ದೇಶ

ಡಿಕ್ಕಿ ಹೊಡೆದವನೊಂದಿಗೆ ವಾಗ್ವಾದ: ಸಾಫ್ಟ್ ವೇರ್ ಇಂಜಿನಿಯರ್ ಮೇಲೆ ಗುಂಡು

ಬೈಕ್ ಡಿಕ್ಕಿ ಹೊಡೆದವನೊಂದಿಗೆ ಮಾತಿನ ಚಕಮಕಿ ನಡೆಸಿದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬ ಗುಂಡೇಟು ತಿಂದ ಘಟನೆಯೊಂದು ದೆಹಲಿಯ ನೊಯ್ಡಾ ಪ್ರದೇಶದಲ್ಲಿ ಭಾನುವಾರ ನಡೆದಿದೆ...

ಡಿಕ್ಕಿ ಹೊಡೆದವನೊಂದಿಗೆ ವಾಗ್ವಾದ: ಸಾಫ್ಟ್ ವೇರ್ ಇಂಜಿನಿಯರ್ ಮೇಲೆ ಗುಂಡು
ಡಿಕ್ಕಿ ಹೊಡೆದವನೊಂದಿಗೆ ವಾಗ್ವಾದ: ಗುಂಡೇಟು ತಿಂದ ಸಾಫ್ಟ್ ವೇರ್ ಇಂಜಿನಿಯರ್ (ಸಾಂದರ್ಭಿಕ ಚಿತ್ರ)
Published On :

ನೊಯ್ಡಾ: ಬೈಕ್ ಡಿಕ್ಕಿ ಹೊಡೆದವನೊಂದಿಗೆ ಮಾತಿನ ಚಕಮಕಿ ನಡೆಸಿದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬ ಗುಂಡೇಟು ತಿಂದ ಘಟನೆಯೊಂದು ದೆಹಲಿಯ ನೊಯ್ಡಾ ಪ್ರದೇಶದಲ್ಲಿ ಭಾನುವಾರ ನಡೆದಿದೆ.

ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಪಾಲ್ ಹಾಗೂ ಪತ್ನಿ ಪಲ್ಲವಿ ಎಂಬುವವರು ಬೈಕ್ ನಲ್ಲಿ ನೊಯ್ಡಾದ ಸೆಕ್ಟರ್ 60 ರಸ್ತೆಯಲ್ಲಿ ಚಲಿಸುತ್ತಿದ್ದರು. ಈ ವೇಳೆ ಓವರ್ ಟೇಕ್ ಮಾಡಲು ಹೋಗುತ್ತಿದ್ದ ಮತ್ತೊಬ್ಬ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ. ಹೀಗಾಗಿ ರಸ್ತೆಯಲ್ಲಿ ಸರಿಯಾಗಿ ಹೋಗುವಂತೆ ಡಿಕ್ಕಿಹೊಡೆದ ವ್ಯಕ್ತಿಗೆ ಚಂದ್ರಪಾಲ್ ಸಲಹೆ ನೀಡಿದ್ದಾರೆ.

ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕೋಪಗೊಂಡ ವ್ಯಕ್ತಿ ಇದ್ದಕ್ಕಿದ್ದಂತೆ ತನ್ನ ಬಳಿ ಇದ್ದ ಪಿಸ್ತೂಲನ್ನು ತೆಗೆದು ಚಂದ್ರಪಾಲ್ ಅವರ ಕಾಲಿಗೆ ಎರಡು ಬಾರಿ ಗುಂಡು ಹಾರಿಸಿ, ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಸ್ಥಳದಲ್ಲಿದ್ದ ಚಂದ್ರಪಾಲ್ ಅವರ ಪತ್ನಿ ನಂತರ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ಕೈಗೊಂಡಿದ್ದು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಪ್ರಸ್ತುತ ಗಾಯಗೊಂಡಿರುವ ಚಂದ್ರಪಾಲ್ ಅವರ ಕಾಲಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ವೈದ್ಯರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.