ದೇಶ

ಬಿಜೆಪಿಯಲ್ಲಿದ್ದಾಗ ನಿತೀಶ್ ವಜ್ರದಂತಿದ್ದರು: ಪ್ರಕಾಶ್ ಜವಡೇಕರ್

ಬಿಜೆಪಿ ಪಕ್ಷದಲ್ಲಿದ್ದಾಗ ನಿತೀಶ್ ಕುಮಾರ್ ಅವರು ವಜ್ರದಂತೆ ಮಿನುಗುತ್ತಿದ್ದರು. ಆದರೆ, ಯಾವಾಗ ಬಿಜೆಪಿ ಬಿಟ್ಟು ಜೆಡಿ (ಯು)ಗೆ ಸೇರಿದರೋ ಅಂದಿನಿಂತ ತಮ್ಮ ಹೊಳಪನ್ನು ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಕಾಶ್ ಜವಡೇಕರ್ ಅವರು ಭಾನುವಾರ ಹೇಳಿದ್ದಾರೆ...

ಬಿಜೆಪಿಯಲ್ಲಿದ್ದಾಗ ನಿತೀಶ್ ವಜ್ರದಂತಿದ್ದರು: ಪ್ರಕಾಶ್ ಜವಡೇಕರ್
ಕೇಂದ್ರ ಸಚಿವ ಪ್ರಕಾಶ್ ಜವಡೇಕರ್ (ಸಂಗ್ರಹ ಚಿತ್ರ)
Published On :

ಮುಂಬೈ: ಬಿಜೆಪಿ ಪಕ್ಷದಲ್ಲಿದ್ದಾಗ ನಿತೀಶ್ ಕುಮಾರ್ ಅವರು ವಜ್ರದಂತೆ ಮಿನುಗುತ್ತಿದ್ದರು. ಆದರೆ, ಯಾವಾಗ ಬಿಜೆಪಿ ಬಿಟ್ಟು ಜೆಡಿ (ಯು)ಗೆ ಸೇರಿದರೋ ಅಂದಿನಿಂತ ತಮ್ಮ ಹೊಳಪನ್ನು ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಕಾಶ್ ಜವಡೇಕರ್ ಅವರು ಭಾನುವಾರ ಹೇಳಿದ್ದಾರೆ.

ಬಿಹಾರ ಚುನಾವಣೆ ಕುರಿತಂತೆ ಇಂದು ಪ್ರತಿಕ್ರಿಯೆ ನೀಡಿರುವ ಅವರು, ನಮ್ಮೊಂದಿಗೆ ನಿತೀಶ್ ಕುಮಾರ್ ಇದ್ದಾಗ ಯಶಸ್ವಿ ವ್ಯಕ್ತಿಯಾಗಿ ವಜ್ರದಂತೆ ಪ್ರಕಾಶಮಾನವಾಗಿ ಮಿನುಗುತ್ತಿದ್ದರು. ಬಿಜೆಪಿಯಲ್ಲಿದ್ದಾಗ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು. ಇದೀಗ ನಾವು ಅವರೊಂದಿಗಿಲ್ಲ. ಹಾಗಾಗಿ ಅವರ ಹೊಳಪು ಕಳೆಗುಂದಿದೆ. ಬಿಹಾರ ಅಭಿವೃದ್ಧಿ ಕ್ಷೇತ್ರದಲ್ಲಿ ನೆಲ ಕಚ್ಚಲು ಕಾಂಗ್ರೆಸ್ ಮತ್ತು     ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರೇ ಪ್ರಮುಖ ಕಾರಣ. ಬಿಹಾರದಲ್ಲಿ ಜಾತಿ ಮತ ನಡೆಯುತ್ತಿದೆ ಎಂದು ಹೇಳಲಾಗುತ್ತಿತ್ತು. ಜನತೆಗೆ ಇದೀಗ ಸತ್ಯದ ಅರಿವಾಗಿದೆ. ಈ ಬಾರಿ ನಡೆಯುವ ಚುನಾವಣೆಯಲ್ಲಿ ಜಾತಿ ಮತ ರಾಜಕಾರಣ ನಡೆಯುವುದಿಲ್ಲ. ಅಭಿವೃದ್ಧಿ ಸರ್ಕಾರಕ್ಕೆ ಮತ ನೀಡಲು ಜನತೆ ಮನಸ್ಸು ಮಾಡಿದ್ದಾರೆ. ಇಲ್ಲಿನ ಯುವ ಜನತೆ ಇದೀಗ ಬಿಜೆಪಿ ಪರವಾಗಿದ್ದು, ಬಿಹಾರದಲ್ಲಿ ಬಿಜೆಪಿ ಬಹುಮತದಿಂದ ಜಯ ಸಾಧಿಸಲಿದೆ ಎಂದು ಹೇಳಿದ್ದಾರೆ.

ಬಿಹಾರದಲ್ಲಿ ಅಕ್ಟೋಬರ್ 12 ರಿಂದ ನವೆಂಬರ್ 5ರವರೆಗೆ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಚುನಾವಣೆಯಲ್ಲಿ ಗೆಲವು ಸಾಧಿಸುವ ಸಲುವಾಗಿ ಎಲ್ಲಾ ಪಕ್ಷಗಳು ಪ್ರಚಾರ ಕಾರ್ಯದತ್ತ ಗಮನ ಹರಿಸಿದ್ದು, ಬಿಜೆಪಿ ನಾಯಕ ಜವಡೇಕರ್ ಸಹ ಮುಂದಿನ ವಾರದಲ್ಲಿ ಗಯಾ ಮತ್ತು ಔರಂಗಾಬಾದ್ ಸೇರಿದಂತೆ ಬಿಹಾರದ ಮೂರು ರಾಜ್ಯಗಳ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.