ಭಾರತದ ಜಿಡಿಪಿ ಬೆಳವಣಿಗೆ ಶೇ.9ರಷ್ಟಾಗಲಿದೆ: ಬ್ರಿಕ್ಸ್ ಬ್ಯಾಂಕ್ ಅಧ್ಯಕ್ಷ ಕಾಮತ್
ಸಾಮಾಜಿಕ-ಆರ್ಥಿಕ ವಲಯದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುತ್ತಿರುವುದರಿಂದ ಮುಂಬರುವ ವರ್ಷಗಳಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇಕಡ 9ರಷ್ಟಾಗಲಿದೆ....

ಮಡಿಕೇರಿ: ಸಾಮಾಜಿಕ-ಆರ್ಥಿಕವಲಯದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುತ್ತಿರುವುದರಿಂದಮುಂಬರುವ ವರ್ಷಗಳಲ್ಲಿ ಭಾರತದಜಿಡಿಪಿ ಬೆಳವಣಿಗೆ ಶೇಕಡ 9ರಷ್ಟಾಗಲಿದೆಎಂದು ಬ್ರಿಕ್ಸ್ ಬ್ಯಾಂಕ್‌ನಮೊದಲ ಅಧ್ಯಕ್ಷರಾಗಿ ನೇಮಕಗೊಂಡಿರುವಕೆ.ವಿ. ಕಾಮತ್‌ಅಭಿಪ್ರಾಯಪಟ್ಟಿದ್ದಾರೆ.
ಮಡಿಕೇರಿ ಬಳಿಯಸುಂಟಿಕೊಪ್ಪಕ್ಕೆ ಭೇಟಿ ನೀಡಿದ್ದವೇಳೆ ಮಾತನಾಡಿದ ಅವರು, ಜಿಡಿಪಿಬೆಳವಣಿಗೆ ಏರಿಕೆಯಾಗುವ ಪರಿಣಾಮದೇಶವಾಸಿಗಳ ತಲಾ ಆದಾಯ ಹೆಚ್ಚಾಗಲಿದೆಎಂದು ಹೇಳಿದ್ದಾರೆ.
ನೂತನವಾಗಿರಚಿಸಲಾದ ಬ್ರಿಕ್ಸ್ ಬ್ಯಾಂಕ್ನಲ್ಲಿ ತಾವು ವಹಿಸಲಿರುವ ಪಾತ್ರದಬಗ್ಗೆ ಪತ್ರಕರ್ತರ ಪ್ರಶ್ನೆಗೆಉತ್ತರಿಸಿದ ಅವರು, ನವದೆಹಲಿಯಲ್ಲಿಬ್ರೆಜಿಲ್, ರಷ್ಯಾ,ಭಾರತ, ಚೀನಾಮತ್ತು ದಕ್ಷಿಣ ಆಫ್ರಿಕಾ -ಸದಸ್ಯ ರಾಷ್ಟ್ರಗಳಿಂದಪ್ರತಿನಿಧಿಗಳೊಂದಿಗೆ ಸಭೆಗಳುನಡೆಸಿ ಬ್ಯಾಂಕಿನ ಕಾರ್ಯನಿರ್ವಹಣೆಯನೀಲನಕ್ಷೆ ತಯಾರಿಸಿದ ಬಳಿಕತಮ್ಮ ಪಾತ್ರದ ಬಗ್ಗೆ ತಿಳಿಯಲಿದೆಎಂದಿದ್ದಾರೆ.
ಬ್ಯಾಂಕಿಂಗ್ಕ್ಷೇತ್ರಕ್ಕೆ ಸಲ್ಲಿಸಿರುವಸೇವೆಗಾಗಿ ತಮ್ಮನ್ನು ಗುರುತಿಸಿಬ್ರಿಕ್ಸ್ ಬ್ಯಾಂಕ್ ನ ಅಧ್ಯಕ್ಷಹುದ್ದೆ ನೀಡಿರುವುದಕ್ಕೆ ಸಂತಸವಾಗಿದೆಎಂಗಿರುವ ಖಾಮತ್, ಕೇಂದ್ರಸರ್ಕಾರದ ಕಾರ್ಯವೈಖರಿ ಬಗ್ಗೆಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನರೇಂದ್ರ ಮೋದಿಪ್ರಧಾನಿಯಾಗಿ ಅಧಿಕಾರವಹಿಸಿಕೊಂಡಾಗಿನಿಂದ, ಹಲವಾರುಬದಲಾವಣೆಗಳಾಗುತ್ತಿವೆ. ಪ್ರಧಾನಮಂತ್ರಿ ಜನ್ ಧನ್ ಯೋಜನೆಯನ್ನುಹಲವರು ಟೀಕಿಸಿದ್ದರು, ಎಲ್ಲಾಸಬ್ಸಿಡಿಗಳು, ಯೋಜನೆಗಳುಬ್ಯಾಂಕ್ ಖಾತೆಗೆ ಸಂಬಂಧಿಸಿರುವುದರಿಂದ,ಬ್ಯಾಂಕ್ ಖಾತೆಯ ಮಹತ್ವತಿಳಿಯುತ್ತಿದೆ. ಜನ್ಧನ್ ಯೋಜನೆ ಸಬ್ಸಿಡಿಗಳ ಕಳವನ್ನುತಡೆಗಟ್ಟಲು ಸಾಧ್ಯವಾಗಿದೆ ಎಂದುಖಾಮತ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


