಕ್ಕೆ ಗೀತಾ ಭಾರತಕ್ಕೆ
ಪಾಕಿಸ್ತಾನದಲ್ಲಿರುವ ಭಾರತದ ಯುವತಿ ಗೀತಾ ಅ.26ಕ್ಕೆ ಸ್ವದೇಶಕ್ಕೆ ಆಗಮಿಸಲಿದ್ದಾಳೆ. ಇದುವರೆಗೆ ಆ ರಾಷ್ಟ್ರದಲ್ಲಿ ಗೀತಾಳನ್ನು ನೋಡಿಕೊಂಡ ಎಧಿ ಪ್ರತಿಷ್ಠಾನದ ಐವರು ಸದಸ್ಯರು ಆಕೆಯ ಜತೆ ಆಗಮಿಸಲಿದ್ದಾರೆ...

ನವದೆಹಲಿ: ಪಾಕಿಸ್ತಾನದಲ್ಲಿರುವ ಭಾರತದ ಯುವತಿ ಗೀತಾ ಅ.26ಕ್ಕೆ ಸ್ವದೇಶಕ್ಕೆ ಆಗಮಿಸಲಿದ್ದಾಳೆ. ಇದುವರೆಗೆ ಆ ರಾಷ್ಟ್ರದಲ್ಲಿ ಗೀತಾಳನ್ನು ನೋಡಿಕೊಂಡ ಎಧಿ ಪ್ರತಿಷ್ಠಾನದ ಐವರು ಸದಸ್ಯರು ಆಕೆಯ ಜತೆ ಆಗಮಿಸಲಿದ್ದಾರೆ.
ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಶುಕ್ರವಾರ ಈ ಮಾಹಿತಿ ನೀಡಿದ್ದಾರೆ. ಮೂಲಗಳ ಪ್ರಕಾರ ಗೀತಾ ತನ್ನ ಹೆತ್ತವಳನ್ನು ಗುರುತಿಸಿದ್ದಾಳೆ. ಜತೆಗೆ ಕುಟುಂಬದ ಇತರ ಸದಸ್ಯರನ್ನೂ ಗುರುತುಸಿದ್ದಾಳೆ. ಆಕೆ ಏಳು ಅಥವಾ ಎಂಟು ವರ್ಷದವಳಿದ್ದಾಗ ಲಾಹೋರ್ ರೈಲು ನಿಲ್ದಾಣದಲ್ಲಿ ಒಬ್ಬಂಟಿಯಾಗಿ ಕುಳಿದ್ದಳು. ಪೊಲೀಸರು ಆಕೆಯನ್ನು ಎಧಿ ಪ್ರತಿಷ್ಠಾನಕ್ಕೆ ಒಪ್ಪಿಸಿದ್ದರು. ಇತ್ತೀಚೆಗೆ ಇಸ್ಲಾಮಾಬಾದ್‍ನಲ್ಲಿರುವ ಭಾರತದ ಹೈಕಮಿಷನರ್ ಟಿ.ಸಿ.ಎ.ರಾಘವನ್ ಮತ್ತು ಪತ್ನಿ ಗೀತಾ ಜತೆ ಭೇಟಿಯಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


