ಇಸ್ರೇಲ್ ವೀಸಾ ಕಚೇರಿಗೆ ಬೆಂಕಿ
ಮಹಾತ್ಮ ಗಾಂಧಿ ರಸ್ತೆ ಮಿತ್ತಲ್ ಟವರ್ ನಲ್ಲಿರುವ ಇಸ್ರೇಲ್ ವೀಸಾ ಸಂಗ್ರಹ ಕಚೇರಿ ಬಾಗಿಲಿಗೆ ದುಷ್ಕರ್ಮಿಗಳು ಸೀಮೆ ಎಣ್ಣೆ ಬಾಟಲಿಯನ್ನು ಎಸೆದು ಬೆಂಕಿ ಹಚ್ಚಿರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ..

ಬೆಂಗಳೂರು: ಮಹಾತ್ಮ ಗಾಂಧಿ ರಸ್ತೆ ಮಿತ್ತಲ್ ಟವರ್ ನಲ್ಲಿರುವ ಇಸ್ರೇಲ್ ವೀಸಾ ಸಂಗ್ರಹ ಕಚೇರಿ ಬಾಗಿಲಿಗೆ ದುಷ್ಕರ್ಮಿಗಳು ಸೀಮೆ ಎಣ್ಣೆ ಬಾಟಲಿಯನ್ನು ಎಸೆದು ಬೆಂಕಿ ಹಚ್ಚಿರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.
ಮಿತ್ತಲ್ ಟವರ್‍ನ 6ನೇ ಮಹಡಿಯಲ್ಲಿ ವಿವಿಧ ದೇಶಗಳ ವಿಸಾ ಪ್ರಕ್ರಿಯೇ ನಡೆಸುವ ಕಚೇರಿ ಇದೆ. ಅದರಲ್ಲಿ ಇಸ್ರೇಲ್ ವೀಸಾ ಕಚೇರಿಯು ಇದ್ದು ಕಿಡಿಗೇಡಿಗಳು ಭಾನುವಾರ ರಾತ್ರಿ ಕಚೇರಿಯ ಬಾಗಿಲ ಬಳಿ ಸೀಮೆ ಎಣ್ಣೆಯ ಬಾಟಲಿ ಎಸೆದು ಬೆಂಕಿ ಹಚ್ಚಿದ್ದಾರೆ. ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಕಚೇ ರಿಗೆ ಅಥವಾ ಒಳಗಿದ್ದ ಪಿಠೋಪಕರಣಗಳಿಗೆ ಯಾವುದೇ ಧಕ್ಕೆ ಯಾಗಿಲ್ಲ ಎಂದು ಪೂರ್ವ ವಿಭಾಗ ಡಿಸಿಪಿ ಸತೀಶ್ ಕುಮಾರ್ ತಿಳಿಸಿದ್ದಾರೆ.
ಒಳಗಿನವರ ಕೈವಾಡ?: ಮಿತ್ತಲ್ ಟವರ್ ಅಸೋಸಿಯೇಷನ್, ಮಾಲೀಕರು ಹಾಗೂ ಅಲ್ಲಿನ ಕೆಲ ಸ್ಥಳೀಯರ ನಡುವೆ ಕೆಲವು ವಿಚಾರವಾಗಿ ಕಲಹ ನಡೆಯುತ್ತಿದೆ. ಹೀಗಾಗಿ, ಅಲ್ಲಿರುವ ವ್ಯಕ್ತಿಗಳೇ ಕೃತ್ಯ ಎಸಗಿರಬಹುದು ಅಥವಾ ಆ ಕಟ್ಟಡ ಮಾಲೀಕರ ಉದ್ಯೋಗಿಗಳು ಕೃತ್ಯ ಎಸಗಿರಬಹುದು. ಏಕೆಂದರೆ, ಆ ವ್ಯಕ್ತಿ ಕಟ್ಟಡದಲ್ಲಿ ಖಾಸಗಿ ಬ್ಯಾಂಕ್‍ನ ಡೆಟಾ ಪ್ರೊಸೆಸಿಂಗ್ ಕೇಂದ್ರವನ್ನು ನಡೆಸುತ್ತಿದ್ದಾರೆ.
ಈ ಎಲ್ಲಾ ಕೋನಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಸತೀಶ್ ಕುಮಾರ್ ತಿಳಿಸಿದ್ದಾರೆ. ಇದೇ ಕಚೇರಿಗೆ ಬೆಂಕಿ ಹಚ್ಚುವ ಪ್ರಯತ್ನ 2014ರ ಆಗಸ್ಟ್ 2ರಂದು ನಡೆದಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


