ಬಾವಿಗೆ ಬಿದ್ದ ಹಸುವನ್ನು ರಕ್ಷಿಸಿದ ಮುಸ್ಲಿಂ ಯುವಕ
ಗೋಮಾಂಸ ಸೇವನೆ ಶಂಕೆ ಹತ್ಯೆಯು ಉತ್ತರ ಪ್ರದೇಶದಲ್ಲಿ ಈಗಾಗಲೇ ಸಾಕಷ್ಟು ಸುದ್ದಿ ಮಾಡುತ್ತಿರುವ ಹಿನ್ನೆಲೆಯಲ್ಲೇ ನಿಂದನೆಗೊಳಪಡುತ್ತಿರುವ ಸಮುದಾಯವೊಂದರ ಯುವಕನೊಬ್ಬ ಬಾವಿಗೆ ಬಿದ್ದು ಬದುಕಲು ಹರಸಾಹಸ ಪಡುತ್ತಿದ್ದ ಹಸುವೊಂದನ್ನು ರಕ್ಷಿಸಿರುವ ಘಟನೆಯೊಂದು ಲಖನೌನಲ್ಲಿ ನಡೆದಿದೆ...

ಲಖನೌ: ಗೋಮಾಂಸ ಸೇವನೆ ಶಂಕೆ ಹತ್ಯೆಯು ಉತ್ತರ ಪ್ರದೇಶದಲ್ಲಿ ಈಗಾಗಲೇ ಸಾಕಷ್ಟು ಸುದ್ದಿ ಮಾಡುತ್ತಿರುವ ಹಿನ್ನೆಲೆಯಲ್ಲೇ ನಿಂದನೆಗೊಳಪಡುತ್ತಿರುವ ಸಮುದಾಯವೊಂದರ ಯುವಕನೊಬ್ಬ ಬಾವಿಗೆ ಬಿದ್ದು ಬದುಕಲು ಹರಸಾಹಸ ಪಡುತ್ತಿದ್ದ ಹಸುವೊಂದನ್ನು ರಕ್ಷಿಸಿರುವ ಘಟನೆಯೊಂದು ಲಖನೌನಲ್ಲಿ ನಡೆದಿದೆ.
20ರ ಹರೆಯದ ಮೊಹಮ್ಮದ್ ಜಾಕಿ ಹಸುವನ್ನು ರಕ್ಷಿಸಿದ ಮುಸ್ಲಿಂ ಯುವಕ. ಶನಿವಾರ ಮಧ್ಯಾಹ್ನ ಪೊಲಿಖೇಡ ಪ್ರದೇಶದ ಮಸೀದಿಯೊಂದರಲ್ಲಿ ಪ್ರಾರ್ಥನೆ ಮುಗಿಸಿ ಆ ಹಾದಿಯಲ್ಲಿ ಬರುತ್ತಿದ್ದ ವೇಳೆ ಬಾವಿಯೊಂದರ ಬಳಿ ಸಾಕಷ್ಟು ಜನ ತುಂಬಿದಿದ್ದರು. ಆದರೆ, ಹಸುವನ್ನು ರಕ್ಷಿಸುವ ಬದಲು ಅಲ್ಲಿದ್ದ ಜನರು ಅದನ್ನು ನೋಡುತ್ತಾ ನಿಂತಿದ್ದರು. ಕೆಲವರು ಹಸುವನ್ನು ರಕ್ಷಿಸಲು ಉಪಾಯಗಳ ಬಗ್ಗೆ ಚಿಂತಿಸುತ್ತಿದ್ದರು. ಕ್ರೇನ್ ತರಿಸಲು ಕೆಲವರು ನಿರ್ಧರಿಸಿದ್ದರು. ಹೀಗಾಗಿ ಕ್ರೇನ್ ಬರುವುದಕ್ಕೆ ಕಾಯುತ್ತಿದ್ದರು. ಈ ವೇಳೆ ಹಸುವಿನ ಪ್ರಾಣಕ್ಕೆ ಹಾನಿಯಾಗಬಹುದು ಎಂದು ಆಲೋಚಿಸಿದೆ. ಹೀಗಾಗಿ ಬಾವಿಗಿಳಿದು ನಾನೇ ಹಸುವನ್ನು ರಕ್ಷಿಸಿದೆ ಎಂದು ಜಾಕಿ ಹೇಳಿದ್ದಾನೆ.
ರಕ್ಷಣೆಗೆ ದಾವಿಸಿದ ವೇಳೆ ಹಸು ಬೆದರಿಕೆಯಲ್ಲಿದ್ದಿದ್ದು ಕಂಡು ಬಂದಿತು. ರಕ್ಷಿಸುವ ವೇಳೆ ಹಸು ತನ್ನ ಕಾಲಿನಿಂದ ನನಗೆ ಒದ್ದಿತು. ಅದು ಈಗಲೂ ನೋವನ್ನುಂಟು ಮಾಡುತ್ತಿದೆ ಎಂದು ಹೇಳಿದ್ದಾನೆ.
ಐಶ್ ಭಾಗ್ ನ ಭಾರತ್ ಭಕ್ಕನ್ ಮಿಲ್ ಸಮೀಪದ ನಿವಾಸಿಯೇ ಈ ಝಾಕಿ, ವೃತ್ತಿಯಲ್ಲಿ ಪೈಂಟರ್. “ನನ್ನ ಮಗು ವಿದ್ಯಾವಂತನಲ್ಲ. ಆದರೆ ಪ್ರಾಣಿಯ ಪ್ರಾಣ ರಕ್ಷಣೆಗೆ ಹಿಂದೆ ಮುಂದೆ ನೊಡಲಿಲ್ಲ.” ಎಂದು ಝಾಕಿಯ ತಾಯಿ ಸಲ್ಮಾ ಹೇಳಿದ್ದಾರೆ. “ನನಗೆ ಅವನ ಬಗ್ಗೆ ಭಯವಾಯಿತು. ಆದರೆ ಅದರ ಪ್ರಾಣ ರಕ್ಷಿಸಿದನಲ್ಲ, ಅದು ಸಂತೋಷವನ್ನುಂಟು ಮಾಡಿತು. ಕಳೆದ ವರ್ಷ ಇಲ್ಲಿ ರಾಮಲೀಲಾ ಆಚರಣೆ ನಡೆಯುವಾಗ ಬೆಂಕಿ ದುರಂತ ಸಂಭವಿಸಿತ್ತು. ಪ್ರತಿಮೆಗೆ ಹಚ್ಚಿದ ಬೆಂಕಿ ಕೆಲವು ಮನೆಗಳಿಗೂ ಹಬ್ಬಿತ್ತು. ಆಗಲೂ ಝಾಕಿ ಹಲವಾರು ಮಂದಿಯ ಪ್ರಾಣ ರಕ್ಷಿಸಿದ್ದ” ಎಂದು ಸಲ್ಮಾ ನೆನಪಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


