ದೇಶ

ಜಯಾ ಪ್ರಮಾಣಕ್ಕಿಲ್ಲ ಅಡ್ಡಿ

ತಮಿಳುನಾಡಿನ ಮುಖ್ಯಮಂತ್ರಿಯeಗಿ ಜೆ.ಜಯಲಲಿತಾ ಅವರ ಪ್ರಮಾಣ ವಚನ ಸ್ವೀಕಾರಕ್ಕೆ ತಡೆ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ಯನ್ನು ರಾಜ್ಯ ಹೈಕೋರ್ಟ್ ವಜಾಗೊಳಿಸಿದೆ.

ಜಯಾ ಪ್ರಮಾಣಕ್ಕಿಲ್ಲ ಅಡ್ಡಿ
ಜಯಲಲಿತಾ
Published On :

ಬೆಂಗಳೂರು: ತಮಿಳುನಾಡಿನ ಮುಖ್ಯಮಂತ್ರಿಯeಗಿ ಜೆ.ಜಯಲಲಿತಾ ಅವರ ಪ್ರಮಾಣ ವಚನ ಸ್ವೀಕಾರಕ್ಕೆ ತಡೆ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ಯನ್ನು ರಾಜ್ಯ ಹೈಕೋರ್ಟ್ ವಜಾಗೊಳಿಸಿದೆ.

ಇದೇ ಮೇ 23ರಂದು ಜಯಲಲಿತಾ ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಸುದ್ದಿ ತಿಳಿದ ಹಿನ್ನೆಲೆಯಲ್ಲಿ ವಕೀಲ ರವಿರಾಜ್ ಗುರು ರಾಜ್ ಕುಲಕರ್ಣಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ರಜಾಕಾಲದ ವಿಭಾಗೀಯ ಪೀಠದ ನ್ಯಾ.ವೇಣುಗೋಪಾಲ ಗೌಡ ಮತ್ತು ನ್ಯಾ.ಬಿ.ವೀರಪ್ಪ ಅವರಿದ್ದ ವಿಭಾಗೀಯ ಪೀಠ, ಅರ್ಜಿದಾರರು ಕೇವಲ ಪ್ರಚಾರದ ಉದ್ದೇಶಕ್ಕಾಗಿ ಪಿಐಎಲ್ ದಾಖಲಿಸಿದ್ದಾರೆ. ದಾಖಲಾಗಿರುವ ಪಿಐಎಲ್ ಅರ್ಜಿ ಸಂಪೂರ್ಣ ದುರುದ್ದೇಶದಿಂದ ಕೂಡಿದ್ದು, ಕಾನೂನಿನ ದುರ್ಬಳಕೆ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟು ಅರ್ಜಿದಾರರಿಗೆ ರು.25 ಸಾವಿರ ದಂಡ ವಿಧಿಸಿ ಅರ್ಜಿ ವಜಾಗೊಳಿಸಿದೆ.

ವಿಚಾರಣೆ ವೇಳೆ ವಿಭಾಗೀಯ ಪೀಠ, ಪ್ರತಿವಾದಿ ಜಯಲಲಿತಾ ಕರ್ನಾಟಕದ ನಿವಾಸಿ ಅಥವಾ ರಾಜ್ಯದಲ್ಲಿ ತಮಗೆ ಸೇರಿದ ಯಾವುದೇ ಕಚೇರಿ ಕೂಡ ಹೊಂದಿಲ್ಲ. ಪ್ರಕರಣದಲ್ಲಿ ರಾಜ್ಯ ಸರ್ಕಾರವನ್ನು ಪ್ರತಿವಾದಿಯನ್ನಾಗಿಯೂ ಮಾಡಿಲ್ಲ. ಅರ್ಜಿ ದಾಖಲಿಸುವಾಗಿ ಅಗತ್ಯವಿರುವ ದಾಖಲೆಗಳನ್ನು ಸಹ ಅರ್ಜಿಯಲ್ಲಿ ಲಗತ್ತಿಸಿಲ್ಲ. ಪಿಐಎಲ್ ದಾಖಲಿಸಬೇಕಾದಲ್ಲಿ ಕಡ್ಡಾಯವಾಗಿ
ಇಂತಿಷ್ಟು ಅಂಶಗಳನ್ನು ಪಾಲಿಸಬೇಕೆಂದು ಸುಪ್ರೀಂಕೋರ್ಟ್ ನಿರ್ದೇಶಿಸಿದೆ. ಸುಪ್ರೀಂಕೋರ್ಟ್‍ನ ನಿರ್ದೇಶನದ ಅನುಸಾರ ಈ ಪಿಐಎಲ್ ದಾಖಲು ಮಾಡಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಪ್ರಚಾರದ ಉದ್ದೇಶಕ್ಕಾಗಿ ದಾಖಲಾಗಿರುವ ಅರ್ಜಿ ಇದಾಗಿರುವುದಾಗಿ ಅಭಿಪ್ರಾಯಪಟ್ಟ ನ್ಯಾಯಪೀಠ ಅರ್ಜಿದಾರರಿಗೆ ರು.25 ಸಾವಿರ ದಂಡ ವಿಧಿಸಿ, ನಾಲ್ಕು ವಾರದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನೀಡುವಂತೆ ಆದೇಶಿಸಿದೆ.

ಅರ್ಜಿಯಲ್ಲೇನಿತ್ತು?
ಜಯಲಲಿತಾ ಸೇರಿ ನಾಲ್ವರನ್ನು ಆರೋಪಮುಕ್ತಗೊಳಿಸಿ ಹೈಕೋರ್ಟ್ ಆದೇಶಿಸಿತ್ತು. ಆದರೆ ಪ್ರಕರಣದಲ್ಲಿ ವಿಶೇಷ ಎಸ್‍ಪಿಪಿ ಆಗಿರುವ ಹಿರಿಯ ವಕೀಲ ಬಿ.ವಿ.ಆಚಾರ್ಯ ಹೈಕೋರ್ಟ್ ಆದೇಶದಲ್ಲಿನ ಲೆಕ್ಕಾಚಾರದಲ್ಲಿ ಕೆಲವು ಲೋಪಗಳಿದ್ದು, ಮೇಲ್ಮನವಿ ಸಲ್ಲಿಸಲು ಸೂಕ್ತ ಪ್ರಕರಣ ಇದಾಗಿದೆ ಎಂದು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಈ ಹಂತದಲ್ಲಿ ಜಯಲಲಿತಾ
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಅರ್ಜಿದಾರರು ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಅಲ್ಲದೇ ವಿಐಪಿ ಮತ್ತು ವಿವಿಐಪಿಗಳು ತಪ್ಪೆಸಗಿದ್ದರೂ ಸಹ ಕಾನೂನಿನಿಂದ ಪಾರಾಗಬಹುದು ಎಂಬ ಸಂದೇಶ ಇದರಿಂದ ರವಾನೆ ಆಗುತ್ತದೆ. ವಿವಿಐಪಿಗಳು ತಮ್ಮ ಇಚ್ಛೆಯಂತೆ ಏನು ಬೇಕಾದರೂ ಮಾಡಬಹುದು ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡುತ್ತದೆ. ಆದ್ದರಿಂದ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ತಡೆ ನೀಡಬೇಕೆಂದು ಅರ್ಜಿದಾರರು ಪಿಐಎಲ್‍ನಲ್ಲಿ ಕೋರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.