ದೇಶ

ನಿವೃತ್ತ ಐಎಎಸ್ ಅಧಿಕಾರಿ ಪತ್ನಿಗೆ ಫೇಸ್ ಬುಕ್ ನಲ್ಲಿ 11 ಲಕ್ಷ ರೂಪಾಯಿ ವಂಚನೆ!

ನಿವೃತ್ತ ಐಎಎಸ್ ಅಧಿಕಾರಿಯ ಪತ್ನಿಯೊಂದಿಗೆ ಫೇಸ್ ಬುಕ್ ನಲ್ಲಿ ಚಾಟ್ ಮಾಡುತ್ತಿದ್ದ ವ್ಯಕ್ತಿ, ಆಕೆಯಿಂದ 11 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿದ್ದಾನೆ.

ನಿವೃತ್ತ ಐಎಎಸ್ ಅಧಿಕಾರಿ ಪತ್ನಿಗೆ ಫೇಸ್ ಬುಕ್ ನಲ್ಲಿ 11 ಲಕ್ಷ ರೂಪಾಯಿ ವಂಚನೆ!
ಫೇಸ್ ಬುಕ್ (ಸಾಂದರ್ಭಿಕ ಚಿತ್ರ)
Published On :

ತಿರುವನಂತಪುರಂ: ನಿವೃತ್ತ ಐಎಎಸ್ ಅಧಿಕಾರಿಯ ಪತ್ನಿಯೊಂದಿಗೆ ಫೇಸ್ ಬುಕ್ ನಲ್ಲಿ ಚಾಟ್ ಮಾಡುತ್ತಿದ್ದ ವ್ಯಕ್ತಿ, ಆಕೆಯಿಂದ 11 ಲಕ್ಷ  ರೂಪಾಯಿ ಪಡೆದು ವಂಚನೆ ಮಾಡಿದ್ದಾನೆ.

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ತನ್ನೊಂದಿಗೆ ಚಾಟ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ತನ್ನಿಂದ 11 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ್ದಾನೆ ಎಂದು ದೆಹಲಿ ಮೂಲದ, ನಿವೃತ್ತ,  ದಿ. ಐಎಎಸ್ ಅಧಿಕಾರಿಯ ಪತ್ನಿ, ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ.

ಮನೆಯಲ್ಲಿ ಒಂಟಿಯಾಗಿರುತ್ತಿದ್ದ ವಂಚನೆಗೊಳಗಾದ ಮಹಿಳೆ, ತನ್ನ ಸ್ನೇಹಿತರೊಂದಿಗೆ ಫೇಸ್ ಬುಕ್  ಸೇರಿದಂತೆ ಹಲವು ಸಾಮಾಜಿಕ  ಜಾಲತಾಣಗಳಲ್ಲಿ ಚಾಟ್ ಮಾಡುತ್ತಿದ್ದರು. ಲಂಡನ್ ಮೂಲದ ಜಾನ್ ಕೆನಡಿ ಎಂದು ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ  ಚಾಟ್ ಮಾಡಲು ಪ್ರಾರಂಭಿಸಿದ್ದಾನೆ, ಒಂದು ವಾರದ  ಗೆಳೆತನದ ಬಳಿಕ  ವಂಚಕ ಆಕೆಗಾಗಿ ಭಾರತದಲ್ಲಿ ಒಂದು ಮನೆಯನ್ನು ಖರೀದಿಸುವುದಾಗಿ  ತಿಳಿಸಿದ್ದಾನೆ. ಪ್ರಾರಂಭದಲ್ಲಿ ವಿದೇಶಿ ಸ್ನೇಹಿತನ ಮನವಿಯನ್ನು ತಿರಸ್ಕರಿಸಿದರಾದರೂ, ಒತ್ತಾಯಿಸಿದ್ದರಿಂದ ಒಪ್ಪಿಕೊಂಡಿದ್ದಾರೆ.

ನಂತರ ತಾನು ಭಾರತಕ್ಕೆ ಬಂದಿದ್ದು ಬೃಹತ್ ಮೊತ್ತದ ಹಣ ತಂದಿರುವುದಕ್ಕಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ತನ್ನನ್ನು ಪೊಲೀಸರು ಬಂಧಿಸಿದ್ದಾರೆ. ಬಿಡುಗಡೆಯಾಗಲು 75 ,000 ರೂಪಾಯಿ ಕಳಿಸುವಂತೆ ನಿವೃತ್ತ ಐಎಎಸ್ ಅಧಿಕಾರಿ ಪತ್ನಿಯನ್ನು ಕೇಳಿದ್ದಾನೆ. ಇದಾದ ಬಳಿಕ ಹಲವು ಬಾರಿ ಹಣ ಪಡೆಯುತ್ತಿದ್ದರಿಂದ, ಅನುಮಾನಗೊಂಡು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಸೈಬರ್ ಕ್ರೈಮ್ ಇಲಾಖೆ ಅಧಿಕಾರಿ ಟಿ.ಶ್ಯಾಮ್ ಲಾಲ್ ತಿಳಿಸಿದ್ದಾರೆ. ವಂಚಕ ಮಹಿಳೆಗೆ ಮೂರು ಬೇರೆ ಬೇರೆ ನಂಬರ್ ಗಳಿಂದ ಕರೆ ಮಾಡಿದ್ದು, ನವದೆಹಲಿಯ ಉತ್ತಂ ನಗರದಿಂದ ನೆಟ್ವರ್ಕ್ ಪತ್ತೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.