ಬಿಸಿಗಾಳಿಗೆ ಬೆಂಗಳೂರು ಸೇರಿ 5 ನಗರಗಳಲ್ಲಿ ಗರಿಷ್ಠ ಸಾವು ಸಾಧ್ಯತೆ
ಬೆಂಗಳೂರು ಸೇರಿದಂತೆ ಭಾರತದ 5 ಪ್ರಮುಖ ನಗರಗಳಲ್ಲಿ 2020ರ ವೇಳೆಗೆ ಬಿಸಿಗಾಳಿಯು ಅತಿಹೆಚ್ಚು ಮಂದಿ ಯನ್ನು ಬಲಿತೆಗೆದುಕೊಳ್ಳಲಿದೆ.

Published On :
ನವದೆಹಲಿ: ಬೆಂಗಳೂರು ಸೇರಿದಂತೆ ಭಾರತದ 5 ಪ್ರಮುಖ ನಗರಗಳಲ್ಲಿ 2020ರ ವೇಳೆಗೆ ಬಿಸಿಗಾಳಿಯು ಅತಿಹೆಚ್ಚು ಮಂದಿ ಯನ್ನು ಬಲಿತೆಗೆದುಕೊಳ್ಳಲಿದೆ.
ಐಐಎಂ ಅಹಮದಾಬಾದ್, ಐಐಟಿ ಗಾಂಧಿನಗರ ಮತ್ತು ಇಂಧನ, ಪರಿಸರ ಮತ್ತು ಜಲಮಂಡಳಿ ಜಂಟಿಯಾಗಿ ನಡೆಸಿದ ಅಧ್ಯಯನವು ಈ ಆತಂಕಕಾರಿ ಅಂಶವನ್ನು ಬಹಿರಂಗ ಪಡಿಸಿದೆ. ಅಹಮದಾಬಾದ್, ಕೋಲ್ಕತಾ, ಬೆಂಗಳೂರು, ದೆಹಲಿ ಮತ್ತು ಮುಂಬೈನಲ್ಲಿ 2020ರ ವೇಳೆಗೆ ಬಿಸಿಗಾಳಿಯಿಂದಾಗಿ ಗರಿಷ್ಠ ಸಂಖ್ಯೆಯ ಜನ ಮೃತಪಡುವ ಸಾಧ್ಯತೆಯಿದೆ ಎಂದು ಈ ಅಧ್ಯಯನ ತಿಳಿಸಿದೆ. ಇದಕ್ಕಾಗಿ ಭಾರತದ ವೈವಿಧ್ಯ ಹವಾಮಾನವಿರುವ ಹಾಗೂ 10 ಲಕ್ಷದಷ್ಟು ಜನಸಂಖ್ಯೆಯಿರುವ 52 ನಗರ ಪ್ರದೇಶ ಗಳನ್ನು ಆಯ್ದು ಕೊಳ್ಳಲಾಗಿತ್ತು ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.
``ನಮ್ಮ ಜನಪ್ರತಿನಿಧಿಗಳು ಹವಾಮಾನ ಬದಲಾವಣೆಗೆ ಏನು ಮಾಡಬೇಕೆಂದು ಯೋಜನೆ ರೂಪಿಸಬೇಕು ಮತ್ತು ಪ್ರತಿಕ್ರಿಯಿಸುವಂತಾಗಬೇಕು. ನಾವು ದೈನಂದಿನ ಸಾವು, ಹವಾಮಾನ, ಆರ್ದ್ರತೆ ಮತ್ತು ಮಾಲಿನ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅಂಕಿಅಂಶದ ಮಾದರಿಯನ್ನು ಸಿದ್ಧಪಡಿಸಿ ದ್ದೇವೆ. ಈ ಮೂಲಕ ತಾಪಮಾನ ಬದಲಾವಣೆಗೆ ಅನುಗುಣವಾಗಿ ಸಾವಿನ ರಿಸ್ಕ್ ಹೇಗೆ ಬದಲಾಗುತ್ತದೆ ಎಂದು ಕಂಡು ಕೊಂಡಿದ್ದೇವೆ'' ಎಂದು ಅಧ್ಯಯನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಾ.ಎಂ.ಎಚ್. ಧೊಲಾಕಿಯಾ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew DelhiಇಂಧನIIM AhemadabadThe Council on EnergyEnvironment and Watermost heat-related deathsಐಐಎಂ ಅಹಮದಾಬಾದ್ಪರಿಸರ ಮತ್ತು ಜಲಮಂಡಳಿಬಿಸಿಗಾಳಿಗೆ ಗರಿಷ್ಠ ಸಾವು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


