ದೇಶ

ಬೈಕ್ ಸವಾರರ ಗುಂಪಿನಿಂದ ಯುವತಿಯರಿಗೆ ಹಿಗ್ಗಾಮುಗ್ಗಾ ಥಳಿತ

ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಇಬ್ಬರು ಯುವತಿಯರನ್ನು ಹಿಡಿದು, ಬೈಕ್ ನಲ್ಲಿ ಹೋಗುತ್ತಿದ್ದ 6 ಹುಡುಗರ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿರುವ ಅಮಾನವೀಯ ಘಟನೆ ಉತ್ತರಪ್ರದೇಶದ...

ಬೈಕ್ ಸವಾರರ ಗುಂಪಿನಿಂದ ಯುವತಿಯರಿಗೆ ಹಿಗ್ಗಾಮುಗ್ಗಾ ಥಳಿತ
ಹಲ್ಲೆ ನಡೆಸಿದ ವೀಡಿಯೋ ತುಣುಕಿನ ಚಿತ್ರ
Published On :

ಹಥ್ರಾಸ್: ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಇಬ್ಬರು ಯುವತಿಯರನ್ನು ಹಿಡಿದು, ಬೈಕ್ ನಲ್ಲಿ ಹೋಗುತ್ತಿದ್ದ 6 ಹುಡುಗರ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿರುವ ಅಮಾನವೀಯ ಘಟನೆ ಉತ್ತರಪ್ರದೇಶದ ಹಥ್ರಾಸ್ ನಲ್ಲಿ ನಡೆದಿದೆ,

ತನ್ನ ಗೆಳತಿಯೊಂದಿಗೆ ಯುವತಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಳು. ಇದೇ ವೇಳೆ ಬೈಕ್ ನಲ್ಲಿ 6 ಹುಡುಗರ ಗುಂಪು ಯುವತಿಯರ ಬೈಕ್ ನ್ನು ಅಡ್ಡಗಟ್ಟಿದ್ದಾರೆ. ದಾರಿ ಬಿಡುವಂತೆ ಹೇಳಿದಾಗ ಕೇಳದ ಹುಡುಗರ ಗುಂಪು ಇದ್ದಕ್ಕಿದ್ದಂತೆ ಯುವತಿಯರೊಂದಿಗೆ ಅಶ್ಲೀಲವಾಗಿ ನಡೆದುಕೊಂಡಿದ್ದಾರೆ. ನಂತರ ಇಬ್ಬರು ಯುವತಿಯರಿಗೂ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ದೃಶ್ಯವನ್ನು ಯುವಕರ ಗುಂಪಿನಲ್ಲಿದ್ದ ಓರ್ವ ಯುವಕ ವೀಡಿಯೋ ಮಾಡಿ, ಘಟನೆ ನಂತರ ವಾಟ್ಸ್ಅಪ್ ನಲ್ಲಿ ವೀಡಿಯೋ ಹಾಕಿದ್ದಾನೆ. ಅಂತರ್ಜಾಲದಲ್ಲಿ ಅಪ್ ಲೋಡ್ ಆದ ಈ 10 ನಿಮಿಷಗಳ ವಿಡಿಯೋ ದೇಶಾದಾದ್ಯಂತ ತೀವ್ರ ವಿರೋಧಕ್ಕೆ ಕಾರಣವಾಗಿದ್ದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ಬೈಕ್ ನಲ್ಲಿ ನಾನು ಮತ್ತು ನನ್ನ ಗೆಳತಿ ಇಬ್ಬರೂ ಮಾರುಕಟ್ಟೆಗೆ ಹೋಗುತ್ತಿದ್ದೆವು. ಈ ವೇಳೆ ಇದ್ದಕ್ಕಿದ್ದಂತೆ ಬೈಕ್ ನಲ್ಲಿ ಬಂದ 6 ಹುಡುಗರ ಗುಂಪು ನಮ್ಮನ್ನು ಅಡ್ಡಗಟ್ಟಿತು. ನಂತರ ಇದ್ದಕ್ಕಿದ್ದಂತೆ ಬೈಕ್ ನಿಂದ ಇಳಿದ ಹುಡುಗರು ಅಶ್ಲೀಲವಾಗಿ ನಡೆದು ಕೊಂಡರು. ನನಗೆ ಮತ್ತು ನನ್ನ ಗೆಳತಿಗೆ ಇಬ್ಬರಿಗೂ ಹೊಡೆಯಲಾರಂಭಿಸಿದರು. ಬಿಟ್ಟು ಬಿಡಿ ಎಂದು ಎಷ್ಟು ಹೇಳಿದರೂ ಕೇಳಲಿಲ್ಲ. ಮನೆಯವರು ಗಾಬರಿಯಾಗುತ್ತಾರೆ ಎಂಬ ಕಾರಣಕ್ಕೆ ಈ ವಿಷಯವನ್ನು ಮನೆಯಲ್ಲಿ ಹೇಳಿರಲಿಲ್ಲ. ಆದರೆ ವಾಟ್ಸ್ ಅಪ್ ನಲ್ಲಿ ಹಂಚಿಕೆಯಾದ ವೀಡಿಯೋ ನಮ್ಮ ಕುಟುಂಬಸ್ಥರಿಗೆ ಸಿಕ್ಕಾಗ ಅವರಿಗೆ ವಿಷಯ ತಿಳಿಯಿತು. ನಂತರ ಪೊಲೀಸರಿಗೆ ದೂರು ನೀಡಿದರು ಎಂದು ಹಲ್ಲೆಗೊಳಾಗಾದ ಯುವತಿಯೊಬ್ಬರು ಹೇಳಿದ್ದಾಳೆ.

ಹಲ್ಲೆ ನಡೆಸಿದ ಹುಡುಗರು ಹಾಗೂ ಯುವತಿಯರು ಒಂದೇ ಊರಿನವರಾಗಿದ್ದು, ಇಬ್ಬರು ಯುವತಿಯಲ್ಲೊಬ್ಬ ಯುವತಿಯನ್ನು ಗುಂಪಿನಲ್ಲಿದ್ದ ಓರ್ವ ಯುವಕ ಹಲವು ದಿನಗಳಿಂದ ಪ್ರೀತಿಸುತ್ತಿದ್ದ, ತನ್ನ ಪ್ರೀತಿಯ ನಿವೇದನೆಯನ್ನು ಯುವತಿಯ ಮುಂದಿಟ್ಟಾಗ ಯುವತಿ ಕುಟುಂಬಸ್ಥರು ಇದಕ್ಕೆಲ್ಲ ಒಪ್ಪುವುದಿಲ್ಲ ಎಂದು ಹೇಳಿ, ಹುಡುಗನ ಪ್ರೀತಿಯನ್ನು ತಿರಸ್ಕರಿಸಿದ್ದಳು ಎಂದು ತಿಳಿದು ಬಂದಿದೆ. ಪ್ರೀತಿ ಒಪ್ಪಿಕೊಂಡಿಲ್ಲ ಎಂಬ ಕಾರಣಕ್ಕೆ ಯುವತಿಯರು ಒಂಟಿಯಾಗಿ ಸಿಕ್ಕ ಸಂದರ್ಭದಲ್ಲಿ ಯುವಕ ತನ್ನ ಸ್ನೇಹಿತರೊಂದಿಗೆ ಹುಡಿಗಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣ ಸಂಬಂಧ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಇನ್ನುಳಿದ ಇಬ್ಬರಿಗೆ ಹುಡುಕಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.