ವಿಚ್ಛೇದಿತ ಪತ್ನಿಗೆ 'ಅರ್ಧ' ಪಾಲು ನೀಡಿದ ಪತಿರಾಯ!
ಪತ್ನಿಯನ್ನು `ಅರ್ಧಾಂಗಿ' ಎನ್ನುತ್ತಾರೆ. ಜರ್ಮನಿಯ ಅಸಾಮಿಯೊಬ್ಬ ಈ ಪದವನ್ನು ಸರಿಯಾಗಿಯೇ ಬಳಸಿಕೊಂಡಿದ್ದಾನೆ. ಅದು ಹೇಗೆಂದು ಹೇಳಿದರೆ ಎಂಥವರೂ ದಂಗಾಗುತ್ತಾರೆ. ವಿಚ್ಛೇದನ ಪಡೆಯುವಾಗ ಪತ್ನಿಗೆ ತನ್ನ ಆಸ್ತಿಯ ಅರ್ಧಭಾಗವನ್ನು ಕೊಡುವುದಕ್ಕೆ...

ಬರ್ಲಿನ್: ಪತ್ನಿಯನ್ನು `ಅರ್ಧಾಂಗಿ' ಎನ್ನುತ್ತಾರೆ. ಜರ್ಮನಿಯ ಅಸಾಮಿಯೊಬ್ಬ ಈ ಪದವನ್ನು ಸರಿಯಾಗಿಯೇ ಬಳಸಿಕೊಂಡಿದ್ದಾನೆ. ಅದು ಹೇಗೆಂದು ಹೇಳಿದರೆ ಎಂಥವರೂ ದಂಗಾಗುತ್ತಾರೆ. ವಿಚ್ಛೇದನ ಪಡೆಯುವಾಗ ಪತ್ನಿಗೆ ತನ್ನ ಆಸ್ತಿಯ ಅರ್ಧಭಾಗವನ್ನು ಕೊಡುವುದಕ್ಕೆ ಡೆರ್ ಜೂಲಿ ಯಾವುದೇ ತಕರಾರೆತ್ತದೇ ಒಪ್ಪಿಕೊಂಡಿದ್ದ. ಆದರೆ, ಆಸ್ತಿ ಹಂಚಿಕೆ ಮಾಡುವಾಗ ಮಾತ್ರ `ವಿಚ್ಛೇದನ' ಎಂಬ ಪದವನ್ನುಹೊಸ ಮಟ್ಟಕ್ಕೇರಿಸಿ ನೈಜ `ಛೇದನ'ಕ್ಕೆ ಕೈಹಾಕಿದ್ದಾನೆ.
ಅದು ಹೇಗೆ ಗೊತ್ತಾ? ತನ್ನಲ್ಲಿರುವ ಎಲ್ಲ ವಸ್ತುಗಳನ್ನೂ ಸರಿಯಾಗಿ ಅರ್ಧ ಕತ್ತರಿಸಿ, ಅದನ್ನು ಪತ್ನಿಗೆ ಕೊಟ್ಟಿದ್ದಾನೆ ಬರ್ಲಿನ್ ನಗರದ ನಿವಾಸಿ ಡೆರ್ ಜೂಲಿ ಎಂಬಾತನೇ ಈ ಮಹಾನುಭಾವನಾಗಿದ್ದು, ಟೆಡ್ಡಿ ಬೇರ್, ಸೋಫಾ, ಲ್ಯಾಪ್‍ಟಾಪ್, ಫೋನ್, ಕಾರು, ಸೈಕಲ್, ಐಫೋನ್, ಮಂಚ, ಹಾಸಿಗೆ, ಡಿವಿಡಿ ಪ್ಲೇಯರ್, ಕುರ್ಚಿಗಳು, ಲೆಟರ್‍ಬಾಕ್ಸ್, ಕಪಾಟು ಸೇರಿದಂತೆ ಎಲ್ಲ ವಸ್ತುಗಳನ್ನೂ ಅಕ್ಷರಶಃ ಎರಡಾಗಿ ಹೋಳು ಮಾಡಿದ್ದಾನೆ ಕೊಟ್ಟಿದ್ದಾನೆ ಈ ಪುಣ್ಯಾತ್ಮ.

ಅಷ್ಟೇ ಅಲ್ಲ, ಇವುಗಳನ್ನು ಕತ್ತರಿಸುವ ವಿಡಿಯೋವನ್ನು ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಿದ್ದಾನೆ. ಜತೆಗೆ, 12 ವರ್ಷಗಳ ನಿನ್ನೊಂದಿಗಿನ ಸಂಸಾರ ನಿಜಕ್ಕೂ ಚಿರಸ್ಮರಣೀಯ. ನೀನು ನನ್ನ ಅರ್ಧಾಂಗಿ ಆದ್ದರಿಂದ ನನ್ನಲ್ಲಿರುವ ಅರ್ಧ ಆಸ್ತಿ ನಿನಗೆ ಸೇರತಕ್ಕದ್ದು ಎಂದು ಪತ್ನಿಗೆ ಸಂದೇಶ ರವಾನಿಸಿದ್ದಾರೆ.ಅಲ್ಲದೆ, ತನ್ನ ಪಾಲಿನ ಅರ್ಧರ್ಧ ವಸ್ತುಗಳನ್ನೆಲ್ಲ ಇಬೇಯಲ್ಲಿ ಮಾರಾಟಕ್ಕಿಟ್ಟಿದ್ದಾನೆ. ಪಾಪ, ಪತಿಯಿಂದ `ಅರ್ಧ' ಆಸ್ತಿಯನ್ನು ಪಡೆದ ಪತ್ನಿಯ ಪಾಡೇನಾಯಿತು ಎಂಬುದು ಮಾತ್ರ ತಿಳಿದುಬಂದಿಲ್ಲ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


