ದೇಶ

ಹಸು ಯಾರದ್ದು ತಾಯಿಯಲ್ಲ, ಅದೊಂದು ಪ್ರಾಣಿ: ಮಾರ್ಕೆಂಡೆಯ ಕಾಟ್ಜು

ಹಸು ಯಾರ ತಾಯಿಯು ಅಲ್ಲ. ಕೇವಲ ಅದೊಂದು ಪ್ರಾಣಿ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು.....

ಹಸು ಯಾರದ್ದು ತಾಯಿಯಲ್ಲ, ಅದೊಂದು ಪ್ರಾಣಿ: ಮಾರ್ಕೆಂಡೆಯ ಕಾಟ್ಜು
ಮಾರ್ಕೆಂಡೆಯ ಕಾಟ್ಜು
Published On :

ವಾರಣಾಸಿ: ಹಸು ಯಾರ ತಾಯಿಯು ಅಲ್ಲ. ಅದೊಂದು ಕೇವಲ ಪ್ರಾಣಿ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಹೇಳಿದ್ದಾರೆ.

ದಾದ್ರಿ ಹತ್ಯೆ ಪ್ರಕರಣ ರಾಜಕೀಯ ಪ್ರೇರಿತವಾಗಿದೆ ಎಂದ ಅವರು, ಗೋವು ಒಂದು ಪ್ರಾಣಿಯಾಗಿರುವುದರಿಂದ ಯಾರ ತಾಯಿಯು ಆಗಲು ಸಾಧ್ಯವಿಲ್ಲ. ಒಂದು ವೇಳೆ ನಾನು ಗೋಮಾಂಸ ತಿನ್ನಲು ಬಯಸಿದಲ್ಲಿ ತಪ್ಪೇನು? ವಿಶ್ವದಾದ್ಯಂತ ಜನರು ಗೋಮಾಂಸ ಸೇವನೆ ಮಾಡುತ್ತಾರೆ. ನಾನು ತಿನ್ನಬೇಕು ಎಂದು ಬಯಸಿದಲ್ಲಿ ತಡೆಯಲು ಯಾರಿಂದಲೂ ಸಾಧ್ಯವಾಗದು ಎಂದು ತಿಳಿಸಿದ್ದಾರೆ.  

ಬನಾರಸ್ ಹಿಂದು ವಿಶ್ವ ವಿದ್ಯಾಲಯದಲ್ಲಿ ಆಯೋಜಿಸಿದ ಸಭೆಯಲ್ಲಿ ಮಾತನಾಡಿದ ಅವರು ನಾನು ಕೂಡಾ ಗೋಮಾಂಸ ತಿನ್ನುತ್ತೇನೆ ಅದರಲ್ಲಿ ಯಾವ ತಪ್ಪಿಲ್ಲ. ಇದೊಂದು ಕೋಮುವಾದ ರಾಜಕಾರಣದ ಹೇಯ ಕೃತ್ಯವಾಗಿದೆ ಎಂದು ಕಿಡಿಕಾರಿದ್ದಾರೆ.

ಗೋಮಾಂಸ ತಿನ್ನುವವರು ಕೆಟ್ಟ ವ್ಯಕ್ತಿಗಳು. ಗೋಮಾಂಸ ತಿನ್ನದಿರುವ ನಾವುಗಳು ಸಾದು ಸಂತರೇ. ನಾನು ಮುಂಬರುವ ದಿನಗಳಲ್ಲಿ ಕೂಡಾ ಗೋಮಾಂಸ ಸೇವನೆ ಮಾಡುತ್ತೇನೆ ಎಂದು ಘೋಷಿಸಿದ್ದಾರೆ.  ದಾದ್ರಿ ಹತ್ಯೆಯನ್ನು ತೀವ್ರವಾಗಿ ಖಂಡಿಸಿ, ಹತ್ಯೆಯಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.