ಚೀನಾಗೆ ಗೋಮಾಂಸ ರಫ್ತಿಗೆ ಸರ್ಕಾರ ಉತ್ಸುಕ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ರ್ಕಾರ ಒಂದೆಡೆ ದೇಶಾದ್ಯಂತ ಗೋಮಾಂಸ ನಿಷೇಧದ ಬಗ್ಗೆ ಮಾತನಾಡುತ್ತಿದ್ದರೆ, ಇನ್ನೊಂದೆಡೆ ಚೀನಾಗೆ...

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ರ್ಕಾರ ಒಂದೆಡೆ ದೇಶಾದ್ಯಂತ ಗೋಮಾಂಸ ನಿಷೇಧದ ಬಗ್ಗೆ ಮಾತನಾಡುತ್ತಿದ್ದರೆ, ಇನ್ನೊಂದೆಡೆ ಚೀನಾಗೆ ಗೋಮಾಂಸ ರಫ್ತಿ ಮಾಡಲು ಹರಸಾಹಸ ಪಡುತ್ತಿದೆ. ಮೋದಿ ಅವರ ಚೀನಾ ಪ್ರವಾಸದ ಫಲಶ್ರುತಿಯೆಂಬಂತೆ, ಭಾರತದಿಂದ ರಫ್ತಾಗುವ ಗೊಮಾಂಸವನ್ನು ಸ್ವೀಕರಿಸಲು ಚೀನಾ ಮುಂದಾಗಿದೆ. ಈ ಬಗೆಗಿನ ಒಪ್ಪಂದಕ್ಕೆ ಸಹಿ ಹಾಕಿದ ಎರಡು ವರ್ಷಗಳ ಬಳಿಕ ಅಂದರೆ ಕಳೆದ ತಿಂಗಳು ಚೀನಾವು ಗೋಮಾಂಸ ರಫ್ತಿ ಹಾದಿಯನ್ನು ಸುಗಮಗೊಳಿಸಿದೆ. ದ್ವಿಪಕ್ಷೀಯ ಸಂಬಂಧದಲ್ಲಿದ್ದ ಅಸಮತೋಲನ ಕಡಿಮೆ ಮಾಡುವ ನಿಟ್ಟಿನಲ್ಲಿ ಭಾರತ ಮುಂದಡಿಯಿಟ್ಟಿತ್ತು. ಅದರಂತೆ, ಗೋಮಾಂಸ, ದಾಳಿಂಬೆ, ಬಾಸುಮತಿಯೇರ ಅಕ್ಕಿ ಮತ್ತು ಓಕ್ರಾವನ್ನು ಭಾರತದಿಂದ ಖರೀದಿಸಲು ನಾ ನಿರ್ಧರಿಸಿದೆ. ಮುಂದಿನ ತಿಂಗಳು ಚೀನಾದ ತಪಾಸಣಾ ತಂಡ ಭಾರತಕ್ಕೆ ಆಗಮಿಸಿ, ಇಲ್ಲಿನ ಮಾಂಸದ ಘಟಕಗಳನ್ನು ಪರಿಶೀಲಿಸಲಿದೆ. ಕಾಲುಬಾಯಿ ರೋಗದ ಹಿನ್ನೆಲೆಯಲ್ಲಿ ಭಾರತದ ಮಾಂಸಕ್ಕೆ ನಿರ್ಬಂಧ ವಿಧಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


