ಪಂಜಾಬ್ ನಲ್ಲಿ ಶೇ. 80ರಷ್ಟು ಯುವಕರು ಮಾದಕ ವ್ಯಸನಿಗಳು: ಬಾಬಾ ರಾಮದೇವ್
ಪಂಜಾಬ್ ನಲ್ಲಿ ಶೇ.80 ರಷ್ಟು ಯುವಕರು ಮಾದಕದ್ರವ್ಯಗಳಿಗೆ ದಾಸರಾಗಿದ್ದಾರೆ ಎಂದು ಯೋಗಗುರು....

ಚಂಡಿಗಢ: ಪಂಜಾಬ್ ನಲ್ಲಿ ಶೇ.80 ರಷ್ಟು ಯುವಕರು ಮಾದಕದ್ರವ್ಯಗಳಿಗೆ ದಾಸರಾಗಿದ್ದಾರೆ ಎಂದು ಯೋಗಗುರು ಬಾಬಾರಾಮದೇವ್ ಅಭಿಪ್ರಾಯ ಪಟ್ಟಿದ್ದಾರೆ.
ಹರ್ಯಾಣದ ಯೋಗ ಮತ್ತು ಆಯುರ್ವೇದದ ಬ್ರಾಂಡ್ ಅಂಬಾಸಿಡರ್ ಆಗಿರುವ ಬಾಬಾ ರಾಮದೇವ್, ತಾವು ವಿದೇಶಗಳಿಗೆ ಪ್ರವಾಸ ಹೋದಾಗ ಪಂಜಾಬ್ ಯುವಕರನ್ನು ಡ್ರಗ್ಸ್ ನಿಂದ ರಕ್ಷಿಸಬೇಕೆಂದು ಹಲವು ಜನ ತಮ್ಮಲ್ಲಿ ಮನವಿ ಮಾಡಿದ್ದಾಗಿ ಹೇಳಿದರು.
ಹರ್ಯಾಣ ಸರ್ಕಾರ ಕುರುಕ್ಷೇತ್ರದಲ್ಲಿ ಆಯುಷ್ ವಿಶ್ವವಿದ್ಯಾನಿಲಯ ಸ್ಥಾಪಿಸಲು ನಿರ್ಧರಿಸಿದ್ದು, ರೋಗಿಗಳಿಗೆ ಉನ್ನತ ಗುಣಮಟ್ಟದ ಚಿಕಿತ್ಸೆ ನೀಡಲು ಸರ್ಕಾರ ತಯಾರಿ ನಡೆಸಿದೆ ಎಂದರು. ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖತ್ತಾರ್ ಹರಿದ್ವಾರದಲ್ಲಿ ಪತಂಜಲಿ ಯೋಗಪೀಠ ಸ್ಥಾಪಿಸಲು ನೆರವು ನೀಡುತ್ತಿದೆ ಎಂದರು.
ಮುಂಬರುವ ದಸರಾ ಒಳಗೆ ಹರ್ಯಾಣದ 1 ಸಾವಿರ ಗ್ರಾಮಗಳಲ್ಲಿ ಯಯೋಗ ಮತ್ತು ವ್ಯಾಯಾಮ ಶಾಲೆಗಳನ್ನು ಸ್ಥಾಪಿಸುವ ಭರವಸೆ ನೀಡಿದ್ದಾರೆ ರಾಮದೇವ್ ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


