ವಾರಣಾಸಿಯಲ್ಲಿ ನೀರಿನ ಕೊರತೆ; ಕೊಕಾಕೋಲಾ ಸಂಸ್ಥೆಯ ನಿಷೇಧಕ್ಕೆ ಆಗ್ರಹ
ಉತ್ತರ ಪ್ರದೇಶದಲ್ಲಿ ನೀರಿನ ಹಾಹಾಕಾರ ತೀವ್ರಗೊಂಡಿದ್ದು, ಇದಕ್ಕೆ ಕೊಕಾಕೋಲಾ ಸಂಸ್ಥೆಯ ಘಟಕ ಕೂಡ ಕಾರಣ ಎಂದು ಹೇಳಿರುವ ವಾರಣಾಸಿ ಜನತೆ ಸಂಸ್ಥೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ...

ವಾರಣಾಸಿ: ಉತ್ತರ ಪ್ರದೇಶದಲ್ಲಿ ನೀರಿನ ಹಾಹಾಕಾರ ತೀವ್ರಗೊಂಡಿದ್ದು, ಇದಕ್ಕೆ ಕೊಕಾಕೋಲಾ ಸಂಸ್ಥೆಯ ಘಟಕ ಕೂಡ ಕಾರಣ ಎಂದು ಹೇಳಿರುವ ವಾರಣಾಸಿ ಜನತೆ ಸಂಸ್ಥೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯ ಸುಮಾರು 18 ಹಳ್ಳಿಗಳ ಮುಖಂಡರು ಕೊಕಾಕೋಲಾ ಸಂಸ್ಥೆಯ ವಿರುದ್ಧ ಬಂಡಾಯವೆದ್ದಿದ್ದು, ಕೊಕಾಕೋಲಾ ಪಾನೀಯಕ್ಕಾಗಿ ಸಂಸ್ಥೆ ನಿರ್ಮಿಸಿಕೊಂಡಿರುವ ಬೋರ್ ವೆಲ್ ಗಳಿಂದಾಗಿ ವಾರಣಾಸಿಯಲ್ಲಿ ಅಂತರ್ಜಲಮಟ್ಟ ಕುಸಿದಿದೆ. ಇದರಿಂದ ರೈತರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದ್ದು, ನೀರಿಲ್ಲದೆ ಬೆಳೆ ನಾಶವಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕೊಕಾಕೋಲಾ ಸಂಸ್ಥೆ ವಾರಣಾಸಿಯಲ್ಲಿ 1999ರಿಂದ ಕಾರ್ಯನಿರ್ವಹಿಸುತ್ತಿದ್ದು, ಅಂದಿನಿಂದಲೂ ಸುತ್ತಮುತ್ತಲಿನ ರೈತರು ತೀವ್ರ ನೀರಿನ ಹಾಹಾಕಾರ ಎದುರಿಸುತ್ತಿದ್ದಾರೆ.ವಾರಣಾಸಿಯ ಮೆಹದಿ ಗಂಜ್ ಪ್ರದೇಶದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಭಾರತೀಯ ಸಂಪನ್ಮೂಲ ಕೇಂದ್ರ ಎಂಬ ಕ್ಯಾಲಿಫೋರ್ನಿಯಾ ಮೂಲದ ಸಂಸ್ಥೆಯ ಮುಖ್ಯಸ್ಥ ಅಮಿತ್ ಶ್ರೀವಾತ್ಸವ ಅವರು ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿದ್ದಾರೆ. ಇನ್ನು 2011ರಲ್ಲಿ ಕೇಂದ್ರ ಅಂತರ್ಜಲ ಪ್ರಾಧಿಕಾರ ರಚನೆ ಮಾಡಿದ್ದ ಸಮಿತಿಯೂ ಕೂಡ ಈ ಬಗ್ಗೆ ವರದಿ ನೀಡಿದ್ದು, ವರದಿಯಲ್ಲಿ ಕೊಕಾಕೋಲಾ ಸಂಸ್ಥೆ ನಿಯಮವನ್ನು ಗಾಳಿಗೆ ತೂರಿ ನಿಗದಿಗಿಂತ ಅಧಿಕ ಪ್ರಮಾಣದಲ್ಲಿ ಬೃಹತ್ ಬೋರ್ ವೆಲ್ ಗಳ ಮೂಲಕ ನೀರನ್ನು ಸಂಗ್ರಹಿಸುತ್ತಾ ಬಂದಿದೆ ಎಂದು ವರದಿ ನೀಡಿತ್ತು.
ಪ್ರಸ್ತುತ 18 ಗ್ರಾಮಗಳ ಮುಖಂಡರು ರಾಜ್ಯ ಮಾಲಿನ್ಯ ನಿಯಂತ್ರಣ ಇಲಾಖೆಗೆ ಪತ್ರಬರೆದಿದ್ದು, ಇದೇ ಇಲಾಖೆ ಈ ಹಿಂದೆ ಕೊಕಾಕೋಲಾ ಸಂಸ್ಥೆಗೆ ಘಟಕ ಸ್ಥಾಪನೆಗೆ ಪರವಾನಗಿ ನೀಡಿತ್ತು. ಹೀಗಾಗಿ ಗ್ರಾಮಸ್ಥರು ಇಲಾಖೆಯ ವಿರುದ್ಧವೂ ಪ್ರತಿಭಟನೆ ನಡೆಸುತ್ತಿದ್ದಾರೆ. ಒಟ್ಟಾರೆ ಖಾಸಗಿ ಸಂಸ್ಥೆಯ ಹಣದ ದಾಹ ಇದೀಗ ರೈತರ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಎಚ್ಚೆತ್ತುಕೊಂಡಿರುವ ರೈತರು ಸಂಸ್ಥೆಯ ವಿರುದ್ಧ ತಿರುಗಿ ಬಿದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


