ದೇಶ

ತೃಣಮೂಲ ಕಾಂಗ್ರೆಸ್ ಸದಸ್ಯ ಪಾಕ್‌ ಐಎಸ್‌ಐ ಬೇಹುಗಾರ?

ತೃಣಮೂಲ ಕಾಂಗ್ರೆಸ್‌ ಪಕ್ಷದ ಸದಸ್ಯನೋರ್ವ ಪಾಕಿಸ್ಥಾನದ ಬೇಹುಗಾರಿಕೆ ಸಂಸ್ಥೆ ಐಎಸ್ಐ ಸೇರಿಕೊಂಡಿದ್ದಾನೆಂಬುದು...

ತೃಣಮೂಲ ಕಾಂಗ್ರೆಸ್ ಸದಸ್ಯ ಪಾಕ್‌ ಐಎಸ್‌ಐ ಬೇಹುಗಾರ?
ಸಾಂದರ್ಭಿಕ ಚಿತ್ರ
Published On :

ಕೋಲ್ಕತ್ತ: ತೃಣಮೂಲ ಕಾಂಗ್ರೆಸ್‌ ಪಕ್ಷದ ಸದಸ್ಯನೋರ್ವ ಪಾಕಿಸ್ಥಾನದ ಬೇಹುಗಾರಿಕೆ ಸಂಸ್ಥೆ ಐಎಸ್ಐ ಸೇರಿಕೊಂಡಿದ್ದಾನೆಂಬುದು ಈಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪಕ್ಷಕ್ಕೆ ತೀವ್ರ ಇರಿಸುಮುರಿಸು ಉಂಟುಮಾಡಿದೆ.

ಪಾಕ್‌ ಬೇಹುಗಾರನೆಂದು ಕಂಡು ಬಂದ ಕಾರಣಕ್ಕೆ ಬಂಧಿತನಾಗಿರುವ ಇರ್ಷಾದ್‌ ಅನ್ಸಾರಿ ಭಾರತೀಯ ನೌಕಾಪಡೆಗೆ ಸಮರ ನೌಕೆಗಳನ್ನು ನಿರ್ಮಿಸಿಕೊಡುವ ಗಾರ್ಡನ್‌ ರೀಚ್‌ ಶಿಪ್‌ ಬಿಲ್ಡರ್ ಕಂಪೆನಿಯಲ್ಲಿ ಗುತ್ತಿಗೆ ಕಾರ್ಮಿಕನಾಗಿದ್ದಾನೆ.

ಈತನ ಮಗ ಅಷ್ಫಾಕ್  ಅನ್ಸಾರಿ ಕೂಡ ಪಾಕ್‌ ಬೇಹುಗಾರಿಕೆ ಜಾಲದಲ್ಲಿ ಶಾಮೀಲಾಗಿರುವ ವ್ಯಕ್ತಿ ಎಂದು ಬಂಧಿಸಲ್ಪಟ್ಟಿದ್ದಾನೆ. ಅಷ್ಫಾಕ್ ಅನ್ಸಾರಿ ಯು ಭಾರತೀಯ ಸೇನೆಯ ಅಮೂಲ್ಯ ರಹಸ್ಯ ಮಾಹಿತಿಗಳನ್ನು ಐಎಸ್‌ಐಗೆ ಒದಗಿಸಿರುವುದಾಗಿ ಸಿಎನ್‌ಎನ್‌ ಐಬಿಎನ್‌ ಸುದ್ದಿ ವಾಹಿನಿ ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.