ದಾದ್ರಿ ಹತ್ಯೆ ಪ್ರಕರಣ: ಏರ್ಫೋರ್ಸ್ ನೆರವು
ದನದ ಮಾಂಸ ತಿಂದಿದ್ದಾರೆಂದು ಆರೋಪಿಸಿ ಉತ್ತರ ಪ್ರದೇಶದ ದಾದ್ರಿಯಲ್ಲಿ ಹತ್ಯೆಗೀಡಾದ ವ್ಯಕ್ತಿಯ ಕುಟುಂಬಕ್ಕೆ ಭಾರತೀಯ ವಾಯುಸೇನೆ ನೆರವಿಗೆ ಮುಂದಾಗಿದೆ...

ಗ್ರೇಟರ್ ನೋಯ್ಡಾ: ದನದ ಮಾಂಸ ತಿಂದಿದ್ದಾರೆಂದು ಆರೋಪಿಸಿ ಉತ್ತರ ಪ್ರದೇಶದ ದಾದ್ರಿಯಲ್ಲಿ ಹತ್ಯೆಗೀಡಾದ ವ್ಯಕ್ತಿಯ ಕುಟುಂಬಕ್ಕೆ ಭಾರತೀಯ ವಾಯುಸೇನೆ ನೆರವಿಗೆ ಮುಂದಾಗಿದೆ.
ಮೃತ ಇಖ್‍ಲಖ್ ಕುಟುಂಬಕ್ಕೆ ನೆರವು ನೀಡಲು ಭಾರತೀಯ ವಾಯುಸೇನೆ ಮುಂದಾಗಿದೆ. ಘಟನೆ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿರುವ ವಾಯುಸೇನಾ ಮುಖ್ಯಸ್ಥ ಅರುಪ್ ರಹಾ, ಸಂತ್ರಸ್ತ ಕುಟುಂಬವನ್ನು ತಕ್ಷಣ ವಾಯುಸೇನೆ ನಿಯಂತ್ರಣದಲ್ಲಿರುವ ಪ್ರದೇಶಕ್ಕೆ ವರ್ಗಾಯಿಸಲಾಗುವುದು. ಅವರಿಗೆ ಏನೆಲ್ಲ ರಕ್ಷಣೆ ಅಗತ್ಯವಿದೆಯೋ ಅದೆಲ್ಲವನ್ನು ನೀಡಲಾಗುವುದು. ನಮ್ಮ ಸಿಬ್ಬಂದಿ ಅವರ ಜತೆಗಿದ್ದಾರೆ ಎಂದು ಸೇನಾ ಮುಖ್ಯಸ್ಥ ಹೇಳಿದ್ದಾರೆ. ಇಖ್‍ಲಖ್ ಹಿರಿಯ ಪುತ್ರ ಮೊಹಮ್ಮದ್ ಸರ್ತಾಜ್ ವಾಯುಸೇನೆಯಲ್ಲಿ ಟೆಕ್ನಿಷಿಯನ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ವಾಯುಸೇನೆ ಅವರ ರಕ್ಷಣೆಗೆ ಮುಂದಾಗಿದೆ.
ವಿಶಾಲ್ ಕೈವಾಡ?
ಹತ್ಯೆ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾದವರನ್ನು ವಿಶಾಲ್ ಹಾಗೂ ಶಿವಂ ಎಂದು ಗುರುತಿಸಲಾಗಿದ್ದು, ಇವರಲ್ಲಿ ವಿಶಾಲ್ ಬಿಜೆಪಿ ಕಾರ್ಯಕರ್ತರೊಬ್ಬರ ಪುತ್ರ. ಘಟನೆ ನಡೆದ ದಿನ ಗ್ರಾಮಸ್ಥರನ್ನು ಎತ್ತಿಕಟ್ಟುವ ಸಭೆ ನಡೆಸಿದ ಹಿಂದೆ ಈತ ಮಹತ್ವದ ಪಾತ್ರವಹಿಸಿದ್ದಾನೆ ಎಂದು ಹೇಳಲಾಗಿದೆ. ಈ ನಡುವೆ ದಾದ್ರಿಗೆ ಭೇಟಿ ನೀಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇಖ್‍ಲಖ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಗ್ರಾಮದಲ್ಲಿ ಕೋಮುಗಲಭೆಯ ಇತಿಹಾಸ ಇಲ್ಲ. ಘಟನೆಯಿಂದ ಅನುಕೂಲವಾಗುವುದು ಪಕ್ಷಗಳು ಮತ್ತು ರಾಜಕೀಯ ನಾಯಕರಿಗೇ ಹೊರತು ಇನ್ಯಾರಿಗೂ ಅಲ್ಲ ಎಂದು ಟೀಕಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


