ದೇಶ

ಸೆಲ್ಫಿಗೆ ಬಲಿಯಾಯ್ತು ಯುವತಿಯ ಜೀವ

ಸೆಲ್ಫಿ ಕ್ಲಿಕ್ಕಿಸುವ ಹುಚ್ಚು ಲಂಡನ್ ನಲ್ಲಿ ಓರ್ವ ಯುವತಿ ಪ್ರಾಣವನ್ನೇ ಬಲಿ ತೆಗೆದುಕೊಂಡಿದ್ದು, ರೈಲಿನ ಮೇಲೆ ಹತ್ತಿ ಸೆಲ್ಫಿ ಕ್ಲಿಕ್ಕಿಸುತ್ತಿದ್ದಾಗ ಕಾಲಿಗೆ ವಿದ್ಯುತ್ ತಂತಿ ತಗುಲಿ ಯುವತಿ ಸಾವನ್ನಪ್ಪಿದ್ದಾಳೆ...

ಸೆಲ್ಫಿಗೆ ಬಲಿಯಾಯ್ತು ಯುವತಿಯ ಜೀವ
ಮೃತ ಯುವತಿ
Published On :

ಲಂಡನ್: ಸೆಲ್ಫಿ ಕ್ಲಿಕ್ಕಿಸುವ ಹುಚ್ಚು ಲಂಡನ್ ನಲ್ಲಿ ಓರ್ವ ಯುವತಿ ಪ್ರಾಣವನ್ನೇ ಬಲಿ ತೆಗೆದುಕೊಂಡಿದ್ದು, ರೈಲಿನ ಮೇಲೆ ಹತ್ತಿ ಸೆಲ್ಫಿ ಕ್ಲಿಕ್ಕಿಸುತ್ತಿದ್ದಾಗ ಕಾಲಿಗೆ ವಿದ್ಯುತ್ ತಂತಿ ತಗುಲಿ ಯುವತಿ ಸಾವನ್ನಪ್ಪಿದ್ದಾಳೆ.

ಸೆಲ್ಫಿ ಕ್ಲಿಕ್ಕಿಸುವ ಭರದಲ್ಲೇ ಇಲ್ಲೊಬ್ಬಾಕೆ ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ. ಈಶಾನ್ಯ ರೊಮೇನಿಯಾದ ಲಸಿಯಲ್ಲಿ ನಿಲ್ಲಿಸಲಾಗಿದ್ದ ರೈಲೊಂದರ ಮೇಲೆ ಹತ್ತಿ ಭಾವಚಿತ್ರ ತೆಗೆಯುವ ಸಂದರ್ಭದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಜೀವಂತ ದಹನವಾಗಿದ್ದಾಳೆ. 18 ವರ್ಷದ ಅನ್ನಾ ಉರ್ಸು ಅಚಾನಕ್ಕಾಗಿ ತಂತಿಯನ್ನು ಸ್ಪರ್ಶಿಸಿದ್ದರಿಂದ 27 ಸಾವಿರ ವೋಲ್ಟ್ ವಿದ್ಯುತ್ ಆಕೆಯ ದೇಹದೊಳಗೆ ಪ್ರವಹಿಸಿ ಬೆಂಕಿ ಹೊತ್ತಿಕೊಂಡು ಸ್ಥಳದಲ್ಲಿಯೇ ಆಕೆ ಸಾವನ್ನಪ್ಪಿದ್ದಾಳೆ.

ಘಟನೆ ಹೇಗಾಯ್ತು?

18 ವರ್ಷದ ಅನ್ನಾ ಉರ್ಸು ತನ್ನ ಸ್ನೇಹಿತರೊಂದಿಗೆ ಲಂಡನ್ ನ ಲಸ್ಸಿ ರೈಲು ನಿಲ್ದಾಣದಲ್ಲಿ ಆಗಮಿಸಿದ್ದಳು. ಈ ವೇಳೆ ಫೇಸ್ ಬುಕ್ ಗೆ ತನ್ನ ವಿಶಿಷ್ಟ ಸೆಲ್ಫಿ ಫೊಟೋ ತೆಗೆಯಲು ರೈಲಿನ ಮೇಲೆ ಹತ್ತಿದ್ದಾಳೆ. ಈ ವೇಳೆ ರೈಲಿಗೆ ಅಳವಡಿಸಲಾಗಿದ್ದ 27,000 ವೋಲ್ಟೇಜ್ ವಿದ್ಯುತ್ ತಂತಿ ಆಕೆಯ ಕಾಲಿಗೆ ತಗುಲಿ ಕೂಡಲೇ ಬೆಂಕಿ ಹೊತ್ತಿಕೊಂಡಿದೆ. ಯುವತಿ ದೇಹಕ್ಕೆ ಹೈ ವೋಲ್ಟೇಜ್ ವಿದ್ಯುತ್ ಪ್ರವಹಿಸಿದ ಕಾರಣ ಆಕೆ ಅಲ್ಲಿಯೇ ಸುಟ್ಟು ಕರಕಲಾಗಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.