ಜಂಗಲ್ ರಾಜ್ ನಿಂದ ಮುಕ್ತರಾಗಲು ವಿಕಾಸ್ ರಾಜ್ ಗೆ ಮತ ಹಾಕಿ: ಮೋದಿ
ಭದ್ರತೆ ನೀಡುವ ಪೊಲೀಸರಿಗೆ ಬಿಹಾರದಲ್ಲಿ ರಕ್ಷಣೆ ಇಲ್ಲ. ಇನ್ನು ಸಾಮಾನ್ಯರ ಕಥೆಯೇನು. ಬಿಹಾರ ರಾಜ್ಯಕ್ಕೆ ಇದೀಗ ಬೇಕಿರುವುದು ವಿಕಾಸ್ ರಾಜ್ ಹೊರತೇ ಜಂಗಲ್ ರಾಜ್ ಅಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಹೇಳಿದ್ದಾರೆ...

ಪಾಟ್ನ: ಭದ್ರತೆ ನೀಡುವ ಪೊಲೀಸರಿಗೆ ಬಿಹಾರದಲ್ಲಿ ರಕ್ಷಣೆ ಇಲ್ಲ. ಇನ್ನು ಸಾಮಾನ್ಯರ ಕಥೆಯೇನು. ಬಿಹಾರ ರಾಜ್ಯಕ್ಕೆ ಇದೀಗ ಬೇಕಿರುವುದು ವಿಕಾಸ್ ರಾಜ್ ಹೊರತೇ ಜಂಗಲ್ ರಾಜ್ ಅಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಹೇಳಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆ ಸಂಬಂಧ ಸಸರಾಂ ನಲ ರ್ಯಾಲಿ ಮಾತನಾಡಿರುವ ಅವರು, ಬಿಹಾರ ರಾಜ್ಯ ಅಭಿವೃದ್ಧಿ ಕಾಣಬೇಕಿದ್ದರೆ ಈ ಬಾರಿಯ ಚುನಾವಣೆಯಲ್ಲಿ ಎನ್ ಡಿಎ ಸರ್ಕಾರಕ್ಕೆ ಮತ ಹಾಕಿ. ಬಿಹಾರ ಅಭಿವೃದ್ಧಿಗಾಗಿ ಇಲ್ಲಿನ ಯುವಜನತೆಯ ಅಭಿವೃದ್ಧಿಗಾಗಿ ಇದೀಗ ನಮ್ಮ ಸರ್ಕಾರ 1,65,000 ಕೋಟಿ ಪ್ಯಾಕೇಜ್ ನ್ನು ಇಲ್ಲಿನ ಜನತೆಗೆ ನೀಡಿದೆ. ಒಂದು ವೇಳೆ ನಮ್ಮ ಸರ್ಕಾರ ಬಿಹಾರದಲ್ಲಿ ಅಧಿಕಾರಕ್ಕೆ ಬಂದಿದ್ದೇ ಆದರೆ, ಇಲ್ಲಿನ ಜನತೆ ಏಳಿಗೆ ಕಾಣಲು ಸಾಕಷ್ಟು ಅವಕಾಶಗಳು ಒದಗಿ ಬಂದಂತಾಗುತ್ತದೆ ಎಂದು ಹೇಳಿದ್ದಾರೆ.
ಬಿಹಾರ ರಾಜ್ಯದಲ್ಲಿ ವಿದ್ಯುತ್ ಕೊರತೆ ಸಮಸ್ಯೆ ದೊಡ್ಡ ಸಮಸ್ಯೆಯಾಗಿ ತಲೆದೋರಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಾಗಿ ಇಲ್ಲಿನ ಜನತೆಗೆ 24*7 ಗಂಟೆಗಳ ಕಾಲ ವಿದ್ಯುತ್ ವ್ಯವಸ್ಥೆ ನೀಡಲು ನಮ್ಮ ಸರ್ಕಾರ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡಿದೆ. ಬಿಹಾರದಲ್ಲಿ ಹೇರಳವಾಗಿ ನೀರಿದೆ. ಇದು ಮೀನುಗಾರರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಮೀನುಗಾರರು ತಮ್ಮ ಮೀನುಗಳನ್ನು ಇತರೆ ದೇಶ ಹಾಗೂ ರಾಜ್ಯಗಳಿಗೆ ಆಮದು ಮಾಡಿದರೆ ಇದರಿಂದ ಅವರು ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ. ಮೀನುಗಾರರು ತಮ್ಮ ಅಭಿವೃದ್ಧಿ ಬಗ್ಗೆ ಏಕೆ ಯೋಚಿಸುವುದಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಜಂಗಲ್ ರಾಜ್ ಕುರಿತಂತೆ ಕಿಡಿಕಾರಿರುವ ಅವರು, ಬಿಹಾರ ರಾಜ್ಯದಲ್ಲಿ ನಿನ್ನೆಯಷ್ಟೇ ಪೊಲೀಸ್ ಅಧಿಕಾರಿಯೊಬ್ಬರ ಹತ್ಯೆಯಾಯಿತು ಇದು ಜಂಗಲ್ ರಾಜ್ ನ ಕೆಲಸಕ್ಕೆ ಉತ್ತಮ ಉದಾಹರಣೆಯಾಗಿದೆ. ಅಪಹರಣ ಮಾಡುವುದು ಹಾಗೂ ಹತ್ಯೆ ಮಾಡುವುದು ಜಂಗಲ್ ರಾಜ್ ಕೆಲಸ ಅದೇ ರೀತಿಯಲ್ಲಿಯೇ ಬಿಹಾರ ರಾಜ್ಯದಲ್ಲಿ ಘಟನೆಗಳು ನಡೆಯುತ್ತಿವೆ. ಬಿಹಾರ ರಾಜ್ಯದಲ್ಲಿ ರಕ್ಷಣೆ ನೀಡುವ ಪೊಲೀಸರಿಗೆ ರಕ್ಷಣೆ ಇಲ್ಲ ಇನ್ನು ಸಾಮಾನ್ಯ ಜನರ ಕಥೆಯೇನು ಎಂದು ಪ್ರಶ್ನಿಸಿದ್ದಾರೆ.
ಜಂಗಲ್ ರಾಜ್ ನ ಬೆದರಿಕೆಯಿಂದ ಮುಕ್ತಗೊಳಿಸಲು ಜನರು ಮೊದಲು ವಿಕಾಸ್ ರಾಜ್ ಎಂಬ ಔಷಧಿಯನ್ನು ಪಡೆಯಬೇಕಿದೆ. ನಿತೀಶ್ ಕುಮಾರ್ ಹಾಗೂ ಲಾಲೂ ಪ್ರಸಾದ್ ಯಾದವ್ ಅವರು ಕಳೆದ 60 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದಾರೆ. ಆದರೆ, ಬಿಹಾರ ರಾಜ್ಯದ ಅಭಿವೃದ್ಧಿಗಾಗಿ ಎಂದಿಗೂ ಒಗ್ಗೂಡದ ಈ ನಾಯಕರು ಇದೀಗ ಚುನಾವಣೆಗೆ ಮಾತ್ರ ಒಗ್ಗಟ್ಟುತನವನ್ನು ತೋರಿಸಲು ಮುಂದಾಗಿದ್ದಾರೆ. ಬಿಹಾರದಲ್ಲಿ ಇದೀಗ ಮಹಾ ಸ್ವಾರ್ಥ ಬಂಧನ ಒಂದು ಕಡೆಯಾಗಿದ್ದರೆ ಮತ್ತೊಂದು ಎನ್ ಡಿಎ ಸರ್ಕಾರ ಇದೆ.
ಲಾಲೂ ಪ್ರಸಾದ್ ಏಕೆ ಚುನಾವಣಾ ಸ್ಪರ್ಧೆಗೆ ಇಳಿಯುತ್ತಿಲ್ಲ. ಅವರನ್ನು ನ್ಯಾಯಾಲಯವೇನಾದರೂ ತಡೆ ಹಿಡಿದಿದೆಯೇ? ಚುನಾವಣೆಗೆ ಸ್ಪರ್ಧಿಸದಿರಲು ಕಾರಣ ಪ್ರಮುಖ ಕಾರಣ ಅವರು ಮಾಡಿರುವ ಹಗರಣ. ಜಿತನ್ ರಾಮ್ ಜೀಯನ್ನು ಅಧಿಕಾರದಿಂದ ಕೆಳಗಿಳಿಸಿ ತಾವು ಮುಖ್ಯಮಂತ್ರಿಯಾಗಲು ನಿತೀಶ್ ಕುಮಾರ್ ಇಲ್ಲಿರುವ ದಲಿತರ ಬೆನ್ನಿಗೆ ಚೂರಿಹಾಕಿದ್ದರು. ಈ ಹಿಂದಿದ್ದ ಸರ್ಕಾರಕ್ಕೆ ಬುದ್ಧಿ ಕಲಿಸಲು ಇದೀಗ ನಿಮಗೆ ಸಮಯ ಬಂದಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


