ದೇಶ

ಶಾರದಾ ಚಿಟ್ ಫಂಡ್ ಹಗರಣ: ಜಾರಿ ನಿರ್ದೇಶನಾಲಯಕ್ಕೆ ಹಣ ವಾಪಸ್ ಮಾಡಿದ ಮಿಥುನ್ ಚಕ್ರವರ್ತಿ

ಶಾರದಾ ಗ್ರೂಪ್ ನಿಂದ ಪಡೆದಿದ್ದ ಹಣವನ್ನು ತೃಣಮೂಲ ಕಾಂಗ್ರೆಸ್ ಸಂಸದ ಹಾಗೂ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಜಾರಿ ನಿರ್ದೇಶನಾಲಯಕ್ಕೆ ಹಿಂದಿರುಗಿಸಿದ್ದಾರೆ.

ಶಾರದಾ ಚಿಟ್ ಫಂಡ್ ಹಗರಣ: ಜಾರಿ ನಿರ್ದೇಶನಾಲಯಕ್ಕೆ ಹಣ ವಾಪಸ್ ಮಾಡಿದ ಮಿಥುನ್ ಚಕ್ರವರ್ತಿ
ಮಿಥುನ್ ಚಕ್ರವರ್ತಿ
Published On :

ಕೊಲ್ಕೋತಾ: ಶಾರದಾ ಗ್ರೂಪ್ ನಿಂದ ಪಡೆದಿದ್ದ ಹಣವನ್ನು ತೃಣಮೂಲ ಕಾಂಗ್ರೆಸ್ ಸಂಸದ ಹಾಗೂ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಜಾರಿ ನಿರ್ದೇಶನಾಲಯಕ್ಕೆ ಹಿಂದಿರುಗಿಸಿದ್ದಾರೆ.

ಮಿಥುನ್ ಚಕ್ರವರ್ತಿ ಪರ ವಕೀಲ 1.19 ಕೋಟಿ ರೂ ಹಣವನ್ನು ಕೊಲ್ಕೋತಾದಲ್ಲಿರುವ ಜಾರಿ ನಿರ್ದೇಶಾನಲಯದ ಕಚೇರಿಗೆ ಡೆಪಾಸಿಟ್ ಮಾಡಿದ್ದಾರೆ.ಬಹುಕೋಟಿ ಶಾರದಾ ಚಿಟ್ ಫಂಡ್ ಬಗ್ಗೆ ಪ್ರಚಾರ ನೀಡಲು ಟಿವಿ ಶೋನಲ್ಲಿ ನಟಿಸಿದ್ದರು. ಇದಕ್ಕಾಗಿ ಅವರು ಹಣ ಪಡೆದಿದ್ದರು. ಇಂದು ಆ ಹಣವನ್ನು ಜಾರಿ ನಿರ್ದೇಶನಾಲಯಕ್ಕೆ ವಾಪಸ್ ನೀಡಿದ್ದಾರೆ.

ಕಳೆದ ತಿಂಗಳು ಇಡಿ ಅಧಿಕಾರಿಗಳು ಮಿಥುನ್ ಚಕ್ರವರ್ತಿ ಅವರನ್ನು ವಿಚಾರಣೆಗೊಳಪಡಿಸಿದ್ದರು. ಈ ವೇಳೆ ತಮಗೂ ಶಾರದಾ ಗ್ರೂಪ್ಸ್ ಗೂ ಯಾವುದೇ ಸಂಬಂಧವಿಲ್ಲ. ವೃತ್ತಿಪರವಾಗಿ ತಾನು ಕೇವಲ ಪ್ರಚಾರಕನಾಗಿ ನಟಿಸಿದ್ದೆ. ಯಾರಿಗೂ ವಂಚನೆ ಮಾಡುವ ಉದ್ದೇಶವಿರಲಿಲ್ಲ ಎಂದಿದ್ದ ಅವರು ಶಾರದಾ ಚಿಟ್ ಕಂಪನಿಯಿಂದ ಪಡೆದು ಕೊಂಡಿದ್ದ ಹಣವನ್ನು ವಾಪಸ್ ನೀಡುವುದಾಗಿ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.