ದೇಶ

ದಾದ್ರಿ ಹತ್ಯೆ ಪ್ರಕರಣ: ಅಖ್ಲಾಕ್ ಕುಟುಂಬಸ್ಥರು ದೆಹಲಿಗೆ ಸ್ಥಳಾಂತರ

ಉತ್ತರ ಪ್ರದೇಶದ ದಾದ್ರಿಯಲ್ಲಿ ಗೋಮಾಂಸ ಸೇವನೆ ಮಾಡಿದ್ದಾರೆಂಬ ಆರೋಪದಲ್ಲಿ ಹಲ್ಲೆಗೊಳಗಾಗಿ ಮೃತ ಪಟ್ಟ ಅಕ್ಲಾಕ್ ಕುಟುಂಬಸ್ಥರು ದೆಹಲಿಗೆ ಸ್ಥಳಾಂತರಗೊಂಡಿದ್ದಾರೆ...

ದಾದ್ರಿ ಹತ್ಯೆ ಪ್ರಕರಣ: ಅಖ್ಲಾಕ್ ಕುಟುಂಬಸ್ಥರು ದೆಹಲಿಗೆ ಸ್ಥಳಾಂತರ
ಅಖ್ಲಾಕ್ ಕುಟುಂಬಸ್ಥರು
Published On :

ನವದೆಹಲಿ: ಉತ್ತರ ಪ್ರದೇಶದ ದಾದ್ರಿಯಲ್ಲಿ ಗೋಮಾಂಸ ಸೇವನೆ ಮಾಡಿದ್ದಾರೆಂಬ ಆರೋಪದಲ್ಲಿ ಹಲ್ಲೆಗೊಳಗಾಗಿ ಮೃತ ಪಟ್ಟ ಅಕ್ಲಾಕ್ ಕುಟುಂಬಸ್ಥರು ದೆಹಲಿಗೆ ಸ್ಥಳಾಂತರಗೊಂಡಿದ್ದಾರೆ.

ಭಾರತೀಯ ವಾಯುಪಡೆ ಮೃತ ಅಖ್ಲಾಕ್ ಕುಟುಂಬವನ್ನು ದೆಹಲಿಯಲ್ಲಿರುವ ವಾಯುನೆಲೆಗೆ ಸ್ಥಳಾಂತರಿಸಿದೆ. ಅಕ್ಲಾಕ್ ಅವರ ಹಿರಿಯ ಮಗ ಭಾರತೀಯ ವಾಯುಪಡೆಯಲ್ಲಿ ಕೆಳಗಿನ ದರ್ಜೆಯ ಟೆಕ್ನಿಷಿಯನ್‌ ಆಗಿದ್ದಾರೆ.

ಇಕ್ಲಾಖ್ ಕುಟುಂಬ ಸೋಮವಾರ ರಾತ್ರಿಯೇ ದಾದ್ರಿಯಿಂದ ದೆಹಲಿಯ ಸುಬ್ರತೊ ಪಾರ್ಕ್‌ಗೆ ಸ್ಥಳಾಂತರಗೊಂಡಿದೆ. ಇಕ್ಲಾಖ್ ಕುಟುಂಬವನ್ನು ದೆಹಲಿಗೆ ಸ್ಥಳಾಂತರಿಸಲು ಇರುವ ಸಾಧ್ಯತೆಗಳನ್ನು ಪರಿಶೀಲಿಸುತ್ತಿರುವುದಾಗಿ ‘ಐಎಎಫ್‌’ ಮುಖ್ಯಸ್ಥ ಅರೂಪ್‌ ರಾಹ ಅವರು ಅಕ್ಟೋಬರ್‌ 3 ರಂದು ಹೇಳಿದ್ದರು.

ಅಖ್ಲಾಕ್ ನಿಧನದ ನಂತರ, ದಾದ್ರಿಯಲ್ಲಿ ಹೇರಿದ್ದ ನಿಷೇಧ ಉಲ್ಲಂಘಿಸಿದ ಕಾರಣಕ್ಕೆ  ಕೇಂದ್ರ ಸಚಿವ  ಮಹೇಶ್‌ ಶರ್ಮಾ, ಬಿಜೆಪಿ ಮುಖಂಡ ಸಂಗೀತ್‌ ಸೋಮ್‌, ಬಿಎಸ್‌ಪಿ ಮುಖಂಡ ನಸೀಮುದ್ದೀನ್‌ ಸಿದ್ದಿಕಿ, ಹಿಂದೂ ರಕ್ಷಾದಳದ ಓಂಜಿ ಮಹಾರಾಜ್‌ ಮತ್ತು ಪರ್ವೇಜ್‌ ವಿರುದ್ಧ ಸ್ಥಳೀಯ ಜಿಲ್ಲಾಡಳಿತ  ಪ್ರಕರಣ ದಾಖಲಿಸಿಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.