ದೇಶ

ಶಾಸ್ತ್ರಿಗೆ ಗೌರವ ಸಲ್ಲಿಸದ ಮೋದಿ, ಕಾಂಗ್ರೆಸ್ ಟೀಕೆ

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿಜಯ್ ಘಾಟ್‍ಗೆ ತೆರಳಿ ಲಾಲ್‍ಬಹದ್ದೂರ್ ಶಾಸ್ತ್ರಿಯವರಿಗೆ ಗೌರವ ಸಲ್ಲಿಸಲಿಲ್ಲ. ಪ್ರಧಾನಿಯವರ ಈ ವರ್ತನೆ `ದುರದೃಷ್ಟಕರ' ಎಂದು ಕಾಂಗ್ರೆಸ್ ಟೀಕಿಸಿದೆ.

ಶಾಸ್ತ್ರಿಗೆ ಗೌರವ ಸಲ್ಲಿಸದ ಮೋದಿ, ಕಾಂಗ್ರೆಸ್ ಟೀಕೆ
ಕಾಂಗ್ರೆಸ್ ಮುಖಂಡ ಅಜೆಯ್ ಮಾಕನ್ (ಸಂಗ್ರಹ ಚಿತ್ರ)
Published On :

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿಜಯ್ ಘಾಟ್‍ಗೆ ತೆರಳಿ ಲಾಲ್‍ಬಹದ್ದೂರ್ ಶಾಸ್ತ್ರಿಯವರಿಗೆ ಗೌರವ ಸಲ್ಲಿಸಲಿಲ್ಲ. ಪ್ರಧಾನಿಯವರ ಈ ವರ್ತನೆ `ದುರದೃಷ್ಟಕರ' ಎಂದು  ಕಾಂಗ್ರೆಸ್ ಟೀಕಿಸಿದೆ.

ಶಾಸ್ತ್ರಿ ಭಾರತದ ಪ್ರಧಾನಮಂತ್ರಿಯಾಗಿದ್ದವರು. ಅವರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಕಾಂಗ್ರೆಸ್ ಅಧ್ಯಕ್ಷರು ಎಲ್ಲರೂ ಅಲ್ಲಿಗೆ ತೆರಳಿ ಗೌರವ ಸಲ್ಲಿಸಿರುವಾಗ, ಪ್ರಧಾನಿಗೆ ಏನು ಸಮಸ್ಯೆಯಾಗಿತ್ತೋ ಗೊತ್ತಿಲ್ಲ. ಗಾಂಧಿಯವರ ರಾಜ್ ಘಾಟ್‍ಗೆ ಸಮೀಪದಲ್ಲೇ ಅದು ಇತ್ತು ಎಂದು ಕಾಂಗ್ರೆಸ್ ವಕ್ತಾರ ಅಜಯ್ ಮಾಕನ್ ಟೀಕಿಸಿದರು. ಕಾಂಗ್ರೆಸ್ ಮುಖಂಡ  ಮತ್ತು ಶಾಸ್ತ್ರಿಯವರ ಮಗ ಅನಿಲ್ ಶಾಸ್ತ್ರಿ, ಕಳೆದ ಐವತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರು ವಿಜಯ್ ಘಾಟ್‍ಗೆ ಭೇಟಿ ನೀಡದೆ ಉಳಿದಿದ್ದಾರೆ ಎಂದು ಗುರುತಿಸಿದ್ದಾರೆ.  ಆದರೆ, ಮೋದಿ ಟ್ವಿಟ್ಟರ್‍ನಲ್ಲಿ ಶಾಸ್ತ್ರಿಯವರಿಗೆ ಪ್ರಣಾಮ ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.