ಫೈಟರ್ ಪೈಲಟ್ ಗಳಾಗಿ ಮಹಿಳೆಯರ ನೇಮಕ: ವಾಯುಪಡೆ ಮುಖ್ಯಸ್ಥ ಅರೂಪ್ ರಹಾ
ಫೈಟರ್ ಪೈಲಟ್ ಹುದ್ದೆಗಳಿಗೆ ಶೀಘ್ರವೇ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಅರೂಪ್ ರಹಾ ಹೇಳಿದ್ದಾರೆ.

ನವದೆಹಲಿ: ಶೀಘ್ರವೇ ಮಹಿಳೆಯರನ್ನು ಫೈಟರ್ ಪೈಲಟ್ ಗಳನ್ನಾಗಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಅರೂಪ್ ರಹಾ ಹೇಳಿದ್ದಾರೆ.
83 ನೇ ವಾಯುಪಡೆ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಸಾರಿಗೆ ವಿಮಾನ ಮತ್ತು ಹೆಲಿಕಾಪ್ಟರ್ ಗಳಲ್ಲಿ ಮಹಿಳಾ ಪೈಲಟ್ ಗಳನ್ನು ಹೊಂದಿದ್ದೇವೆ, ಅದೇ ಮಾದರಿಯಲ್ಲಿ ಮಹಿಳಾ ಫೈಟರ್ ಪೈಲಟ್ ಗಳನ್ನೂ ನೇಮಕ ಮಾಡಿಕೊಳ್ಳಲಾಗುವುದು ಎಂದು ಅರೂಪ್ ರಹಾ ತಿಳಿಸಿದ್ದಾರೆ. ಹಿಂದೊನ್ ವಾಯು ನೆಲೆಯಲ್ಲಿ ಅ.8 ರಂದು 83 ನೇ ವಾಯುಪಡೆ ದಿನವನ್ನು ಆಚರಿಸಲಾಯಿತು.
ವಾಯುಪಡೆ ಅಧಿಕಾರಿಗಳ ಪ್ರಕಾರ ವಾಯುಪಡೆಯಲ್ಲಿ 300 ಮಹಿಳಾ ಪೈಲಟ್ ಗಳು ಕಾರ್ಯನಿರ್ವಹಿಸುತ್ತಿದ್ದು ಇನ್ನು ಮುಂದೆ ಫೈಟರ್ ಸ್ಟ್ರೀಮ್ ನಲ್ಲಿಯೂ ಮಹಿಳಾ ಪೈಲಟ್ ಗಳ ನೇಮಕವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


