ರಫೇಲ್ ವಿಮಾನ ಒಪ್ಪಂದ ಕುರಿತ ಅಂತಿಮ ನಿರ್ಧಾರ ಶೀಘ್ರ- ಪರಿಕ್ಕರ್
ಫ್ರಾನ್ಸ್ ನಿಂದ 36 ರಫೇಲ್ ಯುದ್ದ ವಿಮಾನ ಪೂರೈಕೆ ಸಂಬಂಧ ಮಾತುಕತೆ ಶೀಘ್ರವೇ ಅಂತಿಮವಾಗಲಿದೆ...

ನವದೆಹಲಿ: ಫ್ರಾನ್ಸ್ ನಿಂದ 36 ರಫೇಲ್ ಯುದ್ದ ವಿಮಾನ ಪೂರೈಕೆ ಸಂಬಂಧ ಮಾತುಕತೆ ಶೀಘ್ರವೇ ಅಂತಿಮವಾಗಲಿದೆ ಎಂದು ಕೇಂದ್ರ ರಕ್ಷಣಾ ಸಚಿವಾ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಮುಂದಿನ ಎರಡು ಮೂರು ತಿಂಗಳಲ್ಲಿ ರಕ್ಷಣಾ ಇಲಾಖೆ ವಿಮಾನ ಖರೀದಿ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ ಎಂದು ಹೇಳಿದರು. 36 ಯುದ್ಧ ವಿಮಾನ ಪೂರೈಕೆ ಸಂಬಂಧ ಫ್ರಾನ್ಸ್ ಸಚಿವ ಜೀನ್ ಯವಿಸ್ ಡ್ರೇಯನ್ ಶೀಘ್ರವೇ ಭಾರತಕ್ಕೆ ಆಗಮಿಸಲಿದ್ದು, ಒಪ್ಪಂದ ಸಂಬಂಧಿಸಿದಂತೆ ಶೀಘ್ರವೇ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎಂದರು.
ಭಾರತದಲ್ಲಿ ನೌಕಾನೆಲೆ ಸ್ಥಾಪಿಸಲು ಪಾಲುದಾರಿಕೆಗೆ ಯಾರು ಮುಂದೆ ಬರುತ್ತಾರೆ ಎಂದು ಕಾಯುತ್ತಿರುವುದಾಗಿ ತಿಳಿಸಿದರು. ಇದಕ್ಕೆ ಯಾವ ಸಂಸ್ಥೆಗಳು ಕೈ ಜೋಡಿಸುತ್ತವೆ ಎಂಬುದು ಸದ್ಯದ ಕೂತುಹಲವಾಗಿದೆ.
ಸಹಭಾಗಿತ್ವದಲ್ಲಿ ನೌಕಾನೆಲೆ ಸ್ಥಾಪಿಸುವ ವಿಚಾರ ಮೋದಿ ಅವರ ಮೇಕ್ ಇನ್ ಇಂಡಿಯಾ ಕನಸಿಗೆ ಸಹಕಾರಿಯಾಗಲಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


