ದೇಶ

ಹಿಂದೂ ಮಾಲೀಕನಿಂದ 700 ವರ್ಷದ ಪ್ರಾಚೀನ ಖುರಾನ್ ಗ್ರಂಥವನ್ನು ಕದ್ದೊಯ್ದ ದುಷ್ಕರ್ಮಿಗಳು!

ರಾಜಸ್ಥಾನದ ಜೈಪುರದ ಬೀವರ್ ಪಟ್ಟಣದಲ್ಲಿ ಹಿಂದೂ ಮಾಲೀಕನಿಂದ 700 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ಖುರಾನ್ ಗ್ರಂಥವನ್ನು ದುಷ್ಕರ್ಮಿಗಳು ಕಕದ್ದೊಯ್ದಿದ್ದಾರೆ.

ಹಿಂದೂ ಮಾಲೀಕನಿಂದ 700 ವರ್ಷದ ಪ್ರಾಚೀನ ಖುರಾನ್ ಗ್ರಂಥವನ್ನು ಕದ್ದೊಯ್ದ ದುಷ್ಕರ್ಮಿಗಳು!
ಖುರಾನ್
Published On :

ಜೈಪುರ್: ರಾಜಸ್ಥಾನದ ಜೈಪುರದ ಬೀವರ್ ಪಟ್ಟಣದಲ್ಲಿ ಹಿಂದೂ ಮಾಲೀಕನಿಂದ 700 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ಖುರಾನ್ ಗ್ರಂಥವನ್ನು ದುಷ್ಕರ್ಮಿಗಳು ಕಕದ್ದೊಯ್ದಿದ್ದಾರೆ.

2011ರಲ್ಲಿ ಈ ಐತಿಹಾಸಿಕ ಗ್ರಂಥವನ್ನು ಜೈದೇವ್ ಪ್ರಸಾದ್ ಶರ್ಮಾರಿಗೆ ಸ್ನೇಹಿತನೊಬ್ಬ ಉಡುಗೊರೆಯಾಗಿ ಕೊಟ್ಟಿದ್ದ. ಮಂಗಳವಾರ ಸಂಜೆ ಶರ್ಮಾ ಮನೆಗೆ ಬಂದ ಉದ್ಯಮಿಯೊಬ್ಬ ಖುರಾನ್ ನೋಡಬೇಕೆಂದು ಕೇಳಿದ್ದಾನೆ. ಈ ವೇಳೆ ಮನೆಗೆ ಪ್ರವೇಶಿಸಿದ ಮತ್ತೊಬ್ಬ ಆಗಂತುಕ ಶರ್ಮಾರನ್ನ ಹೆದರಿಸಿ ಖುರಾನನ್ನು ಕದ್ದು ಬೈಕಿನಲ್ಲಿ ಒಯ್ದಿದ್ದಾನೆ. ಮಹತ್ವದ ಖುರಾನ್ ಗ್ರಂಥವನ್ನು ಕಳೆದುಕೊಂಡಕೊಂಡಿದ್ದಾರೆ.

ನಾನು ಹಿಂದೂ ಆಗಿದ್ದರೂ ಪವಿತ್ರ ಗ್ರಂಥ ಖುರಾನ್ ಬಗ್ಗೆ ಅಪಾರ ಅಭಿಮಾನ ಹೊಂದಿದ್ದೆ. ತನ್ನ ಮಗಳಿಗೆ ಕೊಡಬೇಕೆಂದು ಇಟ್ಟುಕೊಂಡಿದ್ದೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ. 700 ವರ್ಷಗಳಷ್ಟು ಹಳೆಯದಾದ ಈ ಖುರಾನ್ ಗ್ರಂಥದಲ್ಲಿನ ಅಕ್ಷರಗಳನ್ನು ಬಂಗಾರದಿಂದ ಬರೆಯಲಾಗಿತ್ತು. ಅಮೂಲ್ಯ ರತ್ನಗಳಿಂದ ಸಿಂಗರಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.