ರೈಲ್ವೆ ಪ್ರಯಾಣಿಕರಿಗೆ ರುಪೇ ಕಾರ್ಡ್

ನವದೆಹಲಿ: ಐಆರ್ ಸಿಟಿಸಿ (ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ನಿಗಮ) ರೈಲ್ವೆ ಪ್ರಯಾಣಿಕರಿಗಾಗಿ `ರುಪೇ' ಎಂಬ ಪ್ರಿಪೇಯ್ಡ್ ಕಾರ್ಡ್ ಮಂಗಳವಾರ ಬಿಡುಗಡೆ ಮಾಡಿದೆ.
ಈ ಕಾರ್ಡ್ ಬಳಸಿ ಪ್ರಯಾಣಿಕರು ಟಿಕೆಟ್ ಬುಕಿಂಗ್ ಹಾಗೂ ಶಾಪಿಂಗ್ ಮಾಡಬಹುದು. ಗ್ರಾಹಕರ ಆಸಕ್ತಿ ಗಮನದಲ್ಲಿಟ್ಟು ಕೊಂಡು ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ, ನ್ಯಾಶನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ ಜತೆ ಒಪ್ಪಂದ ಮಾಡಿ ಕೊಳ್ಳಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ.
`ರುಪೇ' ಪ್ರಿಪೇಡ್ ಕಾರ್ಡ್‍ಗಳನ್ನು ಯುನಿಯನ್ ಬ್ಯಾಂಕ್ ಹಾಗೂ ಐಆರ್‍ಸಿಟಿಸಿ ಆನ್‍ಲೈನ್‍ನಲ್ಲಿ ಪಡೆಯಬಹುದು. ಇದು ಬ್ಯಾಂಕ್ ಗಳ ಡೆಬಿಟ್ ಕಾರ್ಡ್ ರೀತಿ ಕಾರ್ಯನಿರ್ವಹಿಸುತ್ತದೆ. ಪ್ರತಿ ವ್ಯವಹಾರಕ್ಕೂ ಅಂಕಗಳನ್ನು ನೀಡಲಾಗುತ್ತದೆ. ಈ ಕಾರ್ಡ್ ಮೂಲಕ ರೈಲ್ವೆ ಟಿಕೆಟ್ ಬುಕಿಂಗ್ ಹಾಗೂ ಶಾಪಿಂಗ್‍ಗೆ ಈ ಕಾರ್ಡ್ ಅನ್ನು ಬಳಸಬಹುದು ಎಂದು ಐಆರ್‍ಟಿಸಿ ಅಧ್ಯಕ್ಷ ಎ.ಕೆ. ಮನೋಚ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


