ದೇಶ

ಅಪಾಯಕಾರಿ ನಗರಗಳಲ್ಲಿ ಭಾರತದ 64 ನಗರಗಳು!

ಜಾಗತಿಕ ಅಪಾಯದ ವಿಶ್ಲೇಷಣೆ ಸಂಸ್ಥೆ ನಡೆಸಿರುವ ಸಂಶೋಧನೆಯ ಪ್ರಕಾರ ಭಾರತದ 64 ನಗರಗಳಿಗೆ ಭಯೋತ್ಪಾದಕರ ಬೆದರಿಕೆಯಿದ್ದು, ಈ ನಗರಗಳು ಹೆಚ್ಚು ಅಪಾಯಕಾರಿಗಳಾಗಿವೆ ಎಂದು ಹೇಳಿದೆ...

ಅಪಾಯಕಾರಿ ನಗರಗಳಲ್ಲಿ ಭಾರತದ 64 ನಗರಗಳು!
ವಿಶ್ವದ ಅತೀ ಹೆಚ್ಚು ಅಪಾಯಕಾರಿ ನಗರಗಳ ಪಟ್ಟಿಯಲ್ಲಿದೆ ಬೆಂಗಳೂರು ನಗರ
Published On :

ನವದೆಹಲಿ: ಜಾಗತಿಕ ಅಪಾಯದ ವಿಶ್ಲೇಷಣೆ ಸಂಸ್ಥೆ ನಡೆಸಿರುವ ಸಂಶೋಧನೆಯ ಪ್ರಕಾರ ಭಾರತದ 64 ನಗರಗಳಿಗೆ ಭಯೋತ್ಪಾದಕರ ಬೆದರಿಕೆಯಿದ್ದು, ಈ ನಗರಗಳು ಹೆಚ್ಚು ಅಪಾಯಕಾರಿಗಳಾಗಿವೆ ಎಂದು ಹೇಳಿದೆ.

ವಿಶ್ವದ ಅತೀ ಹೆಚ್ಚು ಅಪಾಯಕಾರಿ ನಗರಗಳ ಕುರಿತಂತೆ ಜಾಗತಿಕ ಅಪಾಯದ ವಿಶ್ಲೇಷಣೆ ಸಂಸ್ಥೆ (global risk analytics company Verisk Maplecroft) ಸಂಶೋಧನೆಯ ಪ್ರಕಾರ ಅತೀ ಹೆಚ್ಚು ಅಪಾಯದಲ್ಲಿರುವ ನಗರಗಳಲ್ಲಿ ಇರಾಕ್ ನ ಒಟ್ಟು 6 ನಗರಗಳು ಸ್ಥಾನ ಪಡೆದಿದ್ದು, ಬಾಗ್ದಾದ್ ಗೆ ಮೊದಲನೇ ಸ್ಥಾನ, ಮೊಸೂಲ್ 2, ಅಲ್ ರಮಡಿ 3, ಬಕುಬಹ್ 4 ಕಿರ್ಕುಕ್ 5, ಅಲ್ ಹಿಲ್ಲಾಹ್ 6ನೇ ಸ್ಥಾನ ಪಡೆದಿದೆ. ಇನ್ನು ಪಾಕಿಸ್ತಾನದ ಪೇಶಾವರ 7, ಕ್ವೆಟ್ಟಾ 9, ಹಸ್ಸು ಖೇಲ್ ನಗರ 10ನೇ ಸ್ಥಾನ ಪಡೆದಿದ್ದು, 8ನೇ ಸ್ಥಾನದಲ್ಲಿ ಲಿಬಿಯಾದ ಬೆಂಗಾಜಿ ಇದೆ.

ಇವಿಷ್ಟು ವಿಶ್ವದ ಇತರೆ ನಗರಗಳಾದರೆ ಇನ್ನು ಭಾರತದಲ್ಲಿನ 64 ನಗರಗಳು ಕೂಡ ಅಪಾಯದ ನಗರಗಳ ಪಟ್ಟಿಗೆ ಸೇರಿದೆ. ಪ್ರಮುಖವಾಗಿ ಇಂಫಾಲ 32ನೇ ಸ್ಥಾನ ಹಾಗೂ ಶ್ರೀನಗರ 49 ಸ್ಥಾನ ಪಡೆದು ಕೊಂಡಿದ್ದು, ಭಾರತದಲ್ಲಿ ಅತೀ ಹೆಚ್ಚು ಅಪಾಯದಲ್ಲಿರುವ ನಗರಗಳಾಗಿವೆ. ಇನ್ನು ಚೆನ್ನೈ 176 ನೇ ಸ್ಥಾನ ಪಡೆದಿದ್ದು, ಅಪಾಯದ ಮಧ್ಯಮ ಮಟ್ಟದಲ್ಲಿರುವ ನಗರವಾಗಿದೆ.

ಇನ್ನುಳಿದಂತೆ ದೆಹಲಿ 447, ಮುಂಬೈ 298, ಕೋಲ್ಕತಾ 212, ನಾಗ್ಪುರ 210, ಹೈದರಾಬಾದ್ 207, ಪುಣೆ 206, ಬೆಂಗಳೂರು 204ನೇ ಸ್ಥಾನ ಪಡೆದಿದ್ದು, ಅಪಾಯದ ಮಟ್ಟ ಕಡಿಮೆ ಹೊಂದಿರುವ ನಗರಗಳಾಗಿವೆ ಎಂದು ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.