ಐಎಸ್ ಸವಾಲು, ಗುಪ್ತಚರಕ್ಕೆ ಹೆಚ್ಚುವರಿ ಬಲ
ಇಸಿಸ್ ನಿಂದ ಭಾರತಕ್ಕೆ ಬೆದರಿಕೆ ಇದೆ ಎಂಬುದನ್ನು ಗೃಹ ಸಚಿವ ರಾಜನಾಥ್ ಸಿಂಗ್ ಒಪ್ಪಿಕೊಂಡಿದ್ದು, ಇದು ನಮಗೆ ದೊಡ್ಡ ಸವಾಲು ಹೌದು. ಉಗ್ರಗಾಮಿ ಸಂಘಟನೆ ಬೆದರಿಕೆ ಬರೀ ಭಾರತಕ್ಕೆ ಸೀಮಿತವಾಗಿಲ್ಲ...

ನವದೆಹಲಿ: ಇಸಿಸ್ ನಿಂದ ಭಾರತಕ್ಕೆ ಬೆದರಿಕೆ ಇದೆ ಎಂಬುದನ್ನು ಗೃಹ ಸಚಿವ ರಾಜನಾಥ್ ಸಿಂಗ್ ಒಪ್ಪಿಕೊಂಡಿದ್ದು, ಇದು ನಮಗೆ ದೊಡ್ಡ ಸವಾಲು ಹೌದು. ಉಗ್ರಗಾಮಿ ಸಂಘಟನೆ ಬೆದರಿಕೆ ಬರೀ ಭಾರತಕ್ಕೆ ಸೀಮಿತವಾಗಿಲ್ಲ. ಇಡೀ ವಿಶ್ವಕ್ಕೇ ಬೆದರಿಕೆ ಇದೆ. ಈ ಸವಾಲನ್ನು ಸಂಘಟಿತವಾಗಿ ಎದುರಿಸಬೇಕಾಗುತ್ತದೆ ಮತ್ತು ಎದುರಿಸುತ್ತೇವೆ ಎಂದು ಮಂಗಳವಾರ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಐಎಸ್ ವಿರುದ್ಧ ಟೊಂಕಕಟ್ಟಿ ನಿಂತಿರುವ ಬ್ರಿಟನ್ ಈಗ ತನ್ನ ಗುಪ್ತಚರ ಸಂಸ್ಥೆಯ ಸಿಬ್ಬಂದಿ ಸಾಮರ್ಥ್ಯವನ್ನು ಶೇ.15ರಷ್ಟು ಹೆಚ್ಚಿಸಲು ಮುಂದಾಗಿದೆ. ಗುಪ್ತಚರ ಏಜೆನ್ಸಿಗಳಲ್ಲಿ ಹೆಚ್ಚುವರಿ 1,900 ಅಧಿಕಾರಿಗಳನ್ನು ನೇಮಕ ಮಾಡಲು ಹಾಗೂ ಬ್ರಿಟಿಷ್ ವಿಶೇಷ ಪಡೆಯ ಸಾಮರ್ಥ್ಯವನ್ನು ಹೆಚ್ಚಿಸಲೆಂದು 2020ರ ವೇಳೆಗೆ 2 ಶತಕೋಟಿ ಪೌಂಡ್‍ಗಳನ್ನು ವೆಚ್ಚ ಮಾಡಲು ನಿರ್ಧರಿಸಲಾಗಿದೆ ಎಂದು ಸ್ವತಃ ಬ್ರಿಟನ್ ಪ್ರಧಾನಿ ಕ್ಯಾಮರೂನ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


