ದೇಶ

ಜನ ಲೋಕಪಾಲ್ ಗಾಗಿ ದೆಹಲಿ ವಿಧಾನಸಭೆಯಲ್ಲಿ ಗದ್ದಲ

ಜನ ಲೋಕಪಾಲ ಕಾಯ್ದೆಯನ್ನು ಮಂಡಿಸುವಂತೆ ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ ಆಗ್ರಹಿಸಿದ್ದರಿಂದ ಚಳಿಗಾಲದ ಅಧಿವೇಶನ ಗದ್ದಲಮಯವಾಗಿತ್ತು.

ಜನ ಲೋಕಪಾಲ್ ಗಾಗಿ ದೆಹಲಿ ವಿಧಾನಸಭೆಯಲ್ಲಿ ಗದ್ದಲ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಜನ ಲೋಕಪಾಲ ಕಾಯ್ದೆಯನ್ನು ಮಂಡಿಸುವಂತೆ ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ ಆಗ್ರಹಿಸಿದ್ದರಿಂದ ಚಳಿಗಾಲದ ಅಧಿವೇಶನ ಗದ್ದಲಮಯವಾಗಿತ್ತು.

ಬಿಜೆಪಿ ಪಕ್ಷದ ಮೂರು ಸದಸ್ಯರ ಮುಖಂಡ ವಿಜೇಂದರ್ ಗುಪ್ತ, ಸರ್ಕಾರ ಲೋಕ ಜನಪಾಲ ಮಸೂದೆಯನ್ನು ಕೂಡಲೆ ಮಂಡಿಸಬೇಕೆಂದು ಗುಡುಗಿದ್ದಾರೆ. ಇನ್ನುಳಿದ ೬೭ ಸದಸ್ಯರು ಆಡಳಿತ ಪಕ್ಷ ಆಮ್ ಆದ್ಮಿ ಪಕ್ಷಕ್ಕೆ ಸೇರಿದವರು.

ಇದು ವಿಧಾನಸಭೆಯ ಮೊದಲ ಅಧಿವೇಶನ, ಶಾಸನಗಳನ್ನು ನಂತರ ಮಂಡಿಸಬಹುದು ಎಂದು ಸ್ಪೀಕರ್ ಹೇಳಿದ್ದಾರೆ.

ಚುನಾವಣಾ ಪ್ರಚಾರ ವೇಳೆಯಲ್ಲಿ ವಚನ ನೀಡಿದ್ದರೂ ಜನ ಲೋಕಪಾಲ ಮಸೂದೆಯನ್ನು ಜಾರಿ ಮಾಡದೆ ಇರುವುದಕ್ಕೆ ಎಎಪಿ ಸರ್ಕಾರ ಕಟು ಟೀಕೆಯನ್ನು ಎದುರಿಸುತ್ತಿದೆ.

ಸರ್ಕಾರದ ಮೂಲಗಳ ಪ್ರಕಾರ ಹೊಸ ಮಸೂದೆಯನ್ನು ಮಂಡಿಸುವ ಬದಲು ಸರ್ಕಾರ ದೆಹಲಿ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರಲಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.