ಐಟಿಐ ಪರೀಕ್ಷೆ ಪ್ರವೇಶ ಪತ್ರದಲ್ಲಿ ವಿದ್ಯಾರ್ಥಿ ಫೋಟೋ ಬದಲು ನಾಯಿಯ ಫೋಟೋ!
ಐಟಿಐ ಪ್ರವೇಶ ಪರೀಕ್ಷೆಗೆ ಹಾಜರಾಗಲು ಶನಿವಾರ ಪ್ರವೇಶ ಪತ್ರ ಸಿಕ್ಕಿದಾಗ ಸೌಮ್ಯದೀಪ್ ಮಹತೋ (18) ಎಂಬ ವಿದ್ಯಾರ್ಥಿಗೆ ಅಚ್ಚರಿ. ತನ್ನ...

ಕೊಲ್ಕತ್ತಾ: ಐಟಿಐ ಪ್ರವೇಶ ಪರೀಕ್ಷೆಗೆ ಹಾಜರಾಗಲು ಶನಿವಾರ ಪ್ರವೇಶ ಪತ್ರ ಸಿಕ್ಕಿದಾಗ ಸೌಮ್ಯದೀಪ್ ಮಹತೋ (18) ಎಂಬ ವಿದ್ಯಾರ್ಥಿಗೆ ಅಚ್ಚರಿ. ತನ್ನ ಮಾಹಿತಿ ಇರುವ ಪರೀಕ್ಷಾ ಪ್ರವೇಶ ಪತ್ರದಲ್ಲಿ ತನ್ನ ಫೋಟೋ ಬದಲು ನಾಯಿಯೊಂದರ ಫೋಟೋ!!
ಐಟಿಐ ಪ್ರವೇಶ ಪರೀಕ್ಷೆಯ ಅಧಿಕೃತ ವೆಬ್‌ಸೈಟ್ ನಿಂದ ಮಹತೋ ಪರೀಕ್ಷಾ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿದ್ದರು . ಆದರೆ ಅದರಲ್ಲಿ ತನ್ನ ಎಲ್ಲ ಮಾಹಿತಿ ಇದ್ದರೂ ಫೋಟೋ ಮಾತ್ರ ನಾಯಿಯದ್ದಾಗಿತ್ತು. ಇದನ್ನು ಕೂಡಲೇ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದು, ಶನಿವಾರ ಸಂಜೆ ಹೊಸ ಪ್ರವೇಶಪತ್ರವನ್ನು ಮಹತೋಗೆ ನೀಡಲಾಗಿದೆ.
ಫೋಟೋ ಬದಲಾಗಿರುವ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳು ಆದೇಶಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


