ಯಾವುದೇ ರೀತಿ ಫೋರ್ಜರಿ, ವಂಚನೆ ಮಾಡಿಲ್ಲ: ಲತಾ ರಜನಿಕಾಂತ್ ಸ್ಪಷ್ಟನೆ
ಕೊಚಾಡಿಯನ್ ಚಿತ್ರದ ಸಂಬಂದ ತಮ್ಮ ವಿರುದ್ಧ ಮಾಡಿರುವ ಫೋರ್ಜರಿ ಮತ್ತು ವಂಚನೆ ಆರೋಪವನ್ನು ಸೂಪರ್ ಸ್ಟಾರ್ ರಜನಿಕಾಂತ್ ಪತ್ನಿ ಲತಾ ರಜನಿಕಾಂತ್ ತಳ್ಳಿ ಹಾಕಿದ್ದಾರೆ...

ಚೆನ್ನೈ: ಕೊಚಾಡಿಯನ್ ಚಿತ್ರದ ಸಂಬಂದ ತಮ್ಮ ವಿರುದ್ಧ ಮಾಡಿರುವ ಫೋರ್ಜರಿ ಮತ್ತು ವಂಚನೆ ಆರೋಪವನ್ನು ಸೂಪರ್ ಸ್ಟಾರ್ ರಜನಿಕಾಂತ್ ಪತ್ನಿ ಲತಾ ರಜನಿಕಾಂತ್ ತಳ್ಳಿ ಹಾಕಿದ್ದಾರೆ.
ಕೊಚಾಡಿಯನ್ ಚಿತ್ರದ ಸಂಬಂಧ ಮೊಕದ್ದಮೆ ಹಿನ್ನೆಲೆ ಲತಾ ರಜನಿಕಾಂತ್ ಅವರು ನಾನು ಯಾವುದೇ ರೀತಿ ಫೋರ್ಜರಿ, ವಂಚನೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಆ್ಯಡ್ ಬ್ಯೂರೋ ಅಡ್ವರ್ಟೈಸಿಂಗ್ ಕಂಪನಿ ಎಂಡಿ ಅಬೀರ್ ಚಂದ್ ನಹಾರ್, ಚಂಚಲ್ ನಹಾರ್ ನನ್ನ ವಿರುದ್ಧ ಷಡ್ಯಂತ್ರ ಮಾಡಿ ನನ್ನ ವಿರುದ್ಧ ದುರುದ್ದೇಶಪೂರಿತ ಸುಳ್ಳು ದೂರು ದಾಖಲಿಸಿದ್ದಾರೆ. ಹೀಗಾಗಿ ಈ ಇಬ್ಬರ ವಿರುದ್ಧ ಕಾನೂನು ಕ್ರಮಕ್ಕೆ ಮೊರೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ.
ಕೊಚಾಡಿಯನ್ ಚಿತ್ರ ಸಂಬಂಧ ನಕಲಿ ದಾಖಲೆ ಸಲ್ಲಿಸಿದ ಆರೋಪದಡಿಯಲ್ಲಿ ರಜನಿಕಾಂತ್ ಪತ್ನಿ ಲತಾ ರಜನಿಕಾಂತ್ ವಿರುದ್ಧ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ನಿನ್ನೆ ದೂರು ದಾಖಲಾಗಿತ್ತು.
2014 ಮೇ ತಿಂಗಳಿನಲ್ಲಿ ಕೊಚಾಡಿಯನ್ ಸಿನಿಮಾ ರಿಲೀಸ್ ಆಗಿತ್ತು. ಆದರೆ ರಜನಿಯ ಈ ಬಹಿನಿರೀಕ್ಷಿತ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ನೆಲಕಚ್ಚಿತ್ತು. ರಜನಿ ಪುತ್ರಿ ಸೌಂದರ್ಯ ಈ ಸಿನಿಮಾದ ನಿರ್ದೇಶಿಸಿದ್ದು, ರಜನಿಕಾಂತ್, ದೀಪಿಕಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


