ದೇಶ

ಇಂದ್ರಾಣಿ ಅಸ್ವಸ್ಥಳಾಗಿದ್ದು ಔಷಧಿಯಿಂದಲ್ಲ, ಬಲಹೀನತೆಯಿಂದ: ಪೊಲೀಸರ ಮಾಹಿತಿ

ಶೀನಾ ಬೋರಾ ಹತ್ಯೆ ಪ್ರಕರಣ ಸಂಬಂಧ ಬಂಧಿತಳಾಗಿರುವ ಇಂದ್ರಾಣಿ ಮುಖರ್ಜಿ ಅಸ್ವಸ್ಥಳಾಗಿದ್ದು ಬಲಹೀನತೆಯಿಂದೆಯೇ ಹೊರತು ಔಷಧಿ ಸೇವನೆಯಿಂದಲ್ಲ ಎಂದು ಪೊಲೀಸರು ಶನಿವಾರ ಮಾಹಿತಿ ನೀಡಿದ್ದಾರೆ...

ಇಂದ್ರಾಣಿ ಅಸ್ವಸ್ಥಳಾಗಿದ್ದು ಔಷಧಿಯಿಂದಲ್ಲ, ಬಲಹೀನತೆಯಿಂದ: ಪೊಲೀಸರ ಮಾಹಿತಿ
ಇಂದ್ರಾಣಿ ಮುಖರ್ಜಿ (ಸಂಗ್ರಹ ಚಿತ್ರ)
Published On :

ಮುಂಬೈ: ಶೀನಾ ಬೋರಾ ಹತ್ಯೆ ಪ್ರಕರಣ ಸಂಬಂಧ ಬಂಧಿತಳಾಗಿರುವ ಇಂದ್ರಾಣಿ ಮುಖರ್ಜಿ ಅಸ್ವಸ್ಥಳಾಗಿದ್ದು ಬಲಹೀನತೆಯಿಂದೆಯೇ ಹೊರತು ಔಷಧಿ ಸೇವನೆಯಿಂದಲ್ಲ ಎಂದು ಪೊಲೀಸರು ಶನಿವಾರ ಮಾಹಿತಿ ನೀಡಿದ್ದಾರೆ.

ಬಂಧಿತ ಇಂದ್ರಾಣಿ ಮುಖರ್ಜಿಯವರ ಅಸ್ವಸ್ಥತೆ ಕುರಿತಂತೆ ಹಲವು ಚರ್ಚೆಗಳು ಎದ್ದಿದ್ದವು. ಅಕ್ಟೋಬರ್ 2 ಅಸ್ವಸ್ಥಗೊಂಡಿದ್ದ ಇಂದ್ರಾಣಿಯವರು ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದು, ಆತ್ಮಹತ್ಯೆ ಮಾಡಿಕೊಳ್ಳಲು ಅತಿಯಾದ ಔಷಧಿಗಳನ್ನು ಸೇವನೆ ಮಾಡಿದ್ದರು ಎಂದು ಹೇಳಲಾಗುತ್ತಿತ್ತು.

ಇದೀಗ ಈ ಅನುಮಾನಗಳಿಗೆ ಪೊಲೀಸರು ತೆರೆ ಎಳೆದಿದ್ದು, ಇಂದ್ರಾಣಿ ಮುಖರ್ಜಿಯವರ ಪರಿಸ್ಥಿತಿಯನ್ನು ತನಿಖೆ ಮಾಡಿದ ನಮಗೆ ತಿಳಿದಿದ್ದು, ಅವರು ಅಸ್ವಸ್ಥಗೊಂಡಿದ್ದು ಕೇವಲ ಬಲಹೀನತೆಯಿಂದಲೇ ಹೊರತು ಅತಿಯಾದ ಔಷಧಿ ಸೇವನೆಯಿಂದಲ್ಲ. ಅವರು ಯಾವುದೇ ವಿಷವನ್ನು ಕುಡಿದಿರಲಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.