ದೇಶ

ಹಳೆ ನೋಟುಗಳ ವಿನಿಮಯಕ್ಕೆ ಇನ್ನು 10 ದಿನ ಬಾಕಿ

ಹಳೆ ನೋಟುಗಳನ್ನು ಬ್ಯಾಂಕಿಗೆ ನೀಡಿ ಹೊಸ ನೋಟು ಪಡೆಯಲು ಈ ತಿಂಗಳ 30 ಕಡೆಯ ದಿನವಾಗಿದೆ...

ಹಳೆ ನೋಟುಗಳ ವಿನಿಮಯಕ್ಕೆ ಇನ್ನು 10 ದಿನ ಬಾಕಿ
2005ರ ಮೊದಲ ನೋಟುಗಳನ್ನು ಹತ್ತು ದಿನಗಳೊಳಗೆ ವಿನಿಮಯ ಮಾಡಿಕೊಳ್ಳುವಂತೆ ಆರ್ ಬಿಐ ಸೂಚಿಸಿದೆ
Published On :

ನವದೆಹಲಿ: ಐನ್ನೂರು, ಸಾವಿರ ಸೇರಿದಂತೆ 2005ನೇ ಇಸವಿಗೆ ಮೊದಲು ಮುದ್ರಣಗೊಂಡಿದ್ದ ನೋಟುಗಳ ವಿನಿಮಯಕ್ಕೆ ಇನ್ನು ಹತ್ತು ದಿನ ಮಾತ್ರ ಅವಕಾಶವಿದೆ. ಹಳೆ ನೋಟುಗಳನ್ನು ಬ್ಯಾಂಕಿಗೆ ನೀಡಿ ಹೊಸ ನೋಟು ಪಡೆಯಲು ಈ ತಿಂಗಳ 30 ಕಡೆಯ ದಿನವಾಗಿದೆ.

2005ಕ್ಕೆ ಮುಂಚಿನ ಕರೆನ್ಸಿಗಳ ಚಲಾವಣೆಯನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆಗೆ ಸಾರ್ವಜನಿಕರ ಸಹಕಾರ ಕೋರಿರುವ ರಿಸರ್ವ್ ಬ್ಯಾಂಕ್, ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯಲ್ಲಿ ಹಳೆ ನೋಟುಗಳನ್ನು ಠೇವಣಿಯಿರಿಸಿ ಅಥವಾ ತಮ್ಮ ಹತ್ತಿರದ ಅನುಕೂಲಕರ ಬ್ಯಾಂಕ್ ನಲ್ಲಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವಂತೆ ಕೋರಿದೆ.

ಹಳೆಯ ನೋಟುಗಳೆಲ್ಲವೂ ಕಾನೂನು ರೀತ್ಯಾ ಬಿಡುಗಡೆಗೊಂಡಿದ್ದು, ಗ್ರಾಹಕರು ತಾವು ನೀಡಿದ ನೋಟಿಗೆ ಅಷ್ಟೇ ಬೆಲೆಯ ಹೊಸ ನೋಟುಗಳನ್ನು ಪಡೆಯಬಹುದು.
ಹಳೆ ನೋಟುಗಳನ್ನು  ಸುಲಭವಾಗಿ ಕಂಡುಹಿಡಿಯಬಹುದು. ನೋಟುಗಳ ಹಿಂಬದಿಯಲ್ಲಿ ಯಾವ ವರ್ಷದಲ್ಲಿ ಮುದ್ರಣವಾಗಿದ್ದು ಎಂಬುದಿರುವುದಿಲ್ಲ. 2005ರ ನಂತರ ಪ್ರಕಟಗೊಂಡ ನೋಟುಗಳ ಹಿಂಬದಿಯ ಕೆಳಭಾಗದಲ್ಲಿ ಮುದ್ರಣಗೊಂಡ ವರ್ಷ ಪ್ರಕಟಗೊಂಡಿರುತ್ತದೆ.

 ನಕಲಿ ನೋಟುಗಳ ಹಾವಳಿ ತಪ್ಪಿಸಲು ಭದ್ರತೆ ದೃಷ್ಠಿಯಿಂದ ಆರ್ ಬಿಐ ಈ ಕ್ರಮ ಕೈಗೊಂಡಿದೆ. ಆರ್ ಬಿಐಯ ಸ್ಥಳೀಯ ಕಚೇರಿಯಲ್ಲಿ ಜನವರಿಯವರೆಗೆ  164 ಕೋಟಿ ಹಳೆ ನೋಟುಗಳನ್ನು  ಹರಿದು ಹಾಕಲಾಗಿದೆ.

ಚಲಾವಣೆಯಿಂದ ತೆಗೆದುಹಾಕಿರುವ ನೋಟುಗಳ ಬೆಲೆ ಮಾರ್ಚ್ ವರೆಗೆ  21 ಸಾವಿರದ 750 ರೂಪಾಯಿಗಳಷ್ಟಾಗಿದೆ ಎಂದು ಆರ್ ಬಿಐ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.