ಪ್ಲೀಸ್... ನನಗೇನೂ ಮಾಡ್ಬೇಡಿ...
ಫೋಟೋಗ್ರಾಫರ್ ಫೋಟೋ ತೆಗೆಯಲು ಕ್ಯಾಮೆರಾ ತೆಗೆದಾಗ ಅದು ಗನ್ ಆಗಿರಬಹುದೆಂದು ಹೆದರಿ ಶರಣಾಗಿದ್ದೇನೆ ಎನ್ನುತ್ತಾ ತನ್ನೆರಡೂ...

ಕ್ಯಾಮೆರಾ ಮತ್ತು ಗನ್ ನಡುವಿನ ವ್ಯತ್ಯಾಸವನ್ನು ಅರಿಯುವ ಪ್ರಾಯ ಆಗಿಲ್ಲ ಈ ಸಿರಿಯನ್ ಪುಟಾಣಿಗೆ. ಈ ಕಾರಣದಿಂದಾಗಿಯೇ ಫೋಟೋಗ್ರಾಫರ್ ಫೋಟೋ ತೆಗೆಯಲು ಕ್ಯಾಮೆರಾ ತೆಗೆದಾಗ ಅದು ಗನ್ ಆಗಿರಬಹುದೆಂದು ಹೆದರಿ ಶರಣಾಗಿದ್ದೇನೆ ಎನ್ನುತ್ತಾ ತನ್ನೆರಡೂ ಕೈಗಳನ್ನು ಮೇಲೆತ್ತಿ ನಿಂತಿದೆ. ಕೆಲವು ದಿನಗಳ ಹಿಂದೆಯಷ್ಟೇ ಸಾಮಾಜಿಕ ತಾಣಗಳಲ್ಲಿ ಈ ಫೋಟೋ ಹರಿದಾಡಿದ್ದು, ಸಿರಿಯಾದಲ್ಲಿನ ಮಕ್ಕಳ ಸ್ಥಿತಿಯನ್ನು ಈ ಫೋಟೋ ಬಿಂಬಿಸಿತ್ತು. ಗಾಜಾ ಮೂಲದ ಫೋಟೋ ಜರ್ನಲಿಸ್ಟ್ ನಾದಿಯಾ ಅಬು ಶಬಾನ್, ಕ್ಯಾಮೆರಾ ಮುಂದೆ ದಯನೀಯವಾಗಿ ನಿಂತಿರುವ ಈ ಪುಟಾಣಿಯ ಫೋಟೋವನ್ನು ಟ್ವೀಟ್ ಮಾಡಿದ್ದರು.
2011 ಮಾರ್ಚ್ 15 ರಿಂದ ಸಿರಿಯಾದಲ್ಲಿ ಆರಂಭವಾದ ಆಂತರಿಕ ಗಲಭೆ ಇನ್ನೂ ಮುಂದುವರಿದೆ. ಯುದ್ಧ, ಆಯುಧಗಳನ್ನು ಮಾತ್ರ ನೋಡಿ ಬೆಳೆದ ಮಕ್ಕಳ ಮನಸ್ಸಲ್ಲಿ ಆ ಭಯ ಹೇಗೆ ಬೇರೂರಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನವೇ ಈ ಚಿತ್ರ. ವಿಶ್ವಸಂಸ್ಥೆಯ ಮಕ್ಕಳ ಕಲ್ಯಾಣ ಇಲಾಖೆಯ ಅಂಕಿ ಅಂಶಗಳ ಪ್ರಕಾರ 14 ಮಿಲಿಯನ್ ಮಕ್ಕಳು ಈ ಯುದ್ಧದ ಪ್ರಭಾವಕ್ಕೊಳಗಾಗಿ ಯಾತನಾಮಯ ಬಾಲ್ಯವನ್ನು ಅನುಭವಿಸುತ್ತಿದ್ದಾರೆ. ಈ ಯುದ್ಧಗಳಿಂದಾಗಿ ಅವರಿಗೆ ಬಾಲ್ಯ ನಷ್ಟವಾಗುತ್ತಿದೆ. ಕುತೂಹಲದಿಂದ ನೋಡುವ ಅವರ ಕಣ್ಣುಗಳಲ್ಲಿ ಯುದ್ಧದ ಭಯವೂ, ನೋವು ಆವರಿಸಿಕೊಂಡಿದೆ. ಇಂಥಾ ಪರಿಸ್ಥಿತಿಯಿಂದಾಗಿಯೇ ಫೋಟೋಗ್ರಾಫರ್ ಕ್ಯಾಮೆರಾ ತೆಗೆಯುವಾಗ ಈ ಪುಟಾಣಿ ಗನ್ ಎಂದು ಹೆದರಿ ಕೈಗಳೆರಡನ್ನೂ ಮೇಲೆತ್ತಿ ನಿಂತಿದ್ದು.
ನಾದಿಯಾ ಶೇರ್ ಮಾಡಿದ ಈ ಫೋಟೋ ಸಾಮಾಜಿಕ ತಾಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಈ ಮೊದಲು ಫೋಟೋದಲ್ಲಿರುವುದು 4 ಹರೆಯದ ಬಾಲಕಿ ಎಂದು ಹೇಳಲಾಗಿತ್ತು. ಆದರೆ ಫೋಟೋದಲ್ಲಿರುವುದು ಬಾಲಕಿಯಲ್ಲ, ಅಡಿ ಹುಡಿಯಾ ಎಂಬ ಬಾಲಕ. ಈತನ ಫೋಟೋ ಕ್ಲಿಕ್ಕಿಸಿದ್ದು ಓಸ್ಮಾನ್ ಸಾಗಿರ್ಲಿ ಎಂಬ ಫೋಟೋಗ್ರಾಫರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


