ದೇಶ

ಐಎನ್ಎಸ್ ಅರಿಹಂತ್ ಕ್ಷಿಪಣಿ ಪರೀಕ್ಷೆ ಯಶಸ್ವಿ

ಭಾರತೀಯ ನೌಕಾಪಡೆಯ ಪ್ರಮುಖ ಅಸ್ತ್ರಗಳಲ್ಲಿ ಒಂದಾದ ಐಎನ್ಎಸ್ ಅರಿಹಂತ್ ಜಲಾಂತರ್ಗಾಮಿ ನೌಕೆಯಿಂದ ನಡೆಸಿದ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ..

ಐಎನ್ಎಸ್ ಅರಿಹಂತ್ ಕ್ಷಿಪಣಿ ಪರೀಕ್ಷೆ ಯಶಸ್ವಿ
ಐಎನ್ಎಸ್ ಅರಿಹಂತ್ (ಸಂಗ್ರಹ ಚಿತ್ರ)
Published On :

ಬಾಲಸೋರ್: ಭಾರತೀಯ ನೌಕಾಪಡೆಯ ಪ್ರಮುಖ ಅಸ್ತ್ರಗಳಲ್ಲಿ ಒಂದಾದ ಐಎನ್ಎಸ್ ಅರಿಹಂತ್ ಜಲಾಂತರ್ಗಾಮಿ ನೌಕೆಯಿಂದ ನಡೆಸಿದ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.

ಸೇನಾ ಮೂಲಗಳ ಪ್ರಕಾರ ಒಡಿಶಾದ ಬಂಗಾಳಕೊಲ್ಲಿ ತೀರದಲ್ಲಿನ ರಹಸ್ಯ ಪ್ರದೇಶದಲ್ಲಿ ಈ ಕ್ಷಿಪಣಿ ಪ್ರಯೋಗ ನಡೆಸಲಾಗಿದ್ದು, ಬಿಒ5 ಎಂಬ ಹೆಸರಿನ ಕ್ಷಿಪಣಿಯನ್ನು ಪ್ರಯೋಗಿಸಲಾಗಿದೆ ಎಂದು  ತಿಳಿದುಬಂದಿದೆ. ಸುಮಾರು 750 ಕಿ.ಮೀ ಸಾಮರ್ಥ್ಯದ ಕ್ಷಿಪಣಿಯನ್ನು 20 ಮೀಟರ್ ಸಮುದ್ರದಾಳದಲ್ಲಿ ಪ್ರಯೋಗಿಸಲಾಗಿದ್ದು, ಕ್ಷಿಪಣಿ ನಿಗದಿತ ಸಮಯದಲ್ಲಿ ನಿಖರ ಗುರಿ ತಲುಪುವ ಮೂಲಕ  ಪರೀಕ್ಷೆ ಯಶಸ್ವಿಯಾಗಿದೆ. ಈ ಪರೀಕ್ಷೆಯೊಂದಿಗೆ ಜಲಾಂತರ್ಗಾಮಿ ನೌಕೆಗಳ ಮೂಲಕ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಕ್ಷಿಪಣಿ ಉಡಾವಣಾ ತಂತ್ರಜ್ಞಾನ ಹೊಂದಿರುವ ವಿಶ್ವದ ಕೆಲವೇ  ರಾಷ್ಟ್ರಗಳ ಪಟ್ಟಿಗೆ ಭಾರತ ಕೂಡ ಸೇರ್ಪಡೆಯಾಗಿದೆ. ಈ ಹಿಂದೆ ಇಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಅಮೆರಿಕ, ರಷ್ಯಾ, ಫ್ರಾನ್ಸ್, ಬ್ರಿಟನ್ ಮತ್ತು ಚೀನಾ ದೇಶಗಳು ಹೊಂದಿದ್ದವು. ಇದೀಗ ಈ ಪಟ್ಟಿಗೆ ಭಾರತ ಸೇರಿದೆ.

ಪಾಕಿಸ್ತಾನ ಮತ್ತು ಚೀನಾ ತಲೆನೋವಿಗೆ ಕಾರಣವಾದ ಅರಿಹಂತ್
ಇನ್ನು ದಕ್ಷಿಣ ಏಷ್ಯಾದ ಸಮುದ್ರ ಭಾಗದ ಮೇಲೆ ಪ್ರಭುತ್ವ ಸಾಧಿಸಲು ಹವಣಿಸುತ್ತಿರುವ ಚೀನಾ ಮತ್ತು ಪಾಕಿಸ್ತಾನ ರಾಷ್ಟ್ರಗಳ ಮಟ್ಟಿಗೆ ಭಾರತೀಯ ನೌಕಾಪಡೆಯ ಈ ಮಹತ್ವದ ಸಾಧನೆ  ತಲೆನೋವಾಗಿ ಪರಿಣಮಿಸಿದೆ. ಐಎನ್ಎಸ್ ಅರಿಹಂತ್ ನಂತಹ ಅಣುಚಾಲಿತ ಸಬ್‌ಮೆರಿನ್ ಗಳು ಚೀನಾದ ಬಳಿ ಇವೆಯಾದರೂ ಭಾರತ ಕೂಡ ಅದರ ಮಟ್ಟಿಗೆ ಬೆಳೆದಿರುವುದು ಮತ್ತು ತನಗೆ  ಭಾರತ ಪ್ರಬಲ ಪೈಪೋಟಿ ನೀಡುತ್ತಿರುವುದು ಚೀನಾವನ್ನು ಚಿಂತೆಗೀಡುಮಾಡಿದೆ.

ಇನ್ನು ಪಾಕಿಸ್ತಾನದ ಬಳಿಯೂ ಕೆಲ ಅತ್ಯಾಧುನಿಕ ಸಬ್ ಮೆರಿನ್ ಗಳಿದ್ದು, ಪ್ರಸ್ತುತ ಭಾರತ ಬಳಿ ಇರುವ ಐಎನ್ಎಸ್ ಅರಿಹಂತ್ ನಂತೆ ಅಣ್ವಸ್ತ್ರ ಸಿಡಿತಲೆ ಕ್ಷಿಪಣಿಗಳನ್ನು ಸಿಡಿಸುವ  ಸಾಮರ್ಥ್ಯ ಆ ನೌಕೆಗಳಿಗಿಲ್ಲ. ಹೀಗಾಗಿ ಪಾಕಿಸ್ತಾನ ಭಾರತ ಸೇನೆಯಲ್ಲಿನ ಬೆಳವಣಿಗೆಗಳನ್ನು ಕುತೂಹಲದಿಂದ ನೋಡುತ್ತಿದೆ.

2013 ಆಗಸ್ಟ್ ತಿಂಗಳಿನಲ್ಲಿ ದೇಶದ ಮೊದಲ ದೇಶಿ ನಿರ್ಮಿತ ಅಣುಚಾಲಿತ ಸಬ್‌ಮೆರಿನ್ ಐಎನ್ಎಸ್ ಅರಿಹಂತ್ ಅನ್ನು ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿತ್ತು. 2013ಕ್ಕೂ ಮೊದಲು  ಭಾರತದ ಬಳಿ 13 ಜಲಾಂತರ್ಗಾಮಿ ನೌಕೆಗಳಿತ್ತಾದರೂ, ಈ ಸಬ್‌ಮೆರಿನ್‌ಗಳು ದೀರ್ಘಾವಧಿ ವರೆಗೆ ಸಾಗರದಡಿ ಉಳಿಯುವ ಸಾಮರ್ಥ್ಯ ಹೊಂದಿರಲಿಲ್ಲ. ಹೀಗಾಗಿ ಸಮುದ್ರದಾಳದಲ್ಲಿ  ದೀರ್ಘಕಾಲದವರೆಗೆ ಇದ್ದು, ಕಾರ್ಯಾಚರಣೆ ನಡೆಸಬಲ್ಲ ಸಾಮರ್ಥ್ಯ ಹೊಂದಿರುವ ಜಲಾಂತರ್ಗಾಮಿಯ ಅಗತ್ಯತೆ ಭಾರತೀಯ ಸೇನೆಗೆ ಇತ್ತು. ಇದೇ ಕಾರಣಕ್ಕಾಗಿ ಅಣು ಚಾಲಿತ  ಸಬ್‌ಮೆರಿನ್‌ಗಳ ನಿರ್ಮಾಣಕ್ಕೆ ಭಾರತ ಮುಂದಾಗಿತ್ತು. ಇದರ ಪರಿಣಾಮ 2013 ಆಗಸ್ಟ್ ತಿಂಗಳಿನಲ್ಲಿ ದೇಶದ ಮೊದಲ ಅಣು ಚಾಲಿತ ಜಲಾಂತರ್ಗಾಮಿ ನೌಕೆ ನೌಕಾಪಡೆಗೆ  ಸೇರ್ಪಡೆಯಾಯಿತು.

ಐಎನ್‌ಎಸ್ ಅರಿಹಂತ್ ವೈಶಿಷ್ಟ್ಯ

Story image


ಸಿಬ್ಬಂದಿ....................95
ತೂಕ.......................6,000 ಟನ್
ಮೇಲ್ಭಾಗದಲ್ಲಿ ವೇಗ....22-28 ಕಿ.ಮೀ
ಸಮುದ್ರದಾಳದಲ್ಲಿ ವೇಗ......44 ಕಿ.ಮೀ.
ಅಣು ಸ್ಥಾವರ.............85 ಮೆಗಾವ್ಯಾಟ್
ಶಸ್ತ್ರಾಸ್ತ್ರ........30 (12ಎಸ್‌ಎಲ್‌ಬಿಎಂ)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.