ಹೈದರಾಬಾದ್ ಕಾನೂನು ವಿವಿ ಪ್ರಮಾಣ ಪತ್ರದಲ್ಲಿ Mr, Ms ಜತೆ MXಗೂ ಜಾಗ!
ಎನ್‍ಎಎಲ್‍ಎಸ್‍ಎಆರ್ ಕಾನೂನು ವಿಶ್ವವಿದ್ಯಾಲಯ ದೇಶದಲ್ಲೇ ಮೊದಲ ಬಾರಿಗೆ ತನ್ನ ಶೈಕ್ಷಣಿಕ ಪ್ರಮಾಣ ಪತ್ರದಲ್ಲಿ ಲಿಂಗ ತಾಟಸ್ಥ್ಯ ನೀತಿ ಅನುಸರಿಸಿದೆ. ಈ ಮೂಲಕ ತೃತೀಯ ಲಿಂಗಿಗಳಿಗೆ ಅಥವಾ ನಿರ್ದಿಷ್ಟ ಲಿಂಗದ ಜತೆಗೆ ಗುರುತಿಸಿಕೊಳ್ಳಲು ಬಯಸದವರಿಗೆ ‘Mx’ ಎಂಬ ಹೊಸ ಪದವನ್ನು...

ಹೈದರಾಬಾದ್: ಎನ್‍ಎಎಲ್‍ಎಸ್‍ಎಆರ್ ಕಾನೂನು ವಿಶ್ವವಿದ್ಯಾಲಯ ದೇಶದಲ್ಲೇ ಮೊದಲ ಬಾರಿಗೆ ತನ್ನ ಶೈಕ್ಷಣಿಕ ಪ್ರಮಾಣ ಪತ್ರದಲ್ಲಿ ಲಿಂಗ ತಾಟಸ್ಥ್ಯ ನೀತಿ ಅನುಸರಿಸಿದೆ. ಈ ಮೂಲಕ ತೃತೀಯ ಲಿಂಗಿಗಳಿಗೆ ಅಥವಾ ನಿರ್ದಿಷ್ಟ ಲಿಂಗದ ಜತೆಗೆ ಗುರುತಿಸಿಕೊಳ್ಳಲು ಬಯಸದವರಿಗೆ ‘Mx’ ಎಂಬ ಹೊಸ ಪದವನ್ನು ಪರಿಚಯಿಸಿದೆ.
ಸಾಮಾನ್ಯವಾಗಿ ಪ್ರಮಾಣಪತ್ರ ನೀಡುವಾಗ ವ್ಯಕ್ತಿಯ ಹೆಸರಿನ ಮುಂದೆ ‘Mr’or ‘Ms’ ಎಂದು ಸಂಬೋಧಿಸಲಾಗುತ್ತದೆ. ಆದರೆ, ಎನ್‍ಎಎಲ್‍ಎಸ್‍ಎಆರ್ ವಿವಿ ವಿದ್ಯಾರ್ಥಿಯೊಬ್ಬರಿಗೆ ನೀಡಿದ ಪ್ರಮಾಣ ಪತ್ರದಲ್ಲಿ ‘Mx’ ಎಂದು ಸಂಬೋಧಿಸಲಾಗಿದೆ. ಈ ರೀತಿಯ ಪ್ರಮಾಣಪತ್ರವನ್ನು ವಿದ್ಯಾರ್ಥಿಯೊಬ್ಬರ ಮನವಿಯಂತೆ ನೀಡಲಾಗಿದೆ. ಆದರೆ, ವಿವಿಯ ಈ ಕ್ರಮ ಹೊಸ ವಿವಾದ ಹುಟ್ಟುಹಾಕಿದೆ.
ಈ ರೀತಿಯ ಮಹತ್ವದ ಬದಲಾವಣೆಗಾಗಿ ವಿವಿಯು ಸಂಬಂಧಿಸಿದವರ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಈ ರೀತಿಯ ಪ್ರಮಾಣ ಪತ್ರ ನೀಡುವ ವಿಚಾರದಲ್ಲಿ ವಿವಿಯು ಆ ರೀತಿ ಮಾಡೇ ಇಲ್ಲ ಎಂದು ಹೇಳಲಾಗಿದೆ.
ಈ ಪ್ರಮಾಣಪತ್ರವನ್ನು ‘Mx’ ಅನಿಂದಿತಾ ಮುಖರ್ಜಿಗಾಗಿ ನೀಡಲಾಗಿದೆ. ಸಾಮಾನ್ಯವಾಗಿ ಪದವಿ ಪ್ರಮಾಣಪತ್ರಕ್ಕೆ ಹೈದರಾಬಾದ್ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಗಳೇ ಸಹಿಹಾಕುತ್ತಾರೆ. ಯಾಕೆಂದರೆ ಈ ವಿವಿಯ ಕುಲಪತಿಗಳು ಅವರೇ ಆಗಿದ್ದಾರೆ. ವಿವಿ ಈ ನಿರ್ಧಾರ ಕೈಗೊಳ್ಳುವ ಮೊದಲು ಹೈಕೋರ್ಟ್ ನ್ಯಾಯಾಧೀಶರು ಮತ್ತು ವಿವಿಧ ವಿವಿಯ ಕುಲಪತಿ ಗಳನ್ನೊಳಗೊಂಡ ಅಕಾಡೆಮಿಕ್ ಕೌನ್ಸಿಲ್‍ನಲ್ಲಿ ಚರ್ಚಿಸಬೇಕಿತ್ತು ಎಂದು ಹೆಸರೇಳಲಿ ಚ್ಛಿಸದ ವಿವಿಯ ಉಪನ್ಯಾಸಕರು ಅಭಿಪ್ರಾಯಪಟ್ಟಿದ್ದಾರೆ.
ಲಿಂಗ ತಾಟಸ್ಥ್ಯ ನೀತಿ ಅನುಸರಿಸುವ ಮೊದಲು ಚರ್ಚೆಯಾಗಬೇಕಿತ್ತು. ಯಾಕೆಂದರೆ ಇದು ದೇಶದ ಮೊದಲ ಲಿಂಗ ತಾಟಸ್ಥ್ಯ ಪ್ರಮಾಣಪತ್ರ ಎಂದು ಉಪನ್ಯಾಸಕರೊಬ್ಬರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


