ದೇಶ

ಫ್ರಾನ್ಸ್ ನಲ್ಲಿ ಗ್ಯಾಸ್ ಕಾರ್ಖಾನೆ ಮೇಲೆ ಉಗ್ರರ ದಾಳಿ: ಓರ್ವ ಸಾವು, ಹಲವರಿಗೆ ಗಾಯ

ಗ್ಯಾಸ್ ಕಾರ್ಖಾನೆಯೊಂದರ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ ಓರ್ವ ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ಪೂರ್ವ.....

ಫ್ರಾನ್ಸ್ ನಲ್ಲಿ ಗ್ಯಾಸ್ ಕಾರ್ಖಾನೆ ಮೇಲೆ ಉಗ್ರರ ದಾಳಿ: ಓರ್ವ ಸಾವು, ಹಲವರಿಗೆ ಗಾಯ
ಘಟನೆ ನಡೆದ ಫ್ರಾನ್ಸ್ ಕಾರ್ಖಾನೆ
Published On :

ಫ್ರಾನ್ಸ್: ಗ್ಯಾಸ್ ಫ್ಯಾಕ್ಟರಿ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ ಓರ್ವ ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ಪೂರ್ವ ಫ್ರಾನ್ಸ್ ನ ಸೈಂಟ್ ಕ್ವಿಟಿನ್ ಫಲ್ಲವೀಯರ್ ಫ್ಯಾಕ್ಟರಿಯಲ್ಲಿ ಸಂಭವಿಸಿದೆ. ಕಾರಿನಲ್ಲಿ ಗೇಟ್ ಮುರಿದು ಕಾರ್ಖಾನೆ ಒಳಗೆ ನುಗ್ಗಿದ  ಉಗ್ರರು ಕಡಿಮೆ ಪ್ರಮಾಣದ ಸ್ಪೋಟಕಗಳನ್ನು ಇಟ್ಟು ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾರ್ಖಾನೆ ಪಕ್ಕದಲ್ಲಿ ದೇಹದಿಂದ ಬೇರೆಯಾಗಿರುವ ವ್ಯಕ್ತಿಯ ಶಿರವನ್ನು ಇಡಲಾಗಿದೆ. ಅದರ ಪಕ್ಕದಲ್ಲಿ ಅರೇಬಿಕ್ ಭಾಷೆಯಲ್ಲಿ ಬರೆದಿರುವ ಧ್ವಜ ಇಟ್ಟು  ಭಯೋತ್ಪಾದಕರು ಕಾಲ್ಕಿತ್ತಿದ್ದಾರೆ ಎಂದು  ಪ್ರಾಥಮಿಕ ಹಂತದ ತನಿಖೆ ವರದಿ ನೀಡಿದೆ. ಇನ್ನು ಈ ಸಂಬಂಧ ಓರ್ವ ಶಂಕಿತ ಉಗ್ರನ್ನು ಬಂಧಿಸಿರುವ ಭಯೋತ್ಪಾದಕ ನಿಗ್ರಹ ದಳ ಆತನನ್ನು ವಿಚಾರಣೆಗೆ  ಒಳಪಡಿಸಿದೆ. ಪ್ಯಾರಿಸ್ ನಿಂದ 400 ಕಿಮೀ ದೂರದಲ್ಲಿರುವ  ಅಮೆರಿಕಾ ಮೂಲಕ ಗ್ಯಾಸ್ ಫ್ಯಾಕ್ಟರಿ ಇದಾಗಿದೆ.

ಘಟನೆ ಖಂಡಿಸಿರುವ ಫ್ರಾನ್ಸ್ ಪ್ರಧಾನಿ ಸೂಕ್ಷ್ಮ ಸ್ಥಳಗಳಿಗೆ ಬಿಗಿ ಭದ್ರತೆ ಕಲ್ಪಿಸುವಂತೆ ಸೂಚಿಸಿದ್ದಾರೆ. ಆರು ತಿಂಗಳ ಹಿಂದೆ  ಅಂದರೆ ಜನವರಿ ತಿಂಗಳಿನಲ್ಲಿ ಫ್ರಾನ್ಸ್ ನ ಚಾರ್ಲಿ ಹೆಬ್ಡೋ ಪತ್ರಿಕೆ ಕಚೇರಿ ಮೇಲೆ ದಾಳಿ ನಡೆಸಲಾಗಿತ್ತು. ಈ ಘಟನೆಯಲ್ಲಿ 17 ಮಂದಿ ಸಾವನ್ನಪ್ಪಿ 12 ಮಂದಿ ಗಾಯಗೊಂಡಿದ್ದರು.



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.