ಮುಳ್ಳುಹಂದಿಯನ್ನು ನುಂಗಿ, ಅರಗಿಸಿಕೊಳ್ಳಲಾಗದೆ ಹೆಬ್ಬಾವು ಸಾವು!
ಮುಳ್ಳು ಹಂದಿಯನ್ನು ನುಂಗಿ ಅರಗಿಸಿಕೊಳ್ಳಲು ಸಾಧ್ಯವಾಗದೆ 13 ಅಡಿ ಉದ್ದ ಹೆಬ್ಬಾವು ಸತ್ತ ಘಟನೆ ಜೊಹಾನ್ಸ್‌ಬರ್ಗ್ ನಲ್ಲಿ ನಡೆದಿದೆ...

ಜೊಹಾನ್ಸ್‌ಬರ್ಗ್: ಮುಳ್ಳು ಹಂದಿಯನ್ನು ನುಂಗಿ ಅರಗಿಸಿಕೊಳ್ಳಲು ಸಾಧ್ಯವಾಗದೆ 13 ಅಡಿ ಉದ್ದ ಹೆಬ್ಬಾವು ಸತ್ತ ಘಟನೆ ಜೊಹಾನ್ಸ್‌ಬರ್ಗ್ ನಲ್ಲಿ ನಡೆದಿದೆ.
ದಕ್ಷಿಣ ಆಫ್ರಿಕದ ಪೋರ್ಟ್ ಶೆಪ್‌ಸ್ಟೋನ್ ಸಮೀಪದ ಲೇಕ್ ಎಲಾಂಡ್ ಗೇಮ್ ರಿಸರ್ವ್ ಎಂಬಲ್ಲಿ ಹದಿಮೂರು ಅಡಿ ಉದ್ದದ ಹೆಬ್ಬಾವು ರಸ್ತೆ ಬದಿಯಲ್ಲಿ ಹೊಟ್ಟೆ ಉಬ್ಬಿಕೊಂಡ ಸ್ಥಿತಿಯಲ್ಲಿ ಸತ್ತು ಬಿದ್ದಿತ್ತು.
ಯಾವುದೋ ಪ್ರಾಣಿಯನ್ನು ತಿಂದು ಅರಗಿಸಿಕೊಳ್ಳಲಾರದೆ ಹೆಬ್ಬಾವು ಸತ್ತಿರುವುದನ್ನು ಜನರು ಸಹಜವಾಗಿಯೇ ಶಂಕಿಸಿದರು.ಆಮೇಲೆ ಹೆಬ್ಟಾವಿನ ಹೊಟ್ಟೆಯನ್ನು ಸೀಳಿ ನೋಡಿದಾಗ ಅದರೊಳಗೆ ಸತ್ತಿರುವ, ಭಾರೀ ದೊಡ್ಡ ಗಾತ್ರದ ಮುಳ್ಳು ಹಂದಿ ಕಂಡು ಬಂತು. ಮುಳ್ಳು ಹಂದಿಯ ಹರಿತವಾದ ಡಜನ್‌ಗಟ್ಟಲೆ ಮುಳ್ಳುಗಳು ಹೆಬ್ಬಾವಿನ ಹೊಟ್ಟೆ ಒಳಭಾಗದಲ್ಲಿ ನಾಟಿಕೊಂಡದ್ದು ಇದು ಹೆಬ್ಬಾವಿನ ಸಾವಿಗೆ ಕಾರಣವಾಗಿತ್ತು.
ಹೆಬ್ಬಾವಿನ ಸಾವಿನ ನಿಖರ ಕಾರಣ ನಮಗೆ ಗೊತ್ತಾಗಿಲ್ಲ. ಅದು ನುಂಗಿರುವ ಮುಳ್ಳುಹಂದಿಯ ಡಜನ್‌ಗಟ್ಟಲೆ ಮುಳ್ಳುಗಳು ಜೀರ್ಣಾಂಗದಲ್ಲಿ ಬಾಣಗಳಂತೆ ಚುಚ್ಚಿಕೊಂಡಿರುವುದು ಕಂಡು ಬರುತ್ತದೆ. ಹೆಬ್ಬಾವು ಪ್ರಾಣ ಉಳಿಸಿಕೊಳ್ಳುವ ಸಂಕಟದಲ್ಲಿ ಕಲ್ಲು ಬಂಡೆಯ ಮೇಲೆ ಉರುಳಿ ಬಿದ್ದಿದೆ. ಪರಿಣಾಮವಾಗಿ ಅದರ ಹೊಟ್ಟೆಯೊಳಗಿನ ಹರಿತವಾದ ಮುಳ್ಳುಗಳು ಇನ್ನಷ್ಟು ಆಳಕ್ಕೆ ನಾಟಿಕೊಂಡಿರಬೇಕು. ಹಾಗಾಗಿ ಹೆಬ್ಬಾವು ಸತ್ತಿರಬಹುದು ಎಂದು ಲೇಕ್ ಎಲಾಂಡ್ ಗೇಮ್ ರಿಸರ್ವ್‌ನ ಜನರಲ್ ಮ್ಯಾನೇಜರ್ ಜೆನ್ನಿಫರ್ ಫುಲ್ಲರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


