ದೇಶ

ಸ್ವೀಡನ್ ಪತ್ರಿಕೆ ವಿರುದ್ಧ ಕೇಂದ್ರ ಆಕ್ರೋಶ

ಬೋಫೋರ್ಸ್ ಫಿರಂಗಿ ಖರೀದಿ ಅವ್ಯವಹಾರ ಭಾರತದ ಕೋರ್ಟ್‍ಗಳಲ್ಲಿ ಸಾಬೀತಾಗಿಲ್ಲ. ಮಾಧ್ಯಮಗಳೇ ಅದನ್ನು ವಿವಾದವಾಗಿಸಿದವು...

ಸ್ವೀಡನ್ ಪತ್ರಿಕೆ ವಿರುದ್ಧ ಕೇಂದ್ರ ಆಕ್ರೋಶ
ಪ್ರಣಬ್ ಮುಖರ್ಜಿ
Published On :

ನವದೆಹಲಿ: ಬೋಫೋರ್ಸ್ ಫಿರಂಗಿ ಖರೀದಿ ಅವ್ಯವಹಾರ ಭಾರತದ ಕೋರ್ಟ್‍ಗಳಲ್ಲಿ ಸಾಬೀತಾಗಿಲ್ಲ. ಮಾಧ್ಯಮಗಳೇ ಅದನ್ನು ವಿವಾದವಾಗಿಸಿದವು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದನ್ನು ಪ್ರಕಟಿಸಿದ ಸ್ವೀಡನ್ ಪತ್ರಿಕೆ ವಿರುದ್ಧ  ಕೇಂದ್ರ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದೆ.

ಸ್ಟಾಕ್‍ಹೋಮ್ ನಲ್ಲಿರುವ ಭಾರತೀಯ ರಾಯಭಾರಿ ಬನಶ್ರೀಬೋಸ್ ಹ್ಯಾರಿ ಸನ್ ಪತ್ರಿಕೆಯ ಪ್ರಧಾನ ಸಂಪಾದಕರಿಗೆ ಪತ್ರ ಬರೆದಿದ್ದಾರೆ. ವಿವಾದಿತ ಹಗರಣದ ಬಗ್ಗೆ ಬಾಯಿತಪ್ಪಿ ರಾಷ್ಟ್ರಪತಿ ಆಡಿರುವ ಮಾತುಗಳನ್ನು ಯಾಕಾಗಿ ಪ್ರಕಟಿಸಬೇಕಿತ್ತು. ಇದರಿಂದಾಗಿ ಕೇಂದ್ರ ಸರ್ಕಾರ ಅಸಮಾಧಾನಗೊಂಡಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಪತ್ರಿಕೆ ಪ್ರಕಟಿಸಿರುವ ಸಂದರ್ಶನದಲ್ಲಿ ರಾಷ್ಟ್ರಪತಿ ಉಲ್ಲೇಖಿಸದೇ ಇರುವ ವಿಚಾರವನ್ನು ಪ್ರಕಟಿಸಲಾಗಿದೆ. ಇದು ವೃತ್ತಿಪರ ನಿರ್ಧಾರವಲ್ಲ ಮತ್ತು ಪತ್ರಿಕಾ ಧರ್ಮಕ್ಕೆ ಒಳಪಟ್ಟದ್ದಲ್ಲ ಎಂದು ಕೇಂದ್ರ ಸರ್ಕಾರ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದೆ.

ಭಾರತದ ರಾಷ್ಟ್ರಪತಿ ಮೊದಲ ಬಾರಿಗೆ ಸ್ಪೀಡನ್ ಗೆ ಭೇಟಿ ನೀಡುತ್ತಿದ್ದಾರೆ. ಆ ವಿಚಾರಕ್ಕೆ ಹೆಚ್ಚು ಪ್ರಚಾರ ಕೊಡಬಹುದಾಗಿತ್ತು. ಆದರೆ ಅದನ್ನು ಪತ್ರಿಕೆ ಗೌಣಗೊಳಿಸಿದೆ ಎಂದು ರಾಷ್ಟ್ರಪತಿ ಭವನದಿಂದ ಹೊರಡಿಸಲಾಗಿರುವ ಖಂಡನಾ ಹೇಳಿಕೆಯಲ್ಲಿಯೂ ಉಲ್ಲೇಖಿಸಲಾಗಿದೆ.  ಈ ನಡುವೆ ಕೇಂದ್ರ ವಿದೇಶಾಂಗ ಇಲಾಖೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರವಾಸದ ವಿವರಗಳನ್ನು ಅಧಿಕೃತವಾಗಿ ಪ್ರಕಟಿಸಿದೆ. ಅದರ ಪ್ರಕಾರ ಮೇ 31 ರಿಂದ ಜೂನ್ 2 ರವರೆಗೆ ಸ್ವೀಡನ್ ಪ್ರವಾಸ ಕೈಗೊಳ್ಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.