ದೇಶ

ದೇಶ-ವಿರೋಧಿ ಶಕ್ತಿಗಳಿಗೆ ಜೆಎನ್‍ಯು ಆಶ್ರಯತಾಣ

ಜವಾಹರ್‍ಲಾಲ್ ನೆಹರೂ ವಿಶ್ವವಿದ್ಯಾಲ ಯ(ಜೆಎನ್‍ಯು)ವು ಭಾರತ-ವಿರೋಧಿ ಶಕ್ತಿಗಳಿಗೆ ನೆಲೆ ನೀಡುತ್ತಿದೆ. ಇಲ್ಲಿ ಆಗಾಗ...

ದೇಶ-ವಿರೋಧಿ ಶಕ್ತಿಗಳಿಗೆ ಜೆಎನ್‍ಯು ಆಶ್ರಯತಾಣ
ಜೆಎನ್ ಯು- ಆರ್ ಎಸ್ಎಸ್
Published On :
ನವದೆಹಲಿ: ``ಜವಾಹರ್‍ಲಾಲ್ ನೆಹರೂ ವಿಶ್ವವಿದ್ಯಾಲ ಯ(ಜೆಎನ್‍ಯು)ವು ಭಾರತ-ವಿರೋಧಿ ಶಕ್ತಿಗಳಿಗೆ ನೆಲೆ ನೀಡುತ್ತಿದೆ. ಇಲ್ಲಿ ಆಗಾಗ ದೇಶ ವಿರೋಧಿ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ.'' ಜೆಎನ್‍ಯು ವಿರುದ್ಧ ಇಂತಹುದೊಂದು ಗಂಭೀರ ಆರೋಪ ಹೊರಿಸಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್). 
ತನ್ನ ಮುಖವಾಣಿ ಪಾಂಚಜನ್ಯದ ಲೇಖನದಲ್ಲಿ ಈ ಆರೋಪ ಮಾಡಿರುವ ಆರೆಸ್ಸೆಸ್, 2010ರಲ್ಲಿ ದಂತೇವಾಡ ದಲ್ಲಿ 75 ಮಂದಿ ಸಿಆರ್ ಪಿಎಫ್ ಯೋಧರ ಸಾವನ್ನು ವಿಶ್ವವಿದ್ಯಾಲಯದ ನಕ್ಸಲ್ ಪರ ವಿದ್ಯಾರ್ಥಿ ಸಂಘಟನೆಗಳು ಸಂಭ್ರಮಿಸಿದ್ದರು ಎಂದು ಹೇಳಿದೆ. ``ಜೆಎನ್‍ಯುನಲ್ಲಿ ರಾಷ್ಟ್ರೀಯವಾದವನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ.
ಭಾರತೀಯ ಸಂಸ್ಕೃತಿಯನ್ನು ಕೆಟ್ಟದಾಗಿ ಚಿತ್ರಿಸಲಾಗುತ್ತದೆ. ಕಾಶ್ಮೀರದಿಂದ ಸೇನೆಯನ್ನು ವಾಪಸ್ ಕರೆಸಿದ್ದನ್ನು ಬೆಂಬಲಿಸಲಾಗುತ್ತದೆ. ಒಟ್ಟಿನಲ್ಲಿ ಭಾರತದ ಸಮಗ್ರತೆಹಾಳು ಮಾಡುವುದೇ ಇವರ ಉದ್ದೇಶ'' ಎಂದು ಆರೋಪಿಸಲಾಗಿದೆ. 
ಆರೆಸ್ಸೆಸ್ ಹೇಳಿಕೆಗೆ ಖಂಡನೆ: ಆರೆಸ್ಸೆಸ್ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಜೆಎನ್‍ಯು, ಇದು ಪ್ರತಿಗಾಮಿ ಹೇಳಿಕೆ ಎಂದಿದೆ. ಎನ್‍ಇಟಿಯೇತರ ಫೆಲೋಶಿಪ್ ರದ್ದುಗೊಳಿಸುವ ಸರ್ಕಾರದ ನಿರ್ಧಾರದ ವಿರುದ್ಧ ರಾಷ್ಟ್ರಮಟ್ಟದಚಳವಳಿಗೆ ವಿದ್ಯಾರ್ಥಿಗಳು ಮುಂದಾಗಿರುವಾಗಲೇ ಆರೆಸ್ಸೆಸ್ ಇಂತಹ ಆರೋಪ ಮಾಡಿರುವುದು ಅದರ ಉದ್ದೇಶವನ್ನು ತಿಳಿಸುತ್ತದೆ ಎಂದೂ ಹೇಳಿದೆ ವಿದ್ಯಾರ್ಥಿ ಸಂಘಟನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.