ದೇಶ

ಗಲ್ಲುಶಿಕ್ಷೆ ಜೀವಾವಧಿಯಾಗಿದ್ದೇ ಹೆಚ್ಚು

ಸ್ವಾತಂತ್ರ್ಯಾನಂತರದ ಭಾರತದಲ್ಲಿ ಸುಮಾರು ಮೂರನೇ ಒಂದರಷ್ಟು ಕ್ಷಮಾದಾನ ಅರ್ಜಿಗಳನ್ನು ಪುರಸ್ಕರಿಸಿ...

ಗಲ್ಲುಶಿಕ್ಷೆ ಜೀವಾವಧಿಯಾಗಿದ್ದೇ ಹೆಚ್ಚು
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ಸ್ವಾತಂತ್ರ್ಯಾನಂತರದ ಭಾರತದಲ್ಲಿ ಸುಮಾರು ಮೂರನೇ ಒಂದರಷ್ಟು ಕ್ಷಮಾದಾನ ಅರ್ಜಿಗಳನ್ನು ಪುರಸ್ಕರಿಸಿ, ಗಲ್ಲುಶಿಕ್ಷೆಯನ್ನು ಜೀವಾವಧಿಗಿಳಿಸಲಾಗಿದೆ. 
5,106 ಅರ್ಜಿಗಳ ಪೈಕಿ, 3534 ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು, 1,572 ಮಂದಿಗೆ ಜೀವದಾನ ನೀಡಲಾಗಿದೆ. ಏಷ್ಯನ್ ಸೆಂಟರ್ ಫಾರ್ ಹ್ಯೂಮನ್ ರೈಟ್ಸ್(ಎಸಿಎಚ್ಆರ್) ತಯಾರಿಸಿದ ಭಾರತದಲ್ಲಿ ಕ್ಷಮಾದಾನ ಅರ್ಜಿಗಳ ಸ್ಥಿತಿಗತಿ ಎಂಬ ವರದಿಯು ಈ ವಿಚಾರಗಳನ್ನು ಬಹಿರಂಗಪಡಿಸಿದೆ. 
ಸಲ್ಲಿಕೆಯಾದ ಕ್ಷಮಾದಾನ ಅರ್ಜಿ ಗಳ ಅಧಿಕೃತ ಮಾಹಿತಿ ಲಭ್ಯವಿಲ್ಲ. ಇದೇ ವೇಳೆ, ಅರ್ಜಿಪರಿಶೀಲನೆ ವೇಳೆ ಅನುಸರಿಸಬೇಕಾದ ಮಾರ್ಗಸೂಚಿಗ ಳನ್ನು ಸರ್ಕಾರ ಹೊರಡಿಸಿದ್ದರೂ, 41 ಪ್ರಕರಣಗಳಲ್ಲಿ, ಮಾರ್ಗಸೂಚಿ ಉಲ್ಲಂಘಿಸಲಾಗಿದೆ. 
ಕೆಲವು ಪ್ರಕರಣ ಗಳಲ್ಲಿ ಸರ್ಕಾರವು, ಕೈದಿಯ ವೈದ್ಯ ಕೀಯ ದಾಖಲೆಗಳನ್ನು ಮರೆಮಾಚಿವೆ, ಮತ್ತೆ ಕೆಲವು ಕಡೆ ಅರ್ಜಿಗಳೇ ಕಳೆದುಹೋ ಗಿವೆ. ಇನ್ನು ಕೆಲ ಬಾರಿ ಜೈಲಲ್ಲೇ ಸಾವನ್ನಪ್ಪಿದವನ ಅರ್ಜಿಯನ್ನೂ ಸರ್ಕಾರ ರಾಷ್ಟ್ರಪತಿಗೆ ಕಳುಹಿಸಿಕೊಟ್ಟ ಉದಾಹರಣೆಗಳಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಜೀವದಾನ
 5,106 1947ರಿಂದ 2015(5815)ರವರೆಗೆ ಗಲ್ಲುಶಿಕ್ಷೆಗೊಳಗಾದವರು ಸಲ್ಲಿಸಿದ ಕ್ಷಮಾದಾನ ಅರ್ಜಿಗಳು
 3,534 ತಿರಸ್ಕರಿಸಲಾದ ಕ್ಷಮಾದಾನ ಅರ್ಜಿಗಳು
 1,572 ಮರಣದಂಡನೆಯಿಂ ದ ಜೀವಾವಧಿಗಿಳಿಸಲಾ ದ ಪ್ರಕರಣಗಳು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.