ಹುತಾತ್ಮ ದಿನದಂದೇ ಭಾರತೀಯ ಸೈನಿಕರಿಗೆ ಅಗೌರವ
ಹುತಾತ್ಮ ದಿನದಂದೇ ಭಾರತೀಯ ಯೋಧರಿಗೆ ಚಂಡೀಘಡ ಕಾರ್ಪೋರೇಷನ್ ಅಗೌರವ ಸೂಚಿಸಿದ್ದು, ಅಮೆರಿಕ ಯೋಧರನ್ನು ಭಾರತೀಯ ಸೈನಿಕರಂತೆ...

ಚಂಡೀಘಡ: ಹುತಾತ್ಮ ದಿನದಂದೇ ಭಾರತೀಯ ಯೋಧರಿಗೆ ಚಂಡೀಘಡ ಕಾರ್ಪೋರೇಷನ್ ಅಗೌರವ ಸೂಚಿಸಿದ್ದು, ಅಮೆರಿಕ ಸೇನಾಪಡೆಯ ಯೋಧರನ್ನು ಭಾರತೀಯ ಸೈನಿಕರಂತೆ ಬಿಂಬಿಸುವ ಭಿತ್ತಿ ಚಿತ್ರಗಳನ್ನು ಜಿಲ್ಲೆಯಾಧ್ಯಂತ ಪ್ರಚಾರ ಮಾಡಿದೆ.
ಹುತಾತ್ಮರ ದಿನಾಚರಣೆ ಸಂಬಂಧವಾಗಿ ಚಂಡೀಘಡ ಕಾರ್ಪೋರೇಷನ್ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದ ಅಂಗವಾಗಿ ಹಾಕಿಸಿದ್ದ ಬೃಹತ್ ಕಟೌಟ್ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಬೃಹತ್ ಜಾಹೀರಾತು ಫಲಕದಲ್ಲಿ ಭಾರತೀಯ ಸೈನಿಕರ ಬದಲು ಅಮೆರಿಕನ್ ಸೈನಿಕರನ್ನು ತೋರಿಸುವ ಮೂಲಕ ಕಾರ್ಪೋರೇಷನ್ ಪೇಚಿಗೆ ಸಿಲುಕಿದೆ. ಮುನಿಸಿಪಲ್ ಕಾರ್ಪೊರೇಶನ್ ಈ ಫಲಕವನ್ನು ಭಾನುವಾರವೇ ಹಾಕಿಸಿತ್ತು ಎಂದು ತಿಳಿದುಬಂದಿದೆ. ಆಶ್ಚರ್ಯದ ಸಂಗತಿ ಎಂದರೆ ಅಮೆರಿಕನ್ ಸೈನಿಕರ ಹಿಂಭಾಗದಲ್ಲಿದ್ದ ಅಮೆರಿಕದ ಧ್ವಜವನ್ನು ಕಾಣಿಸದಂತೆ ಮಾಡಿ ಅದರ ಜಾಗದಲ್ಲಿ ಭಾರತೀಯ ರಾಷ್ಟ್ರಧ್ವಜವನ್ನು ಹಾಕಲಾಗಿತ್ತು. ಆದರೆ ಸೈನಿಕರ ಸಮವಸ್ತ್ರದ ಮೇಲೆ ಮಾತ್ರ ಅಮೆರಿಕದ ಲಾಂಛನವನ್ನು ಹಾಗೆಯೇ ಉಳಿಸಿಕೊಳ್ಳಲಾಗಿತ್ತು.

ಈ ಪ್ರಮಾದದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಚಂಡೀಘಡ ಮೇಯರ್ ಪೂನಮ್ ಶರ್ಮಾ ಅವರು, ಈ ಫಲಕದಲ್ಲಿ ಆಗಿರುವ ಪ್ರಮಾದದ ಬಗ್ಗೆ ತಮಗೇನೂ ತಿಳಿಯದು. ಹುತಾತ್ಮರ ದಿನಾಚರಣೆಯ ಆಹ್ವಾನ ಪತ್ರಿಕೆಯ ಕಾರ್ಡ್ ಪಡೆದಿರುವ ಯಾವೊಬ್ಬ ಸೇನಾಧಿಕಾರಿ ಕೂಡ ಈ ಫಲಕದಲ್ಲಿನ ಪ್ರಮಾದ ಬಗ್ಗೆ ತಮಗೇನೂ ಹೇಳಿಲ್ಲ ಎಂದು ಎಂದು ಹೇಳಿದ್ದಾರೆ. ಇನ್ನು ಈ ಫಲಕದ ವಿನ್ಯಾಸ ಮತ್ತು ಮುದ್ರಣವನ್ನು ಚಂಡೀಘಡ ಮುನಿಸಿಪಲ್ ಕಾರ್ಪೊರೇಶನ್‌ನ ಸಹಾಯಕ ಸಾರ್ವಜನಿಕ ಸಂಪರ್ಕಾಧಿಕಾರಿಯೇ ಮಾಡಿಸಿದ್ದು, ಹುತಾತ್ಮರ ದಿನಾಚರಣೆಯಂದು ಸೈನಿಕರ ವಿಧವೆಯರನ್ನು ಗೌರವಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಆದರೆ ಆಯೋಜಕರ ನಿರ್ಲಕ್ಷ್ಯದಿಂದಾಗಿ ಇದೀಗ ಸೈನಿಕರು ಮುಜುಗರಪಡುವಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


