ದೇಶ

ಇ-ಉಗ್ ಶಾಲಾ ಡಿ.25ಕ್ಕೆ ದೇಶಕ್ಕೆ ಅರ್ಪಣೆ: ಸ್ಮೃತಿ ಇರಾನಿ

ಡಿಸೆಂಬರ್ 25ರಂದು ಇ-ಉಗ್ ಶಾಲಾ ಅಭಿಯಾನವನ್ನು ದೇಶಕ್ಕೆ ಸಮರ್ಪಿಸಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ...

ಇ-ಉಗ್ ಶಾಲಾ ಡಿ.25ಕ್ಕೆ ದೇಶಕ್ಕೆ ಅರ್ಪಣೆ: ಸ್ಮೃತಿ ಇರಾನಿ
ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ
Published On :

ಕೋಲ್ಕತ್ತಾ: ಡಿಸೆಂಬರ್ 25ರಂದು ಇ-ಉಗ್ ಶಾಲಾ ಅಭಿಯಾನವನ್ನು ದೇಶಕ್ಕೆ ಸಮರ್ಪಿಸಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ.

ಪದವಿಪೂರ್ವ ಕಲಿಕೆಗೆ ವಿಷಯಗಳು ಡಿಜಿಟಲ್ ರೂಪದಲ್ಲಿ ಸಿಗಲು ಅಭಿಯಾನವನ್ನು ಆರಂಭಿಸಲಾಗುವುದು ಎಂದು ಅವರು ಕೋಲ್ಕತ್ತಾದಲ್ಲಿಂದು ತಿಳಿಸಿದರು.
ನಮ್ಮಲ್ಲಿ ಡಿಜಿಟಲೀಕರಣಗೊಂಡ 29 ಪದವಿಪೂರ್ವ ಪಠ್ಯಪುಸ್ತಕಗಳು, ದೃಶ್ಯ ಸ್ವಯಂ ಮೌಲ್ಯಮಾಪನ ಹಾಳೆಗಳು ಮತ್ತು ಪುಸ್ತಕಗಳು ಸಾಮಾಜಿಕ ಅಧ್ಯಯನ, ವಿಜ್ಞಾನ ಮತ್ತು ಭಾಷೆಗಳಿಗೆ ಸಂಬಂಧಿಸಿವೆ ಎಂದು ಹೇಳಿದರು.

ಪದವಿಪೂರ್ವ ಹಂತದ ಪುಸ್ತಕಗಳನ್ನು ಡಿಜಿಟಲೀಕರಣಗೊಳಿಸಿದ ನಂತರ ಪದವಿ ಶಿಕ್ಷಣ ಹಂತದ ಪುಸ್ತಕಗಳನ್ನು ಡಿಜಿಟಲೀಕರಣಗೊಳಿಸಲಾಗುವುದು. ದೂರದೂರದ ಹಳ್ಳಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಮಕ್ಕಳ ಸೌಕರ್ಯಕ್ಕೆ ಇ-ಪಾಠಶಾಲಾವನ್ನು ಆರಂಭಿಸುವ ಯೋಜನೆ ಕೂಡ ಇದೆ ಎಂದರು. ವಿದ್ಯಾರ್ಥಿಗಳಿಗೆ ಸರ್ಕಾರದ ಮೊದಲ ಸ್ವದೇಶಿ ಆನ್ ಲೈನ್ ಮುಕ್ತ ಕೋರ್ಸ್ ಸ್ವಯಂ ಬಗ್ಗೆ ಹೇಳಿದ ಸಚಿವೆ, ಈ ಕೋರ್ಸ್ ಮುಗಿದ ಬಳಿಕ ದೈಹಿಕ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳಲ್ಲಿ ಸೇರಬಹುದು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.