ದೇಶ

ಗಣಿತ ವಿಜ್ಞಾನದಲ್ಲಿ ಪರಿಣಿತರಾಗಲು ಇಲ್ಲಿದೆ ಸೂತ್ರ

ವಿದ್ಯಾರ್ಥಿಗಳಿಗೆ ತಲೆನೋವಾಗಿ ಕಾಡುವ ವಿಷಯವೆಂದರೆ ಗಣಿತ ಮತ್ತು ವಿಜ್ಞಾನ, ಎಲ್ಲಾ ವಿಷಯಗಳಲ್ಲಿ ಹೆಚ್ಚು ಅಂಕ ಗಳಿಸಿದರೂ ಅದ್ಯಾಕೋ ಗಣಿತ ಮತ್ತು ವಿಜ್ಞಾನ...

ಗಣಿತ ವಿಜ್ಞಾನದಲ್ಲಿ ಪರಿಣಿತರಾಗಲು ಇಲ್ಲಿದೆ ಸೂತ್ರ
Published On :

ವಾಷಿಂಗ್ಟನ್ : ವಿದ್ಯಾರ್ಥಿಗಳಿಗೆ ತಲೆನೋವಾಗಿ ಕಾಡುವ ವಿಷಯವೆಂದರೆ ಗಣಿತ ಮತ್ತು ವಿಜ್ಞಾನ, ಎಲ್ಲಾ ವಿಷಯಗಳಲ್ಲಿ ಹೆಚ್ಚು ಅಂಕ ಗಳಿಸಿದರೂ ಅದ್ಯಾಕೋ ಗಣಿತ ಮತ್ತು ವಿಜ್ಞಾನ ವಿಷಯ ಕಲಿಕೆಯಲ್ಲಿ ಹೆಚ್ಚಿನ ಮಕ್ಕಳು ನಿರಾಸಕ್ತಿ ತೋರಿಸುತ್ತಾರೆ. ಈ ವಿಷಯಗಳು ಅವರಿಗೆ ಕಷ್ಟಕರವಾಗಿ ಕಾಣಿಸುತ್ತದೆ. ಆದರೆ, ನಿಜ ಹೇಳಬೇಕೆಂದರೆ ಈ ವಿಷಯಗಳನ್ನೇ ಮಕ್ಕಳು ನೆಚ್ಚಿನ ವಿಷಯವನ್ನಾಗಿ ಆಯ್ಕೆ ಮಾಡಬಹುದು. ಎಷ್ಟೇ ಓದಿದರೂ, ಕೂಡಿ ಕಳೆದರೂ ತಲೆಗೆ ಹತ್ತುವುದಿಲ್ಲ ಎನ್ನುವ ಮಾತಿಗೆ ಇಲ್ಲಿ ಫುಲ್ ಸ್ಟಾಪ್ ಇಡಬಹುದು.
ಏಕೆಂದರೆ, ಪ್ರತಿ ದಿನ ಕೇವಲ 1 ಗಂಟೆ ಮಾತ್ರ ಗಣಿತ ಮತ್ತು ವಿಜ್ಞಾನ ಅಭ್ಯಾಸ ಮಾಡಿದರಷ್ಟೇ ಸಾಕು, ವಿದ್ಯಾರ್ಥಿಗಳು ಅದರಲ್ಲಿ ಪರಿಣಿತರಾಗುತ್ತಾರೆ ಅಂತಾರೆ ಸಂಶೋಧಕರು. ಹೌದು, ಸ್ಪೈನ್ ನ ಓವಿಡೋ ವಿಶ್ವವಿದ್ಯಾಲಯದ ಸಂಶೋಧಕರು ಈ ಬಗ್ಗೆ ಸಂಶೋಧನೆ ಮಾಡಿ ಮಕ್ಕಳ ಕಲಿಕೆಯನ್ನು ಉತ್ತೇಜಿಸುವ ಸೂತ್ರ ಹೇಳಿದ್ದಾರೆ.

ಈ ಸಂಶೋಧನೆಗಾಗಿ ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಒಳಪಡಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಪ್ರತಿ ದಿನ ಒಂದರಿಂದ ಎರಡು ಗಂಟೆವರೆಗೂ ಎಲ್ಲಾ ವಿಷಯಗಳ ಹೋಮ್ ವರ್ಕ್ ಮಾಡಿಸಲಾಗಿದೆ. ತರಗತಿಯಲ್ಲಿ 100ಕ್ಕೆ 50 ಅಂಕ ಪಡೆಯುವಂತಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಈ ಸಂಶೋಧನೆಗೆ ಒಳಪಡಿಸಲಾಗಿತ್ತು.
ಪ್ರತಿನಿತ್ಯ 60 ನಿಮಿಷ ಹೋಂ ವರ್ಕ್ ಮಾಡಿದರೆ, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನೇ ಪಡೆಯುತ್ತಾರೆ. ಅಲ್ಲದೇ ಅವರಿಗೆ ತಲೆನೋವಾಗಿ ಕಾಡುವಂತಹ ಗಣಿತ ಮತ್ತು ವಿಜ್ಞಾನ ಸುಲಭವಾಗುತ್ತದೆ ಎಂಬುದು ಈ ಸಂಶೋಧನೆಯಿಂದ ತಿಳಿದು ಬಂದಿದೆ.
ನೀವು ಯಾವ ರೀತಿ ಮನೆಯಲ್ಲಿ ಹೋಂ ವರ್ಕ್ ಮಾಡುತ್ತಿರೀ?  ಪೋಷಕರ ಸಹಾಯದಿಂದ ಅಥವಾ ಮನೆ ಪಾಠಕ್ಕೆ ಹೋಗಿ ಮಾಡುತ್ತಿರಾ? ಎಷ್ಟು ಸಮಯ ತೆಗೆದುಕೊಳ್ಳುತ್ತೀರಿ? ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿ? ಯಾವ ವಿಷಯದ ಹೋಂ ವರ್ಕ್ ಮಾಡುವುದರಲ್ಲಿ ಹೆಚ್ಚು ಸಮಯ ಕಳೆಯುತ್ತೀರಿ? ಎಂಬ ಪ್ರಶ್ನೆಗಳಿಗೆ ವಿದ್ಯಾರ್ಥಿಗಳಿಂದ ಉತ್ತರ ಸಂಗ್ರಹಿಸಿ, ನಂತರ ಅವರನ್ನು ಸಂಶೋಧನೆಗೆ ಒಳಪಡಿಸಲಾಯಿತು.
ಇದರ ಪ್ರಕಾರ, ವಿದ್ಯಾರ್ಥಿಗಳು ಮನೆಯಲ್ಲಿ 60 ನಿಮಿಷಗಳ ಕಾಲ ಹೋಂ ವರ್ಕ್ ಮಾಡಿದರೆ, ಅವರು ಪ್ರತಿಯೊಂದು ವಿಷಯದಲ್ಲಿಯೂ ಪರಿಣಿತರಾಗಬಹುದು ಎಂಬುದು ತಿಳಿದು ಬಂದಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.